ಈ ರಾಶಿಯವರು ಇಂದು ಎಚ್ಚರದಿಂದ ಇರುವುದು ಒಳಿತು..

Dina Bhavishya June 06
Highlights

ಈ ರಾಶಿಯವರು ಇಂದು ಎಚ್ಚರದಿಂದ ಇರುವುದು ಒಳಿತು.. ಉಳಿದ ರಾಶಿಗಳ ಫಲಾ ಫಲ ಹೇಗಿದೆ..?

ಮೇಷ
ಕಂಡ ಕಂಡಲ್ಲಿ ತಿಂದು ಬಾಯಿ ರುಚಿಗೆ ಬಲಿ
ಯಾಗದಿರಿ. ಅದರಿಂದ ತೊಂದರೆಯೂ
ನಿಮಗೇ. ಡಾಕ್ಟರರ ಸಲಹೆಯಂತೆ ಇರಿ.

ವೃಷಭ
ಪ್ರಯಾಣ ಹೋಗಲಿದ್ದೀರಿ. ಪ್ರವಾಸದ
ಪಟ್ಟಿಯಲ್ಲಿ ತೀರ್ಥಯಾತ್ರೆಯ ಸ್ಥಳಗಳೂ
ಇವೆ. ಹಿರಿಯರನ್ನೂ ಕರೆದೊಯ್ಯಲಿದ್ದೀರಿ.

ಮಿಥುನ
ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಯಿದೆ.
ಗಂಭೀರವಾದ ನಡವಳಿಕೆಗಳೇ ಗೌರವವನ್ನು
ತರುತ್ತದೆ. ಹರ್ಷವೇ ಮನೆ ಮಾಡಿದೆ.

ಕಟಕ
ಹಳದಿ ಮಿಶ್ರಿತ ಹೊಸ ವಸ್ತುಗಳು ಇಂದು
ಮನೆ ಸೇರಲಿದೆ. ವಿದ್ಯಾರ್ಥಿಗಳಿಗೆ ಪ್ರವಾಸ
ಯೋಗ. ವೈಯಕ್ತಿಕ ಬೆಳವಣಿಗೆಗೆ ಕಾಲವಿದು.

ಸಿಂಹ
ಸ್ವಲ್ಪ ನಿಧಾನಗತಿಯಲ್ಲಿ ಕೆಲಸ ಕಾರ್ಯಗಳು
ನಡೆಯುತ್ತವೆ. ಹಾಗಲ್ಲದೇ ಬಡ್ಡಿ ವ್ಯವಹಾರ
ನಡೆಸುವವರು ಸ್ವಲ್ಪ ಎಚ್ಚರದಿಂದ ಇರಿ.

ಕನ್ಯಾ
ವಿದೇಶದಲ್ಲಿ ಓದುತ್ತಿರುವವರಿಗೆ ತಕ್ಕಾದ
ಉದ್ಯೋಗದ ಸಾಧ್ಯತೆಗಳಿವೆ. ಸ್ವದೇಶದಲ್ಲಿನ
ಮನೆಯಲ್ಲಿ ಸಂಭ್ರಮದ ವಾತಾವರಣವಿದೆ.

ತುಲಾ
ಕರಕುಶಲ ವಸ್ತುಗಳ ಪ್ರದರ್ಶನಗಳಲ್ಲಿ
ಪಾಲ್ಗೊಳ್ಳುವಿರಿ. ಮದುವೆ ಕೆಲಸಗಳಿಗಾಗಿ
ತುಲಾ ಓಡಾಡಬೇಕಿದೆ. ದಣಿವೆನ್ನುವುದೇ ಇರದು.

ವೃಶ್ಚಿಕ
ಖರ್ಚಿನ ಮೇಲೆ ಹಿಡಿತವಿರಲಿ. ಅಪರಿಚಿತ
ವ್ಯಕ್ತಿಗಳ ಪರಿಚಯವಾಗಲಿದೆ. ಅನಾರೋಗ್ಯ
ಸಮಸ್ಯೆಗಳಿಗೆ ಪರಿಹಾರವು ದೊರೆಯಲಿದೆ. 

ಧನುಸ್ಸು
ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆ
ಹೆಚ್ಚು ಗಮನ ನೀಡಿ. ಉದ್ಯೋಗಸ್ಥರ ಕೆಲಸ
ದಲ್ಲಿ ಪ್ರಗತಿ. ಪ್ರಸ್ತುತ ಹೆಚ್ಚಿನ ತಾಳ್ಮೆಬೇಕು.

ಮಕರ
ಇಷ್ಟವಾದ ತಿಂಡಿಗಳನ್ನು ತಿನ್ನುವ ಅವಕಾಶವು
ಇಂದು ದೊರೆಯಲಿದೆ. ಕೆಲಸದ ಸ್ಥಳದಲ್ಲಿ
ಒತ್ತಡ ಹೆಚ್ಚಿದೆ. ನೆಮ್ಮದಿಯೇ ಮುಖ್ಯವಿಲ್ಲಿ.

ಕುಂಭ
ನಿಮ್ಮ ಆಲೋಚನೆಗಳು ಮತ್ತು ನಿರ್ಧಾರಗಳು
ಉತ್ತಮವಾಗಿವೆ. ಕೆಲಸದಲ್ಲಿ ಸಂದಿಗ್ಧತೆಯು
ಇದ್ದರೂ ಅಂತಿಮ ಫಲಿತಾಂಶ ಒಳಿತಾಗಲಿದೆ.

ಮೀನ 
ದ್ವಿಚಕ್ರ ವಾಹನ ಮಾರಾಟದಿಂದ ಅಧಿಕ
ಲಾಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

loader