ಈ ರಾಶಿಗೆ ಈ ದಿನ ಅತ್ಯಂತ ಶುಭದಾಯಕ ದಿನ

ಮೇಷ
ಯಾವುದೇ ವಿಷಯಗಳಲ್ಲಿ ಅನಗತ್ಯ ಹಸ್ತ
ಕ್ಷೇಪಗಳು ಸಲ್ಲದು. ಅನಿರೀಕ್ಷಿತ ಕಷ್ಟಗಳು
ಒದಗಿ ಬಂದರೂ ಭಯ ಪಡಬೇಕಾದ್ದಿಲ್ಲ.

ವೃಷಭ
ಮಗಳ ಮದುವೆಯ ಮಾತುಕತೆಗಳು
ನಡೆಯಲಿವೆ. ಆತಂಕ ಪಡುವಂಥದ್ದೇನಿಲ್ಲ.
ಹೊಸ ಸಂಬಂಧಗಳು ಈಗ ಕೂಡಿ ಬರಲಿದೆ.

ಮಿಥುನ
ನಿಮ್ಮ ಹೊಸ ಯೋಜನೆಗೆ ಬೆಲೆ ಸಿಗಲಿದೆ.
ಏನಾಗುವುದೋ ಎಂಬ ಆತಂಕವು ಬೇಡ.
ಅದರ ಬಗ್ಗೆ ಹೆಚ್ಚು ಯೋಚಿಸದೇ ಇದ್ದು ಬಿಡಿ.

ಕಟಕ
ಅನಗತ್ಯ ಚಿಂತೆಗಳು ಇವತ್ತು ದೂರಾಗಲಿದೆ.
ಸ್ಥಳ ಬದಲಾವಣೆಯ ಸಾಧ್ಯತೆಗಳೂ ಹೆಚ್ಚಿವೆ
ನಿಮ್ಮ ಧೈರ್ಯವೇ ನಿಮ್ಮನ್ನು ಕಾಯುವುದು.

ಸಿಂಹ
ಸಂಸಾರದಲ್ಲಿನ ಆರೋಗ್ಯ ಸಮಸ್ಯೆಯಲ್ಲಿ ಸ್ವಲ್ಪ
ಪ್ರಗತಿ ಕಾಣಲಿದ್ದೀರಿ. ಸ್ಥಳ ಬದಲಾವಣೆಯೂ
ಆಗಲಿದೆ. ಅನಗತ್ಯ ಚಿಂತೆಗಳು ದೂರಾಗಲಿದೆ.

ಕನ್ಯಾ
ಮನೆಯಲ್ಲಿ ಕಲಹ-ಕದನಗಳು ಸದಾ ಇದ್ದದ್ದೆ.
ಅವುಗಳ ಮಧ್ಯೆಯೂ ನೀವು ಈ ದಿನ ಖುಷಿ
ಕಾಣುತ್ತೀರಿ. ಅಲ್ಲೂ ಒಂದು ಸಂಭ್ರಮವಿದೆ.

ತುಲಾ 
ವ್ಯವಹಾರವು ಯಶದತ್ತ ಸಾಗುತ್ತಿದೆ. ಹಾಗಾಗಿ
ಭಿನ್ನಾಭಿಪ್ರಾಯಕ್ಕೆ ಆಸ್ಪದ ಕೊಡದಂತೆ ನಿಗಾ
ವಹಿಸಿ. ಹಣವಷ್ಟೇ ಅಲ್ಲ, ಜನರೂ ಬೇಕು.

ವೃಶ್ಚಿಕ
ಪಿತ್ರಾರ್ಜಿತ ಆಸ್ತಿಯು ಸಿಗುವ ಪರಿಸ್ಥಿತಿಯು
ಉಂಟಾಗಲಿದೆ. ಆರೋಗ್ಯದ ವಿಷಯದಲ್ಲಿ
ಆತಂಕ ಬೇಡ. ದೊಡ್ಡ ಕಷ್ಟವು ದೂರಾಗಲಿವೆ. 

ಧನುಸ್ಸು
ಆಸ್ತಿಯ ವಿವಾದಗಳು ಸುಲಭವಾಗಿ ಬಗೆ
ಹರಿಯುವುದಲ್ಲ. ನಿರ್ಧಾರಗಳು ಖಚಿತ
ವಾಗಿರಲಿ. ಮೊದಲ ಆದ್ಯತೆ ಇದಕ್ಕೇ ಇರಲಿ.

ಮಕರ
ಗೆಳೆಯರೆಲ್ಲಾ ಸೇರಿ ನಿಮ್ಮನ್ನು ಪ್ರಶಂಸಲಿ
ದ್ದಾರೆ. ಜವಾಬ್ದಾರಿ ಹೆಚ್ಚಾಗಲಿದೆ. ಅದರಿಂದ
ನಿಮ್ಮಲ್ಲಿನ ಆತ್ಮ ಸ್ಥೈರ್ಯವೇ ಶಕ್ತಿಯಾಗಲಿದೆ.

ಕುಂಭ
ಕಂಡ ಕಂಡಲ್ಲಿ ತಿಂದು ನಿಮ್ಮ ಬಾಯಿ ರುಚಿಗೆ
ಬಲಿಯಾಗದಿರಿ. ನಿಮ್ಮ ಆರೋಗ್ಯಕ್ಕೇ ಹಾನಿ.
ಡಾಕ್ಟರರ ಸಲಹೆಯಂತೆಯೇ ಇದ್ದರೆ ಕ್ಷೇಮ.

ಮೀನ 
ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು
ನೀವೇ ಪರೀಕ್ಷೆಗೆ ಒಳಪಡಿಸಿಕೊಳ್ಳಿ. ಅದರಿಂದ
ನಿಮ್ಮ ವಿಶ್ವಾಸವೂ ಹೆಚ್ಚುತ್ತದೆ. ಬೆಲೆ ಸಿಗಲಿದೆ.