ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ? 

ಮೇಷ
ಆರ್ಥಿಕವಾಗಿ ನಿಧಾನವಾಗಿ ಪ್ರಗತಿ
ಸಾಧಿಸಲಿದ್ದೀರಿ. ಕೆಲಸ ನಿಮಿತ್ತ ಪರ ಸ್ಥಳಕ್ಕೆ
ತೆರಳಬೇಕಾಗುತ್ತದೆ. ಮನೆಯಲ್ಲಿ ಶಾಂತಿ
ನೆಲೆಯಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು
ಎಂದರೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ವಾಹನ
ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಸೂಕ್ತ

ವೃಷಭ
ಇಲ್ಲದ ಗೊಂದಲಗಳನ್ನು ತಲೆಯ ಮೇಲೆ
ಎಳೆದುಕೊಂಡು ಚಿಂತೆ ಮಾಡುತ್ತಾ ಕೂರುವುದು
ಬೇಡ. ಗೋವಿಂದನ ನಂಬಿ ಕೆಟ್ಟವರಿಲ್ಲ. ಹರಿಯ
ಆರಾಧನೆ ಮಾಡಿ. ಸೂಕ್ತ ವ್ಯಕ್ತಿಗಳೊಂದಿಗೆ ಮಾತ್ರ
ವ್ಯವಹಾರ ಇಟ್ಟುಕೊಳ್ಳುವುದು ಒಳ್ಳೆಯದು. ವ್ಯಾಪಾರ
ಸ್ಥರಿಗೆ ಇದು ಒಳ್ಳೆಯ ಕಾಲ. ಶುಭ ಫಲ ದೊರೆಯಲಿದೆ.

ಮಿಥುನ
ಆಸೆಪಟ್ಟು ಕೊಂಡುಕೊಂಡ ವಸ್ತು ನಿಮ್ಮಿಂದ
ದೂರಾಗಲಿದೆ. ಎಲ್ಲರ ಪಾಲಿಗೂ ನೀವು
ಸಹಾಯಕರಾಗಿ ನಿಲ್ಲುತ್ತೀರಿ. ಕೆಲಸದ ಸ್ಥಳದಲ್ಲಿ
ಎಲ್ಲರಿಗೂ ನಿಮ್ಮ ಮೇಲೆ ಅಭಿಮಾನ, ಪ್ರೀತಿ ಬೆಳೆಯಲಿದೆ.
ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ನಿಮ್ಮ ಪರವಾಗಿ
ಆಗುವ ಸಾಧ್ಯತೆ ಇದೆ. ಗೆಲುವಿಗಾಗಿ ಕಾಯಬೇಕು.

ಕಟಕ
ಅನವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ನಡೆಯುವ ದಾರಿಯಲ್ಲಿ
ಕಲ್ಲು ಮುಳ್ಳು ಇದ್ದದ್ದೇ. ಎಲ್ಲರಿಗೂ
ಒಳ್ಳೆಯವರಾಗಲು ಸಾಧ್ಯವಿಲ್ಲ. ನೀವು ನಂಬಿದ ತತ್ವವನ್ನು
ಬಿಡದೇ ಮುಂದೆ ಸಾಗಿ. ಸಮಯ ಸಾಧಕರಿಂದ ಅಂತರ
ಕಾಯ್ದುಕೊಳ್ಳುವುದರಿಂದ ಆಗುವ ಅನಾಹುತ ತಪ್ಪಲಿದೆ.

ಸಿಂಹ
ಧರ್ಮ ಕಾರ್ಯದಲ್ಲಿ ಹೆಚ್ಚಾಗಿ
ತೊಡಗಿಸಿಕೊಳ್ಳಲಿದ್ದೀರಿ. ಏಕಾಂತದಿಂದ
ಹೊರಗೆ ಬಂದು ಎಲ್ಲರೊಂದಿಗೂ ಬೆರೆಯುವ
ಪ್ರಯತ್ನ ಮಾಡಿ. ಅಧಿಕಾರಿಗಳ ಹಿಂದೆ ಬೀಳಬೇಕಾದ
ಸಂದರ್ಭ ಬರುತ್ತದೆ. ನಾನು ಏನೇ ಮಾಡಿದರೂ
ನಡೆಯುತ್ತದೆ ಎನ್ನುವ ಅಹಂಕಾರ ಬೇಡ. ತಾಳ್ಮೆ ಇರಲಿ.

ಕನ್ಯಾ
ನಿಮ್ಮ ಕಷ್ಟಕಾಲಕ್ಕೆ ಆಗಿದ್ದ ಸ್ನೇಹಿತರ ನೆರವಿಗೆ
ನೀವು ಇಂದು ಧಾವಿಸಲಿದ್ದೀರಿ. ಮತ್ತೊಬ್ಬರ
ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದನ್ನು
ಬಿಟ್ಟು ನಿಮ್ಮ ಪಾಡಿಗೆ ನೀವು ಇದ್ದರೆ ಆತ್ಮ ಸಂತೋಷ
ದೊರೆಯುವುದು. ಗೆಲುವು ಸಿಗುವುದಕ್ಕೆ ಒಂದಷ್ಟು
ಪರಿಶ್ರಮ ಹಾಕಲೇಬೇಕಾಗುತ್ತದೆ. ನೆಮ್ಮದಿ ಸಿಗಲಿದೆ.

ತುಲಾ
ಗುರುವಿನ ಮಾರ್ಗದರ್ಶನ ಪಡೆದು ಮುಂದೆ
ಸಾಗಿ. ಆರ್ಥಿಕವಾಗಿ ಹೆಚ್ಚು ಅನುಕೂಲಕರ
ವಾದ ದಿನ ಇದು. ಒಂದು ಸೋಲಿಗೆ ಸುಮ್ಮನೆ
ಕೂರುವುದಕ್ಕೆ ಬದಲಾಗಿ ಮರಳಿ, ಮರಳಿ ಯತ್ನಮಾಡಿ.
ಆತ್ಮೀಯರೊಂದಿಗೆ ಕಾರ್ಯಕ್ರಮಗಳಲ್ಲಿ
ಭಾಗಿಯಾಗಲಿದ್ದೀರಿ. ಆಲಸ್ಯ ಬಿಟ್ಟು ಮುಂದೆ ಸಾಗಿ.

ವೃಶ್ಚಿಕ
ದಿನವಹಿ ವ್ಯಾಪಾರಿಗಳಿಗೆ ಇದು ಶುಭ ದಿನ.
ಒಳ್ಳೆಯ ಲಾಭ ದೊರೆಯಲಿದೆ. ಮನೆಯಲ್ಲಿ
ಸಂತೋಷದ ಕ್ಷಣಗಳು ಅಧಿಕವಾಗಲಿವೆ.
ತಂದೆಯ ಆರೋಗ್ಯದಲ್ಲಿ ಚೇತರಿಕೆ. ಕಚೇರಿ
ವ್ಯವಹಾರಗಳು ಸುಲಭವಾಗಲಿವೆ. ಅತಿಯಾದ ಆಯಾಸ
ಮಾಡಿಕೊಳ್ಳುವುದು ಬೇಡ. ಆಗುವುದೆಲ್ಲಾ ಒಳ್ಳೆಯದಕ್ಕೆ.

ಧನಸ್ಸು
ನಿಮ್ಮ ವಯಕ್ತಿಯ ಅಭಿಪ್ರಾಯವನ್ನು
ಮತ್ತೊಬ್ಬರ ಮೇಲೆ ಹೇರುವುದು ಬೇಡ. ಸೂಕ್ತ
ದಾಖಲೆ ಇಟ್ಟುಕೊಂಡು ಮಾತನಾಡುವುದು
ಒಳ್ಳೆಯದ್ದು. ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆ
ಇರಲಿ. ಬಂಧುಗಳೊಂದಿಗೆ ವ್ಯವಹಾರ ಬೇಡ.

ಮಕರ
ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ
ಅದರಿಂದ ಸಿಕ್ಕುವ ಫಲವೂ ಪ್ರಾಮಾಣಿಕ
ವಾಗಿಯೇ ಇರುತ್ತದೆ. ಸಾಲದ ಹೊರೆಯಿಂದ
ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿದ್ದೀರಿ. ತಾಳ್ಮೆಯಿಂದ
ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಪ್ರಯತ್ನ ಮಾಡಿ.

ಕುಂಭ
ಅನ್ಯ ಕಾರ್ಯದ ಒತ್ತಡದಿಂದ ಮುಖ್ಯವಾದ
ಕಾರ್ಯಕ್ರಮದಿಂದ ದೂರ ಉಳಿಯಬೇಕಾಗಿ
ಬರಬಹುದು. ಅಂಜಿಕೆ ಬಿಟ್ಟು ಎಲ್ಲರೊಂದಿಗೂ
ಬೆರೆಯಲಿದ್ದೀರಿ. ನಿಮ್ಮ ಪ್ರತಿಭೆಗೆ ತಕ್ಕ ಸ್ಥಾನ ಇಂದು
ಸಿಗುವ ಸಾಧ್ಯತೆ ಇದೆ. ದೊಡ್ಡ ನಿರ್ಧಾರ ತೆಗೆದುಕೊಳ್ಳುವ
ಮುನ್ನ ಹಲವು ಸಲ ಯೋಚನೆ ಮಾಡುವುದು ಒಳಿತು.

ಮೀನ
ಮನೆಯಲ್ಲಿ ಸಣ್ಣ ಪ್ರಮಾಣದ ಕಿರಿಕಿರಿ ಇದ್ದರೂ
ಅದು ತಕ್ಷಣವೇ ತಿಳಿಯಾಗಲಿದೆ. ದೊಡ್ಡ
ಪ್ರಮಾಣದ ವ್ಯವಹಾರ ಮಾಡುವವರು ಸ್ವಲ್ಪ
ತಡ ಮಾಡುವುದು ಒಳಿತು. ಶುಭ ಕಾರ್ಯಕ್ಕೆ
ಇದು ಒಳ್ಳೆಯ ವಾರ. ಬಂಧುಗಳು ದೂರವಾಗಲಿದ್ದಾರೆ.
ಸ್ನೇಹಿತರ ಸಹಕಾರದಿಂದ ಕಾರ್ಯಸಿದ್ಧಿ