ಮೇಷ: ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಳ್ಳಿ. ಆಗುವುದೆಲ್ಲವೂ ಒಳ್ಳೆಯದಕ್ಕೆ. ಮಿಂಚಿ ಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ.

ವೃಷಭ: ನಿಗದಿ ಮಾಡಿಕೊಂಡ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡಿ ಮುಗಿಸಲಿದ್ದೀರಿ. ದೊಡ್ಡ ಮಟ್ಟದ ವ್ಯವಹಾರಕ್ಕೆ ಇದು ಸಕಾಲ.

ಮಿಥುನ: ಸ್ನೇಹಿತರಿಂದ ಆರ್ಥಿಕ ಸಹಕಾರ ದೊರೆಯಲಿದೆ. ಕೆಲಸದಲ್ಲಿ ವೇಗ ಹೆಚ್ಚಾಗಲಿದೆ. ದೂರದ ಊರುಗಳಿಗೆ ಹೋಗುವ ಪ್ರಸಂಗ ಬರವುದು.

ಕಟಕ: ನಿಮ್ಮ ವಯಕ್ತಿಕ ಅಭಿಪ್ರಾಯಗಳಿಗೆ ಮಾನ್ಯತೆ ದೊರೆಯಲಿದೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಸರಿಯಾದ ನಡೆ.

ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ?

ಸಿಂಹ: ಮೇಲಾಧಿಕಾರಿಯಿಂದ ಕಿರಿಕಿರಿ ಇರುತ್ತದೆ. ಆರೋಗ್ಯದಲ್ಲಿ ಕೊಂಚ ಏರುಪೇರು. ಹಿಂದೆ ಕಂಡ ಕನಸುಗಳು ಇಂದು ನನಗಸಾಗಲಿವೆ. 

ಕನ್ಯಾ: ಬೆಳಿಗ್ಗೆಯಿಂದಲೇ ಅವಿರತವಾಗಿ ದುಡಿಯುವಿರಿ. ಮಾಡಿದ ಕಾಯಕಕ್ಕೆ ಮುಂದೆ ಪ್ರತಿಫಲವಿದೆ. ಜ್ಞಾನಿಗಳ ಸಂಪರ್ಕ ಸಾಧಿಸಿಲಿದ್ದೀರಿ.

ತುಲಾ: ಮತ್ತೊಬ್ಬರ ಕಾರ್ಯಗಳು ನಿಮ್ಮ ಹೆಗಲಿಗೆ ಬೀಳುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಜಾಗೃತೆ ವಹಿಸಿ.

ವೃಶ್ಚಿಕ: ತಾಯಿಯ ಮಾತಿನಿಂದ ನಿಮ್ಮ ಮನದ ದುಃಖ ನಿವಾರಣೆಯಾಗಲಿದೆ. ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೀರಿ. ಶ್ರೀ ಗುರುವಿನ ಕೃಪೆ ನಿಮಗಿದೆ.

ಧನಸ್ಸು: ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಕಾಣಲಿದೆ. ಅತಿ ಆಸೆ ಒಳ್ಳೆಯದಲ್ಲ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ. ಶುಭಫಲ.

ಮಕರ: ಆತ್ಮೀಯರ ಮನೆಗೆ ಭೇಟಿ ನೀಡಲಿದ್ದೀರಿ. ನಿಮ್ಮ ಪ್ರತಿಭೆಯ ಬಗ್ಗೆ ನಾಲ್ಕಾರು ಮಂದಿಗೆ ತಿಳಿಯಲಿದೆ. ಆಭರಣ ಕೊಳ್ಳುವ ಸಾಧ್ಯತೆ ಇದೆ.

ಕುಂಭ: ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದು ಬೇಡ. ಅನ್ನಿಸಿದ್ದನ್ನು ಮಾಡಿ ಮುಗಿಸಿ. ಹಿಂದಿನ ಘಟನೆಗಳ ಬಗ್ಗೆ ಕೊರಗುತ್ತಾ ಕೂರದಿರಿ.

ಮೀನ: ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ನಿಮಗೇ ಅಭಿಮಾನ ಮೂಡಲಿದೆ. ಆಹಾರದ ಬಗ್ಗೆ ಜಾಗೃತೆ ಇರಲಿ.