ಈ ರಾಶಿಯವರಿಗಿಂದು ಬದಲಾವಣೆಯೊಂದು ಕಾಣಲಿದೆ

Dina Bhavishya June 25
Highlights

ಈ ರಾಶಿಯವರಿಗಿಂದು ಬದಲಾವಣೆಯೊಂದು ಕಾಣಲಿದೆ

ಈ ರಾಶಿಯವರಿಗಿಂದು ಬದಲಾವಣೆಯೊಂದು ಕಾಣಲಿದೆ

ಮೇಷ
ಪಿತ್ರಾರ್ಜಿತ ಆಸ್ತಿ ದೊರೆಯಲಿದೆ. ಆರೋಗ್ಯ
ವಿಷಯದಲ್ಲಿ ಆತಂಕ ಬೇಡ. ಯಾತ್ರೆಗೆ
ಹೋಗುವ ಅವಕಾಶಗಳು ಈಗ ಹೆಚ್ಚಾಗಿದೆ.

ವೃಷಭ
ವಯಸ್ಸಾದ ಅಮ್ಮನ ಮಾತೂ ಕೇಳಲೇಬೇಕು.
ಮಡದಿಯ ಮಾತನ್ನೂ ಮೀರುವಂತಿಲ್ಲ.
ಈ ಮಧ್ಯದಲ್ಲಿ ನೀವು ಜಾಣರಾಗಿರಬೇಕಷ್ಟೆ.

ಮಿಥುನ
ಈ ದಿನ ಅನಗತ್ಯ ಚಿಂತೆಗಳು ದೂರಾಗಲಿದೆ.
ಸ್ಥಳ ಬದಲಾವಣೆಯಾಗಲಿದೆ. ಹೊರಗಿನ
ವಾತಾವರಣವು ನಿಮಗೆ ವ್ಯತಿರಕ್ತವಾಗಲಿದೆ.

ಕಟಕ
ಹಣದ ವ್ಯವಹಾರದಲ್ಲಿ ಆದಷ್ಟೂ ಮುಂದಾ
ಲೋಚನೆ ಇರಲಿ. ದುಡಿಯುವುದರ ಜೊತೆಗೆ
ವಿಶ್ರಾಂತಿಗೂ ಗಮನ ಕೊಡುವುದು ಸೂಕ್ತ.

ಸಿಂಹ
ಬಾಳಸಂಗಾತಿ ಹಾಗೂ ಮಕ್ಕಳೊಂದಿಗೆ ಈ
ದಿನವನ್ನು ಸಂತೋಷವಾಗಿ ಕಳೆಯುವಿರಿ.
ಹತ್ತಿರದ ನೆಂಟರು ನಿಮ್ಮಲ್ಲಿಗೆ ಬರಲಿದ್ದಾರೆ. 

ಕನ್ಯಾ
ವಿಮಾ ಏಜಂಟರುಗಳಿಗೆ ಆಶಾದಾಯಕ ದಿನ.
ನೆರೆಹೊರೆಯವರೊಂದಿಗೆ ಉತ್ತಮವಾದ
ಬಾಂಧವ್ಯವನ್ನು ಹೊಂದುವ ದಿನ ಇದಾಗಿದೆ.

ತುಲಾ 
ತಲೆ ಶೂಲೆ ನಿಮ್ಮನ್ನು ಕಾಡುತ್ತಿದೆ. ಸ್ವಲ್ಪವೂ
ಬಿಡುವಿಲ್ಲದ ಕೆಲಸದ ಒತ್ತಡವೇ ಹೀಗಾಗಲು
ಕಾರಣ. ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ.

ವೃಶ್ಚಿಕ
ಹೊಸ ಕಾರ್ಯ ಆರಂಭಿಸಲು ಇದು ಸಕಾಲ
ವಾದರೂ ನಾಲ್ಕು ಜನರನ್ನು ಕೇಳಿ. ಸಫಲತೆ
ನಿಮ್ಮ ಕಡೆಗಿದೆ. ಹಾಗಂತ ಹುಂಬತನ ಬೇಡ. 

ಧನುಸ್ಸು
ಶಿಲ್ಪಕಲೆಯನ್ನು ರೂಢಿಸಿಕೊಂಡವರಿಗೆ
ಒತ್ತಡದ ಕೆಲಸಗಳಿವೆ. ಹಣದ ಮುಗ್ಗಟ್ಟು
ಸ್ವಲ್ಪ ದೂರಾಗಲಿದೆ. ನೆಮ್ಮದಿ ಸಿಗಲಿದೆ.

ಮಕರ
ಭಾರಿ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ.
ಬದಲಾವಣೆಯ ನಿರೀಕ್ಷೆಯು ನಿಜವಾಗಲಿದೆ.
ಆತುರ ಪಡದೆ ತಾಳ್ಮೆ ವಹಿಸಿ ಅಡಿ ಮುಂದಿಡಿ.

ಕುಂಭ
ಕೋರ್ಟ್ ವ್ಯವಹಾರಗಳಿಂದ ಆದಷ್ಟು ದೂರ
ವಿದ್ದರೆ ಕ್ಷೇಮ. ನಿಮ್ಮದಲ್ಲದ ತಪ್ಪಿಗೂ ನೀವು
ದಂಡ ತೆರಬೇಕಾದೀತು. ಜಾಗ್ರತೆಯಿಂದಿರಿ.

ಮೀನ 
ಪ್ರವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ
ಕೊಳ್ಳುವುದು ಒಳ್ಳೆಯದೆನಿಸಿದೆ. ನೀವೀಗ
ವಿವೇಕಯುತವಾಗಿ ನಿರ್ಣಯ ಕೈಗೊಳ್ಳಿ.

loader