ಮೇಷ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಸಿಂಹ: ಸಹೋದರನ ಸಹಕಾರದಿಂದ ಕಿರು ಉದ್ಯಮ ಸ್ಥಾಪನೆ ಮಾಡುವಿರಿ. ನಂಬಿಕೆಯಿಂದ ಆತ್ಮ ಶಕ್ತಿ ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ.

ಕನ್ಯಾ: ನಿಮ್ಮ ಪಾಡಿಗೆ ನೀವು ಇದ್ದು ಬಿಡಿ. ನೆರಯವರ ಕಷ್ಟಕ್ಕೆ ನೆರವಾಗುವಿರಿ. ಇಡೀ ದಿನ ಉಲ್ಲಾಸದಿಂದ ಇರುವಿರಿ. ನೆಮ್ಮದಿ ಹೆಚ್ಚಲಿದೆ.

ತುಲಾ: ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಹಿರಿಯರ ಮಾತಿಗೆ ವಿರುದ್ಧವಾಗಿ ಹೋದರೆ ಕಷ್ಟವಾಗಬಹುದು.

ವಾರ ಭವಿಷ್ಯ: ಈ ರಾಶಿಯವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ ಸಮಯವಿದು

ವೃಶ್ಚಿಕ: ಇಂದು ನಿಮಗೆ ಗುರು ಬಲ ಚೆನ್ನಾಗಿದೆ. ಗಣೇಶನ ಆರಾಧನೆ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ.

ಧನಸ್ಸು: ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡುವಿರಿ. ಹೊಸ ವಸ್ತು ಕೊಳ್ಳುವಾಗ ಎಚ್ಚರ ಇರಲಿ. ಒಳ್ಳೆಯ ಕಾರ್ಯ ಮಾಡಲಿದ್ದೀರಿ.

ಮಕರ: ಸ್ನೇಹಿತರಿಗೆ ಆರ್ಥಿಕವಾಗಿ ನೆರವಾಗಲಿದ್ದೀರಿ. ಇಡೀ ದಿನ ಸಂತೋಷದಿಂದ ಇರುವಿರಿ. ಗೆಲುವು ಬೇಕು ಎಂದರೆ ಶ್ರಮ ಹಾಕಬೇಕು.

ಕುಂಭ: ಮನಸ್ಸಿದ್ದಂತೆ ಮಾದೇವ. ನೀವು ಅಂದುಕೊಂಡಿದ್ದು ಇಂದು ನೆರವೇರಲಿದೆ. ಶುಭ ಕಾರ್ಯಗಳು ಸನಿಹವಾಗಲಿವೆ.

ಮೀನ: ನಿಮ್ಮ ಪಾಲಿನ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಮತ್ತೊಬ್ಬರ  ನಂಬಿಕೆಗೆ ನಿಮ್ಮಿಂದ ಧಕ್ಕೆಯಾಗದಿರಲಿ.