ಈ ರಾಶಿಯವರಿಗಿಂದು ಎಲ್ಲವೂ ಶುಭವಾಗುವುದು ನಿಶ್ಚಿತ

First Published 1, Aug 2018, 7:02 AM IST
Dina Bhavishya August 1
Highlights

ಈ ರಾಶಿಯವರಿಗಿಂದು ಎಲ್ಲವೂ ಶುಭವಾಗುವುದು ನಿಶ್ಚಿತ

ಈ ರಾಶಿಯವರಿಗಿಂದು ಎಲ್ಲವೂ ಶುಭವಾಗುವುದು ನಿಶ್ಚಿತ

ಮೇಷ
ಕಲಹ-ವಿರಸಗಳು ಸ್ವಲ್ಪ ಕಡಿಮೆಯಾಗಲಿದೆ.
ಹೆಂಡತಿ ಊರಿಗೆ ಹೋಗುವ ಯೋಜನೆ ತೀವ್ರ
ವಾಗಿದೆ. ಬಂಧುಗಳನ್ನು ಭೇಟಿಯಾಗಲಿದ್ದೀರಿ.

ವೃಷಭ
ಕಷ್ಟದ ದಿನಗಳೆ ಎಂದೂ ಇರದು ಎಂಬುದನ್ನು
ಅರಿಯಿರಿ. ಸಮರ್ಥವಾಗಿ ಎದುರಿಸುವವರಿಗೆ
ಸವಾಲುಗಳು ಎದುರಾದಷ್ಟು ಒಳ್ಳೆಯದಲ್ವೇ?

ಮಿಥುನ
ಗುರಿ ಸಾಧಿಸುವುದಕ್ಕೆ ಇಂದು ಸೂಕ್ತ ದಿನ.
ವ್ಯಾಪಾರ ಕ್ಷೇತ್ರದಲ್ಲಿವವರು ನಿಮ್ಮ ಮಾತಿಂದ
ಪ್ರಭಾವಿತರಾಗಲಿದ್ದಾರೆ. ಎಲ್ಲವೂ ಶುಭವೇ.

ಕಟಕ
ಮಾತಿನ ಮೇಲೆ ನಿಗಾ ಇರಲಿ. ವಿವಾದಕ್ಕೆ
ಸಿಲುಕುವ ಸಂಭವವಿದೆ. ಮಾತಿನಲ್ಲಿ ತೂಕ
ವಿದ್ದರೆ ಕ್ಷೇಮ. ವಿನಾಕಾರಣ ಕೋಪ ಬೇಡ.

ಸಿಂಹ
ದ್ವಿಚಕ್ರ ವಾಹನದ ಮಾರಾಟದಿಂದ ಅಧಿಕ
ಲಾಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

ಕನ್ಯಾ
ಮನೆಯಲ್ಲಿ ಕಲಹ-ವಿರಸಗಳು ಕಡಿಮೆ
ಆಗುವ ದಿನಗಳು ಹತ್ತಿರದಲ್ಲೇ ಇದೆ. ನಿಮ್ಮ
ಬಂಧು ಬಾಂಧವರ ಸಹಕಾರವೂ ಸಿಗಲಿದೆ.

ತುಲಾ 
ಇಂದಿನಿಂದ ನಿಮ್ಮ ಕುಟಂಬದ ಆದಾಯವು
ಗಣನೀಯವಾಗಿ ಹೆಚ್ಚಲಿದೆ. ನಿಮ್ಮ ಅವಿರತ
ದುಡಿಮೆಯಿಂದ ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ
ಹಣಕಾಸಿನ ಬಗ್ಗೆ ಚಿಂತಿಸದಿರಿ. ನಿಮ್ಮ ಪರಿ
ಶ್ರಮ ಹಾಗೂ ಏಕಾಗ್ರತೆಯಿಂದ ಬಾಕಿ ಉಳಿದ
ಕೆಲಸಗಳು ಮುಗಿಯಲಿವೆ. ನೆಮ್ಮದಿಯ ದಿನ. 

ಧನುಸ್ಸು
ಈ ದಿನ ಯಶಸ್ಸು ನಿಮ್ಮ ಬೆನ್ನಿಗಿದೆ. ಅಲ್ಲದೇ
ಸಂಭ್ರಮದ ವಾತಾವರಣ ಏರ್ಪಡಲಿದೆ.
ದೂರದ ಪ್ರವಾಸಕ್ಕೆ ಅಣಿಯಾಗಲಿದ್ದೀರಿ.

ಮಕರ
ನೂತನ ಒಪ್ಪಂದಗಳಿಗೆ ಇದು ಸಕಾಲ. ಎಚ್ಚರಿಕೆ
ಇರಲಿ. ನೀವು ಇಷ್ಟಪಟ್ಟ ಕೆಲಸಗಳೇ ನಿಮ್ಮನ್ನು
ಹುಡುಕಿ ಬರಲಿದೆ. ಆದಾಯವೂ ಹೆಚ್ಚಲಿದೆ.

ಕುಂಭ
ನಿಮ್ಮ ಮನಸ್ಸು ಡೋಲಾಯಮಾನವಾಗಿದೆ.
ಮೀನಾ-ಮೇಷ ಎಣಿಸುವುದನ್ನು ನಿಲ್ಲಸಿರಿ.
ಈ ಸಮಯ ನಿಮ್ಮ ತಾಳ್ಮೆಯ ಪರೀಕ್ಷಿಸಲಿದೆ.

ಮೀನ
ದುಡ್ಡು-ಕಾಸಿನ ವಿಷಯಗಳಲ್ಲಿ ತುಂಬಾನೇ
ಶಿಸ್ತುಬದ್ಧವಾಗಿರುವುದು ಒಳಿತು. 
ಹೆಚ್ಚು ಜುಗ್ಗ ಮೀನ ಆಗದಿರಿ. 
ಅವಶ್ಯವಿದ್ದಲ್ಲಿ ಖರ್ಚು ಮಾಡಿರಿ.

loader