ಈ ರಾಶಿಯವರಿಗಿಂದು ಶುಭ ಸಮಾಚಾರ

Dina Bhavishya June 28
Highlights

ಈ ರಾಶಿಯವರಿಗಿಂದು ಶುಭ ಸಮಾಚಾರ. ಉಳಿದ ರಾಶಿಗಳ ಫಲ ಹೇಗಿದೆ..?

ಮೇಷ
ಅಮ್ಮನಿಂದ ಶುಭ ಸಮಾಚಾರವು ಸಿಗಲಿದೆ.
ಅಂದುಕೊಂಡ ಕೆಲಸಗಳನ್ನು ಮಾಡಲು ಇದು
ಸುಸಮಯವಾಗಿದೆ. ಖುಷಿಯಲ್ಲಿ ಆರಂಭಿಸಿ.

ವೃಷಭ
ಹೆಚ್ಚಿನ ಒತ್ತಡಗಳ ಕೆಲಸವು ನಿಮ್ಮಲ್ಲಿ ಹೆದರಿಕೆ
ಮೂಡಿಸಬಹುದು. ನಿಂದೆ ಎದುರಿಸಬೇಕಾಗ
ಬಹುದು. ಧೈರ್ಯಗೆಡದೇ ಮುಂದಡಿ ಇಡಿ.

ಮಿಥುನ
ನಿಮಗೆ ಬಣ್ಣದ ಮೋಹ ಹೆಚ್ಚಾಗಲಿದೆ.
ಸೂಟೂ-ಬೂಟೂ ಹಾಕಬೇಕೆಂಬ ಬಯಕೆ
ಆಸೆಯು ಇಂದು ನೆರವೇರುವ ಲಕ್ಷಣವಿದೆ.

ಕಟಕ
ಆಹಾರದ ವ್ಯತ್ಯಾಸದಿಂದ ಇಂದು ನಿಮ್ಮ
ದೇಹಾರೋಗ್ಯವು ಸ್ವಲ್ಪ ಕೆಡಲಿದೆ. ಅದಕ್ಕಾಗಿ
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿರಿ.

ಸಿಂಹ
ಮಾಡಿದ್ದೆಲ್ಲವೂ ಒಳಿತಾಗಲಿದೆ. ಆತುರ ಬೇಡ.
ಆಲೋಚನೆಗಳು ಒಳ್ಳೆಯದಿದ್ದರೆ ಅಷ್ಟೆ ಸಾಕು.
ನಿಮ್ಮ ನಿರ್ಧಾರಗಳನ್ನು ಮೊದಲು ಪರಿಶೀಲಿಸಿ.

ಕನ್ಯಾ
ಇಂದು ಹೊಸ ರುಚಿಯನ್ನು ಸವಿದ ಕಾರಣ
ಆರೋಗ್ಯದಲ್ಲಿ ಏರುಪೇರು. ಗಂಡನಿಗೆ ಹೊಸ
ರುಚಿ ತಿನ್ನಿಸುವ ಭರದಲ್ಲಷ್ಟೇ ಇದು ನಡೆದಿದೆ.

ತುಲಾ 
ಆದಾಯವು ಹೆಚ್ಚಾಗಿದ್ದರೂ ಅದಕ್ಕೆ ತಕ್ಕ
ಖರ್ಚುಗಳೂ ಹೆಚ್ಚಾಗಿವೆ. ಆದರೆ ಇನ್ನು
ಮುಂದೆ ಖರ್ಚುಗಳು ಮೊದಲಿನಷ್ಟಿರೊಲ್ಲ.

ಧನುಸ್ಸು
ದರ್ಜಿಗಳಿಗೆ ಒತ್ತಡದ ಕೆಲಸ. ಮನೆಯಲ್ಲಿನ
ಸಮಸ್ಯೆಗಳಿಗೂ ಸ್ಪಂದಿಸದಂತಹ ಪರಿಸ್ಥಿತಿಗಳು
ಏರ್ಪಟ್ಟಿವೆ. ಆದರೆ ಹಣದ ಹರಿವು ಹೆಚ್ಚಲಿದೆ.

ವೃಶ್ಚಿಕ
ಕೃಷಿಕರ ಕೆಲಸದಲ್ಲಿ ಸ್ವಲ್ಪ ಏರುಪೇರಾದರೂ
ಈ ದಿನ ಖುಷಿಯ ದಿನವಾಗಿದೆ. ಹಳೆಯ
ದವಸಕ್ಕೆ ಉತ್ತಮ ಬೆಲೆ ಬರಲಿರುವ ದಿನವಿದು.

ಮಕರ
ಕೂಡು ಕುಟುಂಬದಲ್ಲಿದ್ದರೂ ನಿಮ್ಮ ಮನಸ್ಸು
ಒಂಟಿ ಎನಿಸುತ್ತಿದೆ. ಅದಕ್ಕೆ ಸರಿಯಾದ ಕಾರಣ
ನಿಮ್ಮಲ್ಲೇ ಇದೆ. ನಿಮಗೀಗ ವಿಶ್ರಾಂತಿ ಬೇಕಿದೆ.

ಕುಂಭ
ನಿಮ್ಮ ಕಟು ಮಾತು ಆಪ್ತರಲ್ಲಿ ಒಂಚೂರು
ನೋವನ್ನುಂಟು ಮಾಡಿದೆ. ನೀವು ಬೇಕಂತ
ಅಂದದ್ದಲ್ಲ. ಅವರಲ್ಲಿ ಕ್ಷಮೆ ಕೇಳಿ ಬಿಡಿ.

ಮೀನ 
ರಾಜಕಾರಣಿಗಳಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ.
ಆದರೆ ಇಂದು ನೀವು ಅದರತ್ತ ಸಾಗಲಿದ್ದೀರಿ.
ಶುಭ ಸೂಚನೆಗಳು ಎದುರುಗೊಳ್ಳುವ ದಿನ.

loader