ಈ ರಾಶಿಯವರಿಂದು ಎಚ್ಚರಿಕೆಯಿಂದ ಇರುವುದು ಒಳಿತು

ಮೇಷ
ನಿಮ್ಮದೇ ಮನೆಯಲ್ಲಿಯೇ ನಿಮಗೆ ಗೌರವ,
ಮರ್ಯಾದೆಗಳು ಇಲ್ಲವಾಗಿವೆ. ನಿಮ್ಮದಲ್ಲದ
ತಪ್ಪಿಗೂ ಈಗ ನಿಮಗೆ ಶಿಕ್ಷೆ ಒದಗಿ ಬಂದಿದೆ.

ವೃಷಭ
ನಿಮಗಿಂದು ಯಾವ ಬಣ್ಣವು ಒಲಿದು ಬರುತ್ತೆ
ಎಂದು ಚಿಂತಿಸದಿರಿ. ಹಾಗೆ ಯೋಚಿಸಿದಲ್ಲೇ
ಮತ್ತಷ್ಟು ಕಿರಿಕಿರಿಯಾಗುತ್ತೆ. ಧ್ಯಾನಾಸಕ್ತರಾಗಿ.

ಮಿಥುನ
ನಿಮ್ಮ ಹಳೆಯ ಗೆಳೆಯನ ಅಮ್ಮನ ಆರೋಗ್ಯ
ಸರಿಯಿಲ್ಲವೆಂದು ತಿಳಿದ ಕಾರಣ ನಿಮ್ಮಮ್ಮನ
ಹಳೆಯ ಸವಿನೆನಪುಗಳು ಹೆಚ್ಚು ಕಾಡಲಿವೆ.

ಕಟಕ
ಓದದೇ ಇದ್ದರೂ ಪರೀಕ್ಷೆಯಲ್ಲಿ ಬರೆಯುವೆ
ಎಂಬ ‘ಅಹಂ’ ಬೇಡ. ಪರಿಶ್ರಮವಿಲ್ಲದೆಯೇ
ಯಾವ ಸಾಧನೆಯನ್ನೂ ಮಾಡಲಾಗದು.

ಸಿಂಹ
ನಿಮ್ಮ ದೇಹಕ್ಕೆ ಒಗ್ಗುವ ಪದಾರ್ಥಗಳನ್ನಷ್ಟೇ
ಸೇವಿಸುವುದು ಒಳಿತು. ಈ ದಿನ ಹೊಟ್ಟೆಯ
ಬಾಧೆಯು ಹೆಚ್ಚಾಗಲಿದೆ. ಜಾಗ್ರತರಾಗಿರಿ.

ಕನ್ಯಾ
ಪ್ರೀತಿಪಾತ್ರರ ಜೊತೆ ಖುಷಿಯ ಕ್ಷಣಗಳನ್ನು
ಹಂಚಿಕೊಳ್ಳುವಿರಿ. ನಿಮ್ಮ ಹಳೆಯ ನೆನಪುಗಳು
ಈಗ ಸಾಕಷ್ಟು ಕಾಡುತ್ತವೆ. ಧ್ಯಾನಾಸಕ್ತರಾಗಿರಿ.

ತುಲಾ

ನಿಮ್ಮ ಹಳೆಯ ಗೆಳೆಯನ ಪ್ರಿಯತಮೆಯು
ನಿಮ್ಮನ್ನು ಭೇಟಿಯಾಗಲಿದ್ದಾರೆ. ಹಳೆಯ
ಗೆಳೆಯನ ಬಗ್ಗೆಯೂ ಪ್ರಸ್ತಾಪವಾಗಲಿದೆ.

ವೃಶ್ಚಿಕ

ಗೃಹಿಣಿ ಮನಸ್ಸು ಮಾಡಿದರೆ ಮನೆಯನ್ನು
ನಂದನ ಮಾಡಬಹುದು. ಇಂತಹ ಪರಿಸ್ಥಿತಿ
ಇಂದು ನಿಮ್ಮ ಗಮನಕ್ಕೆ ಬರಲಿದೆ. ಜಾಗ್ರತೆ.

ಧನುಸ್ಸು

ಮನೆತನದ ಗೌರವವನ್ನು ಉಳಿಸುವುದು
ನಿಮ್ಮ ಕೈಯಲ್ಲೇ ಇದೆ. ಯಾರಾದರೂ ಹಣದ
ಸಹಾಯ ಕೇಳಲು ಬಂದರೆ ಇಲ್ಲವೆನ್ನದಿರಿ.

ಮಕರ
ವಾಸ್ತುದೋಷದ ಬಗ್ಗೆ ಜ್ಯೋತಿಷ್ಯ ಕೇಳಿ ಬಂದ
ಮೇಲಿಂದ ನಿಮ್ಮ ಮನಸ್ಸು ನಿಮ್ಮ ಮಾತನ್ನೇ
ಕೇಳುತ್ತಿಲ್ಲ. ಧ್ಯಾನಾಸಕ್ತರಾಗುವುದು ಒಳಿತು.

ಕುಂಭ
ತಲೆ ಶೂಲೆಯು ಇಂದು ನಿಮ್ಮನ್ನು ಕಾಡಲಿದೆ.
ಸ್ವಲ್ಪವೂ ಬಿಡುವಿಲ್ಲದ ಕೆಲಸದ ಒತ್ತಡವಿದೆ.
ವಿಶ್ರಾಂತಿಯು ನಿಮಗೆ ಮರೀಚಿಕೆಯಾಗಿದೆ.

ಮೀನ

ಮಗನ ಯಶಸ್ಸು ನಿಮ್ಮನ್ನು ಹೆಚ್ಚು ಖುಷಿ
ಪಡುವಂತೆ ಮಾಡಿದೆ. ಅವನ ಮುಂದೆ ಕೂಡ
ನಿಮ್ಮ ಖುಷಿಯನ್ನು ತೋರಿಸಬಹುದಲ್ವಾ?