ಈ ರಾಶಿಯವರಿಂದು ಅತ್ಯಂತ ಜಾಗೃತರಾಗಿ ಇರುವುದು ಒಳಿತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 7:10 AM IST
Dina Bhavishya August 6
Highlights

ಈ ರಾಶಿಯವರಿಂದು ಅತ್ಯಂತ ಜಾಗೃತರಾಗಿ ಇರುವುದು ಒಳಿತು

ಈ ರಾಶಿಯವರಿಂದು ಅತ್ಯಂತ ಜಾಗೃತರಾಗಿ ಇರುವುದು ಒಳಿತು

ಮೇಷ
ಸೋಮಾರಿತನ ಮೈಗೂಡಿಸಿಕೊಳ್ಳದೇ ಜಾಗೃತ
ರಾಗಿರಿ. ನಿಮ್ಮಲ್ಲಿ ಈಗಿರುವ ಏಕಾಗ್ರತೆಯನ್ನು
ಸರಿಯಾಗಿ ಬಳಸಿಕೊಂಡರೆ ಉತ್ತಮ ಫಲವಿದೆ.

ವೃಷಭ
ಬಾಳಸಂಗಾತಿ ಹಾಗೂ ಮಕ್ಕಳೊಂದಿಗೆ ಇಂದಿನ
ದಿನವನ್ನು ಸಂತೋಷವಾಗಿ ಕಳೆಯಲಿದ್ದೀರಿ.
ಇಂದು ಹತ್ತಿರದ ನೆಂಟರ ಆಗಮನವಾಗಲಿದೆ.

ಮಿಥುನ
ಬಂಧುಗಳ ಭೇಟಿ. ನೀವು ಎಂದೋ ಕೊಟ್ಟಿದ್ದ
ಹಳೆಯ ಸಾಲವು ವಾಪಸ್ ಆಗಲಿದೆ. ಸಣ್ಣ
ಹೂಡಿಕೆಯು ಬೆಳೆದು ದೊಡ್ಡ ಮೊತ್ತವಾಗಿದೆ.

ಕಟಕ
ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ಹಳೆಯ
ನೆನಪುಗಳನ್ನು ದೂರ ಮಾಡಿ. ಅದರಿಂದ ಸ್ವಲ್ಪ
ಹೊರ ಬನ್ನಿ. ಕೆಲಸ ಕಾರ್ಯಗಳಲ್ಲಿ ತೊಡಗಿರಿ.

ಸಿಂಹ
ಖುಷಿಯ ಸುದ್ದಿಯೊಂದು ಇಂದು ನಿಮ್ಮ ಕಿವಿ
ಸೇರಲಿದೆ. ಅದರಿಂದ ಮನಸ್ಸಿಗೆ ಹೆಚ್ಚಿನ
ಉಲ್ಲಾಸವನ್ನೂ, ನೆಮ್ಮದಿಯನ್ನೂ ತರಲಿದೆ. 

ಕನ್ಯಾ
ಕಲಾವಿದರಿಗೆ, ಸಂಗೀತಗಾರರಿಗೆ ಕೆಲಸದ
ಒತ್ತಡವು ಹೆಚ್ಚಾಗಲಿದೆ. ಕುಟುಂಬದ ಸದಸ್ಯ
ರೊಂದಿಗೆ ದೂರ ಪ್ರಯಾಣ ಕೈಗೊಳ್ಳಲಿದ್ದೀರಿ.

ತುಲಾ
ಉದ್ಯೋಗಕ್ಕಾಗಿ ನಡೆದ ತೀವ್ರ ಪ್ರಯತ್ನವು
ಫಲ ನೀಡಲಿದೆ. ಒಳ್ಳೆಯ ಸಂಸ್ಥೆಯೊಂದರಿಂದ
 ಪಾಲುದಾರಿಕೆಗೆ ಮನವಿಯೂ ಬರಲಿದೆ.

ವೃಶ್ಚಿಕ
ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ
ಕಾಣಲಿದೆ, ಗಾಬರಿಬೇಡ. ವಯೋಮಾನಕ್ಕೆ
ಸಂಬಂಧಿಸಿದ್ದಾದ್ದರಿಂದ ಜಾಗ್ರತೆ ಒಳ್ಳೆಯದು.

 ಧನುಸ್ಸು
ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ.
ಅದರ ಮೂಲ ಇಂದಿನಿಂದಲೇ ಆರಂಭಗೊಳ್ಳ
ಲಿದೆ. ಹಳೆಯ ಗೆಳೆಯರ ಸಹಕಾರ ಸಿಗಲಿದೆ.

ಮಕರ
ಕುಟುಂಬದ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ
ಉಂಟಾಗಲಿದೆ. ಹೊಸ ಆಸ್ತಿಯನ್ನು ಮಾಡಲು
ಮನಸ್ಸು ಮಾಡಲಿದ್ದೀರಿ. ಸಾಲಕ್ಕೆ ಕೈಹಾಕದಿರಿ.

ಕುಂಭ

ಹಳೆಯ ಗೆಳೆಯರೊಂದಿಗೆ ಹೆಚ್ಚಿನ ಸಮಯ
ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಯಲ್ಲಿ
ಭಾಗವಹಿಸಲಿದ್ದೀರಿ. ಸಂತಸವು ಹೆಚ್ಚಾಗಲಿದೆ.

ಮೀನ 
ಕಲಾಲೋಕದಲ್ಲಿ ದುಡಿಯುವವರಿಗೆ ಹೊಸ
ಹೊಸ ಐಡಿಯಾಗಳು ಬರಲಿದೆ. ಅವುಗಳು
ಸಾಕಾರಗೊಂಡಲ್ಲಿ ದೊಡ್ಡ ಮೊತ್ತವೂ ಸಿಗಲಿದೆ. 

loader