ನಿತ್ಯ ಫಲ

First Published 11, Jun 2018, 7:07 AM IST
Dina Bhavishya June 11
Highlights

 ನಿತ್ಯ ಫಲ 

ಮೇಷ
ಮಾಜಸೇವೆಯಲ್ಲಿ ಆಸಕ್ತಿ ಮೂಡಲಿದೆ.
ನಿಮ್ಮ ವಾಹನ ವಿಲೇವಾರಿಯಲ್ಲಿ ಗಣನೀಯ
ಆದಾಯ ಗಳಿಸುವಿರಿ. ಲವಲವಿಕೆಯ ದಿನ.

ವೃಷಭ
ನಿಮ್ಮ ಕೆಲಸ ಮತ್ತು ಆದ್ಯತೆಗಳ ಮೇಲೆ ಹೆಚ್ಚಿನ
ಗಮನವಿಡಿ. ಸ್ವಂತದ ವ್ಯವಹಾರದಲ್ಲಿ ಜಾಗ್ರತೆ
ಯಿಂದ ವರ್ತಿಸಿರಿ. ಜಾಗೃತರಾಗಿದ್ದರೆ ಕ್ಷೇಮ.

ಮಿಥುನ
ಮನದ ನೆಮ್ಮದಿ ನೀಡುವಂತಹ ಸುದ್ದಿ ಕಿವಿಗೆ
ಬಿದ್ದಿದೆ. ಅದರ ಪರಿಣಾಮ ನಿಮ್ಮ ಮನಸ್ಸು
ಪ್ರಶಾಂತವಾಗಿದೆ. ಖುಷಿಯ ದಿನವಾಗಿದೆ.

ಕಟಕ
ನಿಮ್ಮ ಸ್ನೇಹಿತನ ಮನೆಯ ವಿಷಮ ಪರಿಸ್ಥಿತಿ
ನಿಮ್ಮ ಮನಸ್ಸಿನ ಮೇಲೆ ತುಂಬಾ ಪರಿಣಾಮ
ಬೀರಲಿದೆ. ಅದನ್ನು ಮರೆಯುವುದೇ ಲೇಸು.

ಸಿಂಹ
ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸ್ಥಿಮಿತಕ್ಕೆ
ಬರುವ ದಿನವು ಹತ್ತಿರದಲ್ಲಿದೆ. ನಿರೀಕ್ಷೆಯು
ಎಂದೂ ಹುಸಿಯಾಗದು ತಾಳ್ಮೆಯಿರಬೇಕಷ್ಟೆ

ಕನ್ಯಾ
ಉದ್ಯೋಗದಲ್ಲಿ ಬದಲಾವಣೆಯಾಗುವ
ಸಾಧ್ಯತೆಯಿದೆ. ವಿವಾಹಾಕಾಂಕ್ಷಿಗಳಿಗೆ ಇಂದು
ಯೋಗವು ಕೂಡಿ ಬರಲಿದೆ. ಪ್ರಯತ್ನ ಮಾಡಿ.

ತುಲಾ

ನಿನ್ನೆಯವರೆಗೂ ಸರಿಯಿದ್ದ ನಿಮ್ಮ ಹೊಸ
ವಾಹನದ ಖರೀದಿಯ ವಿಷಯ ಇಂದು
ಬೇರೆಯದೇ ತಿರುವನ್ನು ಪಡೆಯಲಿದೆ.

ವೃಶ್ಚಿಕ 

ನೀವು ಯೋಜಿಸಿದಂತೆಯೇ ಎಲ್ಲ ಕೆಲಸಗಳು
ನಿರಾತಂಕವಾಗಿ ನೆರವೇರುವವು. ಸಂಗೀತ
ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚು.

ಧನುಸ್ಸು
ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ
ಕಾಣಲಿದೆ. ಗಾಬರಿಬೇಡ. ವಯೋಮಾನಕ್ಕೆ
ಸಂಬಂಧಿಸಿದ್ದರಿಂದ ಜಾಗ್ರತೆಯಿದ್ದರೆ ಸಾಕು.

ಮಕರ
ಕತ್ತಲೆಯೇ ಯಾವಾಗಲು ಇರದು. ಸೂರ್ಯ
ಎಷ್ಟು ಹೊತ್ತು ಬಚ್ಚಿಟ್ಟುಕೊಂಡರೂ ಮೇಲೇರಿ
ಬಂದು ನಿಮ್ಮ ಬದುಕನ್ನು ಬೆಳಗಲೇಬೇಕು.

ಕುಂಭ
ನಿಮ್ಮ ಮೆಡಿಕಲ್ ಕ್ಷೇತ್ರದಲ್ಲಿನ ಸೇವೆಯನ್ನು
ಗುರುತಿಸಿ ಪ್ರಶಂಸೆಗಳ ಸುರಿಮಳೆಯಾಗಲಿದೆ.
ನಿಮ್ಮ ನಿಸ್ಪಹ ಸೇವೆಯ ಫಲವೇ ಇದಾಗಿದೆ.

ಮೀನ

ಕಲಹ-ವಿರಸಗಳಿಗೇನು ಕಡಿಮೆ ಇಲ್ಲ. ಆದರೆ
ಮುಂಗೂಪಿಗಳಾದ ನಿಮಗಿದು ಹೊಸತೇನು
ಅಲ್ಲ. ದೂರದ ಪ್ರಯಾಣದ ಯೋಗವಿದೆ.

loader