ಮೇಷ: ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ಅದು ನಿಮ್ಮಿಂದ ಆಗುತ್ತದೆಯೋ ಇಲ್ಲವೋ ಎನ್ನುವುದನ್ನು ಅರಿತುಕೊಳ್ಳಿ. 

ವೃಷಭ: ಮಾತಿನಿಂದಲೇ ಯುದ್ಧ ಗೆಲ್ಲಬಹುದು. ಮಾತಿನಿಂದಲೇ ಯುದ್ಧ ಆಗುವುದು. ಹಾಗಾಗಿ ಮಾತಿನ ಮೇಲೆ ಹಿಡಿತ ಇರಲಿ.

ಮಿಥುನ: ಗೆಲ್ಲುತ್ತೇನೆ ಎಂದು ಹೊರಟಾಗ ಸೋಲುವುದಕ್ಕೂ ಸಿದ್ಧವಾಗಿರಬೇಕು. ಸೋಲಿಗೆ ಅಂಜದೇ ಮುಂದೆ ನಡೆದರೆ ಜಯ ಸಿಗಲಿದೆ.

ಕಟಕ: ತಂದೆಯ ಮಾತು ಕಹಿ ಎನ್ನಿಸಿದರೂ ಅದರಿಂದ ಮುಂದೆ ನಿಮಗೆ ಅನುಕೂಲ ಇದ್ದೇ ಇದೆ. ಆಡಿಕೊಳ್ಳುವವರ ಮಾತಿಗೆ ಬೆಲೆ ನೀಡದಿರಿ.

ಸಿಂಹ: ಕೊಂಡ ವಸ್ತುವಿನ ಲೋಪ ಕಂಡು ಮರುಗುವುದಕ್ಕೆ ಬದಲಾಗಿ ಹೊಸ ವಸ್ತು ಕೊಳ್ಳುವ ಮೊದಲೇ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾ: ಬಂಗಾರದಿಂದ ಬಾಳು ಬಂಗಾರವಾಗದು. ಸಂತೋಷದಿಂದ ಇದ್ದರೆ ಅದೇ ಬಂಗಾರ. ಹೆಚ್ಚು ಆಸೆ ಬೇಡ. ಸಿಕ್ಕಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳಿ.

ತುಲಾ: ಸುಮ್ಮನೆ ಇದ್ದರೆ ತಲೆಯ ಮೇಲೆ ಕೂರುವ ಜನರ ಮುಂದೆ ತಿರುಗಿ ಬೀಳುವುದನ್ನು ಕಲಿತರೆ ತುಲಾ ಒಳಿತು. ಧೈರ್ಯದಿಂದ ಮುಂದೆ ಸಾಗಿ

ವೃಶ್ಚಿಕ: ನಿಮ್ಮ ವೈರಿಯ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾದ ಸ್ಥಿತಿ ಬರಲಿದೆ. ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ. ಆತ್ಮವಿಶ್ವಾಸ ಇರಲಿ.

ಧನುಸ್ಸು: ಚಿನ್ನಾಭರಣ ಕೊಳ್ಳುವ ಅವಕಾಶ ಬರಲಿದೆ. ಸರಿಯಾದ ಸಮಯಕ್ಕೆ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಿ

ಮಕರ: ಸ್ನೇಹಿತರೊಂದಿಗೆ ಸಣ್ಣ ಮನಸ್ಥಾಪ ಉಂಟಾಗಲಿದೆ. ಸಾಲ ಕೊಟ್ಟು ಕೆಟ್ಟವರಾಗುವುದಕ್ಕಿಂತ ಕೊಡದೇ ಇರುವುದು ಮೇಲು

ಕುಂಭ: ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಂಡು ಮುಂದೆ ಸಾಗಿದಿರಾದರೆ ಮುಂದೆ ಶುಭ ದಿನಗಳು ನಿಮಗಾಗಿ ಕಾದಿವೆ.

ಮೀನ: ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ ಯಾದರೂ ನಿಮ್ಮ ಪ್ರಯತ್ನವೂ ಮುಖ್ಯ. ಒಳ್ಳೆಯದರ ಕಡೆಗೆ ನಿಮ್ಮ ಆಲೋಚನೆ ಇರಲಿ.