Asianet Suvarna News Asianet Suvarna News

ಇಂದು ಈ ರಾಶಿಯವರು ತೊಂದರೆಗೆ ಸಿಲುಕುವ ಅಪಾಯವಿದೆ

23 ನವೆಂಬರ್ 2019ರ ಭವಿಷ್ಯ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ದಿನ ? 

Daily Horoscope of 23nd November 2019
Author
Bengaluru, First Published Nov 23, 2019, 7:08 AM IST

ಮೇಷ: ಮಾತನಾಡುವಾಗ ಎಚ್ಚರ ಇರಲಿ. ಸ್ವಲ್ಪ ತಪ್ಪಾದರೂ ದೊಡ್ಡ ಮಟ್ಟದ ತೊಂದರೆಗೆ ಸಿಲುಕುವ ಅಪಾಯ ಇರುತ್ತದೆ. ಶುಭಫಲ.

ವೃಷಭ: ಹೊಸ ಕೆಲಸಗಳಿಗೆ ಮುಂದಾಗಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮಗೆ ಸರಿ ಎನ್ನಿಸಿದ ದಾರಿಯಲ್ಲಿ ಸಾಗಿ.

ಮಿಥುನ: ಆದಾಯದಲ್ಲಿ ಏರಿಕೆಯಾಗಲಿದೆ. ಸುಳ್ಳು ಸುದ್ದಿಗಳಿಗೆ ಮರುಳಾಗದಿರಿ. ಯಾರದೋ ಮಾತಿಗೆ ನಿಮ್ಮ ಉತ್ಸಾಹ ಕುಗ್ಗದಿರಲಿ.

ಕಟಕ: ಸುಳ್ಳನ್ನು ಹೇಳುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಆದಾಯದಲ್ಲಿ ಏರಿಕೆ, ಖರ್ಚಿನಲ್ಲಿಯೂ ಏರಿಕೆ ಕಂಡುಬರಲಿದೆ.

ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ?

ಸಿಂಹ: ಅಪರಿಚಿತರ ಸಹಾಯದಿಂದ ಅಪಾಯದಿಂದ ಪಾರಾಗಲಿದ್ದೀರಿ. ಹೊಸ ಸ್ಥಳಕ್ಕೆ ಭೇಟಿ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

ಕನ್ಯಾ: ಪ್ರೀತಿಸುವವರ ಸಂಖ್ಯೆಗಿಂತ ದ್ವೇಷಿಸುವವರ ಸಂಖ್ಯೆ ಹೆಚ್ಚಾಗಲಿದೆ. ಧೈರ್ಯದಿಂದ ಮುಂದೆ ಸಾಗಿದರೆ ಯಶಸ್ಸು. ನೆಮ್ಮದಿ ಹೆಚ್ಚಾಗಲಿ.

ತುಲಾ: ಆತ್ಮ ವಿಶ್ವಾಸವನ್ನು ಕುಗ್ಗಿಸಿಕೊಳ್ಳದೇ ಮುಂದೆ ಸಾಗಿ. ಎಲ್ಲರಿಗೂ ನೀವು ಸರಿಯಾಗಿ ಇರಬೇಕು ಎಂದೇನೂ ಇಲ್ಲ. ನಿಮಗೆ ನೀವು ಸರಿಯಾಗಿರಿ.

ವೃಶ್ಚಿಕ: ಕೆಲಸದಲ್ಲಿ ಬದಲಾವಣೆಯ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ. ಧೈರ್ಯವಾಗಿ ಮುಂದೆ ಸಾಗಿದರೆ ಒಳಿತಾಗುವುದು.

ಧನಸ್ಸು: ಯಾರೋ ಮಾಡಿದ ಕಾರ್ಯಕ್ಕೆ ನೀವು ನಿಮ್ಮ ಹೆಸರು ಹೇಳಿಕೊಳ್ಳುವುದು ಬೇಡ. ಸಾಧ್ಯವಾದರೆ ಒಳಿತು ಮಾಡಿ, ಇಲ್ಲ ಸುಮ್ಮನೆ ಇರಿ.

ಮಕರ: ನಿಮ್ಮ ತಪ್ಪುಗಳನ್ನು ನೀವೇ ಗುರುತು ಮಾಡಿಕೊಂಡು ಅವುಗಳನ್ನು ಸರಿ ಮಾಡಿಕೊಳ್ಳಲು ಪ್ರಯತ್ನ ಮಾಡಲಿದ್ದೀರಿ.

ಕುಂಭ: ಕೆಟ್ಟ ವಿಚಾರಗಳು ಬೇಗನೇ ಹಬ್ಬುತ್ತವೆ. ಇವುಗಳ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯ ಪ್ರತಿಫಲ ಸಿಕ್ಕುತ್ತದೆ.

ಮೀನ: ನಿಮ್ಮ ಆಸಕ್ತಿಯ ವಿಚಾರಗಳ ಕುರಿತು ಇಂದು ಹೆಚ್ಚು ಸಮಯವನ್ನು ವ್ಯಯ ಮಾಡಲಿದ್ದೀರಿ. ಬಂಧುಗಳೊಂದಿಗೆ ವ್ಯವಹಾರ ಮಾಡದಿರಿ.

Follow Us:
Download App:
  • android
  • ios