ಈ ರಾಶಿಯವರಿಗಿಂದು ಲಭ್ಯವಾಗಲಿದೆ ಶುಭ ಸುದ್ದಿ

Dina Bhavishya June 30
Highlights

ಈ ರಾಶಿಯವರಿಗಿಂದು ಲಭ್ಯವಾಗಲಿದೆ ಶುಭ ಸುದ್ದಿ

ಮೇಷ
ಉದ್ಯೋಗಸ್ಥ ಮಹಿಳೆಯರಿಗೆ ಒಳಿತಾಗಲಿದೆ.
ನಿಮ್ಮ ಮನೆಯ ವಾತಾವರಣದಲ್ಲಿ ಖುಷಿಯ
ಸಂಗತಿಗಳೇ ಹೆಚ್ಚು ಎಲ್ಲವೂ ಶುಭವಾಗಲಿದೆ.

ವೃಷಭ
ಎಂದಿಗೂ ಮನಸ್ತಾಪಕ್ಕೆ ಒಳಗಾಗದಿರಿ. ಶಾಂತ
ಚಿತ್ತರಾಗಿದ್ದು ಕೆಲಸದಲ್ಲಿ ತೊಡಗಿದಲ್ಲಿ ಕ್ಷೇಮ.
ನ್ಯಾಯಕ್ಕಾಗಿ ಹೋರಾಡುವ ಗುಣ ನಿಮ್ಮದು.

ಮಿಥುನ
ದೂರದ ಸಂಬಂಧಿಯ ಒಂದು ಸಣ್ಣ ಮಾತು
ನಿಮ್ಮ ಜೀವನದಲ್ಲಿ ಹುರುಪನ್ನು ತರಲಿದೆ. ಆ
ನಿಟ್ಟಿನಲ್ಲಿ ನೀವು ಯೋಚಿಸಿರಿ ಒಳಿತಾಗಲಿದೆ.

ಕಟಕ
ಹೊಟ್ಟೆಯ ಭಾದೆಯಿದೆ. ವಾತಾವರಣದ
ಪ್ರಭಾವ. ನಿಮ್ಮತನವನ್ನು ಕಳೆದುಕೊಳ್ಳದಿರಿ.
ಗೊಂದಲಗಳಿಂದ ದೂರವಿದ್ದರೆ ಕ್ಷೇಮ.

ಸಿಂಹ
ನೀವು ಕಷ್ಟಪಟ್ಟದ್ದೇ ಮೂರಾಬಟ್ಟೆಯಾಗಿ
ಹಂಚಿ ಹೋಗಿದೆ. ಹೀಗಿದ್ದಾಗ ಬೇರೊಬ್ಬರು
ಪುಕ್ಕಟ್ಟೆ ಕೊಡುವ ಹಣವು ನಿಮಗೆ ಬೇಕಾ?

ಕನ್ಯಾ
ದೂರದ ನೆಂಟರು ನಿಮ್ಮ ಮಗಳಿಗೆ ಒಳ್ಳೆಯ
ವರನನ್ನು ಹುಡುಕಿದ್ದಾರೆ. ಆ ಸಂಬಂಧದ
ಮಾತುಕತೆಯು ಇಂದಾಗುವ ಲಕ್ಷಣವಿದೆ.

ತುಲಾ 
ಹೊಸ ಸ್ನೇಹಿತರ ಪರಿಚಯದಿಂದ ಹೊಸ
ಯೋಜನೆಗೆ ನಾಂದಿಯಾಗಲಿದೆ. ಸಂತೋಷ
ಸಿಗಲಿದೆ. ಆದರೆ ಆತುರದ ನಿರ್ಧಾರ ಬೇಡ.

ವೃಶ್ಚಿಕ
ಮನೆಯ ಹಿರಿಯ ಆರೋಗ್ಯವು ಯಥಾಸ್ಥಿತಿ
ಯಲ್ಲಿದೆ. ಏರುಪೇರು ಆಗದಿದ್ದರೂ ಆಗಾಗ
ಅವರನ್ನು ಹುರುಪಿನಲ್ಲಿರಿಸಿ. ಖುಷಿ ಪಡಿಸಿರಿ. 

ಧನುಸ್ಸು
ನಿಮ್ಮ ಮನಸ್ಸು ಡೋಲಾಯಮಾನವಾಗಿದೆ.
ಸದಾ ಗ್ರಹಗತಿಯನ್ನೇ ಗುಣಿಸಿ ಎಣಿಸುವ
ಗುಣದಲ್ಲೇ ಇರದಿರಿ. ಈ ದಿನ ನಿಮ್ಮದೆ.

ಮಕರ
ಕುಟುಂಬದಲ್ಲಿ ಸಂತಸದ ವಾತಾವರಣ.
ಎಲ್ಲ ಕಡೆಗಳಿಂದ ಹಣದ ಹರಿವು ಬರುತ್ತಿದೆ.
ಅವೆಲ್ಲವೂ ನಿಮ್ಮದೇ ಸಂಪಾದನೆಯಾಗಿದೆ.

ಕುಂಭ
ಹೆಚ್ಚಿನ ಒತ್ತಡಗಳ ಕೆಲಸವು ನಿಮ್ಮಲ್ಲಿ ಹೆದರಿಕೆ
ಮೂಡಿಸಬಹುದು. ನಿಂದೆ ಎದುರಿಸಬೇಕಾಗ
ಬಹುದು. ಧೈರ್ಯಗೆಡದೇ ಮುಂದಡಿ ಇಡಿ.

ಮೀನ
ನಿಮ್ಮ ಸಾಮರ್ಥ್ಯದ ಬಗ್ಗೆ ಸುತ್ತಲಿರುವವರಿಗೆ
ಚೆನ್ನಾಗಿ ತಿಳಿಯಲಿದೆ. ಸ್ವಂತವಾದ ಉದ್ಯೋಗ
ಹೊಂದಿರುವವರಿಗೆ ಪ್ರಗತಿಯೂ ಸಿಗಲಿದೆ.

loader