ಈ ರಾಶಿಯವರಿಗಿಂದು ಮುಟ್ಟಿದ್ದೆಲ್ಲವೂ ಚಿನ್ನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 7:01 AM IST
Dina Bhavishya August 8
Highlights

ಈ ರಾಶಿಯವರಿಗಿಂದು ಮುಟ್ಟಿದ್ದೆಲ್ಲವೂ ಚಿನ್ನ

ಈ ರಾಶಿಯವರಿಗಿಂದು ಮುಟ್ಟೆದ್ದೆಲ್ಲವೂ ಚಿನ್ನ

ಮೇಷ
ಹಳೆಯ ನೆನಪಲ್ಲಿ ಕೊರಗದೆ ಭವಿಷ್ಯದ ಬಗ್ಗೆ
ಯೋಚಿಸಿ. ಸ್ನೇಹಿತರೊಡನೆ ಬೆರೆತು ಹೊಸ
ಯೋಜನೆಗಳನ್ನು ರೂಪಿಸಿ. ಮರೆವು ಉಚಿತ.

ವೃಷಭ
ಕೆಲಸದ ನಿಮಿತ್ತ ದೂರ ಪ್ರಯಾಣ ಏರ್ಪಡ
ಲಿದೆ. ಹಳೆಯ ಮಿತ್ರನ ಸುದ್ದಿಯೇ ಹೀಗೆ
ಪ್ರಯಾಣ ಹೊರಡಲು ಕಾರಣ. ಭಯಬೇಡ.

ಮಿಥುನ
ಯಾವಾಗಲೂ ನಿಮ್ಮ ಮಾತಿಗೇ ಬೆಲೆ ಇದೆ.
ಅದರಲ್ಲೂ ಗೆಳೆಯರ ಬಳಗದಲ್ಲಿ ನಿಮ್ಮದೇ
ಮಾತು. ನೀವು ಟೀಮ್ ಲೀಡರ್ ಥರ!

ಕಟಕ
ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ಸ್ನೇಹಿತರು
ಕೈ ಜೋಡಿಸುವರು. ಅವರಲ್ಲಿ ನಿಮಗಿರುವ
ನಂಬಿಕೆಯೇ ಹೀಗಾಗಲು ಕಾರಣವಾಗಿದೆ.

ಸಿಂಹ
ಚಾಲಕರಿಗೆ ನಿರಂತರ ಪ್ರಯಾಣ, ದಣಿವು.
ನಿಮ್ಮ ವೃತ್ತಿಯಲ್ಲಿ ಪ್ರಗತಿ. ನಿಮಗೆ ಹಣಕಾಸಿನ
ಸಹಾಯವನ್ನು ಗೆಳೆಯರು ಮಾಡಲಿದ್ದಾರೆ.

ಕನ್ಯಾ
ಅನಗತ್ಯ ಚಿಂತೆಗಳು ಈ ದಿನಗಳಲ್ಲಿ ದೂರಾ
ಗಲಿದೆ. ಸ್ಥಳ ಬದಲಾವಣೆಯ ಸಾಧ್ಯತೆ ಇದೆ.
ನಿಮ್ಮ ಧೈರ್ಯವೇ ನಿಮ್ಮನ್ನು ಕಾಯುವುದು.

ತುಲಾ 
ಅಲ್ಪ-ಸ್ವಲ್ಪ ಹಣ ಕೊಟ್ಟರೂ ನಿಮ್ಮ ಉದಾರ
ತನವನ್ನು ಗುರುತಿಸುವವರಿದ್ದಾರೆ. ಹೊಸಬರು
ಕೂಡ ನಿಮ್ಮ ಕಾರ್ಯಗಳಿಗೆ ಹಾರೈಸಲಿದ್ದಾರೆ.


ವೃಶ್ಚಿಕ
ನಿಮ್ಮ ದೇಹಸ್ಥಿತಿಯ ಬಗ್ಗೆ ಸ್ವಲ್ಪ ಕಾಳಜಿ ಇರಲಿ.
ಮನಸ್ಸಿನ ಹತೋಟಿ, ಧ್ಯಾನಗಳತ್ತ ಗಮನ
ಹರಿಸಿದಲ್ಲಿ ಆರೋಗ್ಯವು ಸ್ವಲ್ಪ ಸುಧಾರಿಸೀತು. 

ಧನುಸ್ಸು
ವೃತ್ತಿಯಲ್ಲಿ ಪ್ರಗತಿ. ವ್ಯಾಪಾರಸ್ಥರಿಗೆ ಒಳ್ಳೆಯ
ಸಮಯ. ಶುದ್ಧಗಾಳಿ ಸೇವಿಸಿರಿ. ಬಡವರಿಗೆ
ದಾನ ಮಾಡುವ ಕಾರ್ಯಕ್ಕೆ ಮುಂದಾಗಿರಿ.

ಮಕರ
ಮನೆಯ ವಾತಾವರಣದಲ್ಲಿ ಸ್ವಲ್ಪ ಕಸಿವಿಸಿ
ಕಂಡು ಬಂದರೂ ದಿಢೀರೆಂದು ಬರುವ ಹಿರಿ
ಯರ ಆಗಮನದಿಂದ ತಹಬದಿಗೆ ಬರಲಿದೆ.

ಕುಂಭ
ಕಲೆಗೆ ಸಂಬಂಧಿಸಿದ ಕಲಿಕೆಯಲ್ಲಿ ನಿರತರಾದ
ವರಿಗೆ ಇದು ಉತ್ತಮ ದಿನ. ನಿಮ್ಮ ಕಲಾಕೃತಿ
ಗಳಿಗೆ ಸದ್ಯದಲ್ಲೇ ಒಳ್ಳೆಯ ಬೆಲೆ ಬರಲಿದೆ.

ಮೀನ 
ಪುಟಾಣಿ ಮಕ್ಕಳ ಆರೋಗ್ಯದಲ್ಲಿನ ವ್ಯತ್ಯಯ
ಗಳಿಂದ ನಿಮ್ಮ ಕೆಲಸ-ಕಾರ್ಯಗಳು ಏರು
ಪೇರಾಗಲಿವೆ. ಸಂಯಮದಿಂದ ವರ್ತಿಸಿರಿ

loader