ಮೇಷ

ಕೆಲಸದಲ್ಲಿ ದೃಢ ನಿಶ್ಚಯವಿರಲಿ. ವಿಶ್ವಾಸ
ಬೆಳೆಸಿಕೊಳ್ಳುವಂತೆ ನಿಮ್ಮ ನಡತೆಯಿರಲಿ.
ನಿಮ್ಮ ಸಂಗಾತಿಯ ಬೆಂಬಲವು ಹೆಚ್ಚಾಗಲಿದೆ.


ವೃಷಭ
ಮಾನಸಿಕ ಒತ್ತಡವು ನಿಮ್ಮ ಜೀವನದ ಮೇಲೆ
ಪ್ರಭಾವ ಬಿರುತ್ತದೆ. ಆರ್ಥಿಕ ಪರಿಸ್ಥಿತಿಯು
ಉತ್ತಮವಾಗುವ ದಿನವು ಇದಾಗಲಿದೆ.


ಮಿಥುನ
ಇಂದು ದೂರದ ಪ್ರಯಾಣವನ್ನು ಮಾಡುವ
ಯೋಗವಿದೆ. ಆದರೆ ಅದರಿಂದ ನಿಮ್ಮ ಮನದ
ತುಮುಲ ಜಾಸ್ತಿಯಾಗಲಿದೆ. ಜಾಗ್ರತರಾಗಿರಿ.


ಕಟಕ
ದೂರದ ನೆಂಟರು ನಿಮ್ಮ ಮಗಳಿಗೆ ಒಳ್ಳೆಯ
ವರನನ್ನು ಹುಡುಕಿದ್ದಾರೆ. ಆ ಸಂಬಂಧದ
ಮಾತುಕತೆಯು ಇಂದಾಗುವ ಲಕ್ಷಣವಿದೆ.

ಸಿಂಹ

ವಾಹನ ವಿಲೇವಾರಿಯಲ್ಲಿ ಗಣನೀಯವಾದ
ಆದಾಯ ಗಳಿಸುವಿರಿ. ಸಮಾಜ ಸೇವೆಯಲ್ಲಿ
ಆಸಕ್ತಿ ಮೂಡಲಿದೆ. ಖುಷಿ ಹಂಚಲಿದ್ದೀರಿ
 

ಕನ್ಯಾ
ನಿಮ್ಮ ರಾಶಿಯವರು ಇಂದು ಹೆಚ್ಚು ಹಣ
ವ್ಯಯ ಮಾಡದಿರುವುದೇ ಸೂಕ್ತ. ಕೂಡಿಟ್ಟದ್ದು
ಉಪಯೋಗಕ್ಕೆ ಬರುವ ದಿನವು ಇದಾಗಿದೆ.

ತುಲಾ
ಕಾರಣವಿಲ್ಲದೆಯೇ ಮನಸ್ಸು ಚಂಚಲವಾಗಿದೆ.
ಹೀಗೆ ಆಗಲು ಕಾರಣ ತಿಳಿಯದೇ ಚಡಪಡಿ
ಸಲಿದ್ದೀರಿ. ಧ್ಯಾನ-ಪ್ರಾಣಾಯಮ ಮಾಡಿ.

ವೃಶ್ಚಿಕ
ನಿಮಗೆ ಬಣ್ಣಗಳ ಮೋಹವು ಹೆಚ್ಚಾಗಲಿದೆ.
ಸೂಟೂ-ಬೂಟೂ ಹಾಕಬೇಕೆಂಬ ಬಯಕೆ-
ಆಸೆಯು ಇಂದು ನೆರವೇರುವ ಲಕ್ಷಣವಿದೆ.


ಧನುಸ್ಸು
ಪ್ರವಾಸ ಕೈಗೊಳ್ಳುವ ಸಮಯ. ಮನೆಯಲ್ಲಿ
ಸಂಭ್ರಮದ ವಾತಾವರಣವು ಏರ್ಪಟ್ಟು ಹೆಚ್ಚು
ಆನಂದಮಯವಾಗಲಿದೆ. ಸಂಭ್ರಮದ ದಿನ.


ಮಕರ
ಗ್ರಹಗಳ ವ್ಯತ್ಯಾಸದಿಂದ ಇಂದಿನ ದಿನ ಸ್ವಲ್ಪ
ಖುಷಿ ಇದೆ. ಅದನ್ನು ಹೆಚ್ಚು ಮಾಡುವಂತಹ
ಹೊಸ ಸುದ್ದಿಯೊಂದು ನಿಮ್ಮ ಕಿವಿ ಮುಟ್ಟಲಿದೆ.


ಕುಂಭ
ವೈಯಕ್ತಿಕ ಸಮಸ್ಯೆಗಳ ಕುರಿತು ಹೇಳುವವರ
ಮಾತಿಗೆ ಕಿವಿಯಾಗುವುದಕ್ಕಿಂತ ತಜ್ಞರ ಸಲಹೆ
ಪಡೆಯಿರಿ. ನಿರ್ಲಕ್ಷ್ಯ ಅಷ್ಟು ಒಳ್ಳೇಯದಲ್ಲ.

ಮೀನ
ನಿಮ್ಮ ನಿಲುವುಗಳು ನಿಮಗೆ ಬೇಕಾದವರಿಗೆ
ಆದರ್ಶವಾಗುತ್ತವೆ. ವಿದ್ಯಾರ್ಥಿಗಳಿಗೆ
ಅಧ್ಯಯನದಲ್ಲಿ ಆಸಕ್ತಿಯು ಹೆಚ್ಚಲಿದೆ