ಮೇಷ: ಕ್ಷುಲ್ಲಕ ಕಾರಣಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಇಡೀ ದಿನ ನಿಮ್ಮ ಪಾಡಿಗೆ ನೀವಿದ್ದು ಬಿಡಲಿದ್ದೀರಿ. ನೆಮ್ಮದಿ ಇದೆ.

ವೃಷಭ: ಮತ್ತೊಬ್ಬರ ಕಷ್ಟಕ್ಕೆ ನೆರವು ನೀಡಲಿದ್ದೀರಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಜಯ

ಮಿಥುನ: ನಿಮ್ಮ ಪಾಲಿಗೆ ಬಂದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದೀರಿ. ಹೊಸ ಆಲೋಚನೆಗಳು ಹುಟ್ಟಿಕೊಳ್ಳಲಿವೆ

ಕಟಕ: ಕಹಿ ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಕೊರಗುವುದು ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಸಿಂಹ: ವಿದೇಶಿ ಪ್ರಯಾಣಕ್ಕೆ ಬೇಕಾದ ಎಲ್ಲಾ ತಯಾರಿಗಳೂ ಮುಕ್ತಾಯವಾಗಲಿವೆ. ರೈತರಿಗೆ ಹೆಚ್ಚಿನ ಸಿಂಹ ಅನುಕೂಲವಾಗಲಿದೆ. ನೆಮ್ಮದಿ ಹೆಚ್ಚಲಿದೆ.

ಕನ್ಯಾ: ನೀವು ಮಾಡಿದ ಕಾರ್ಯಕ್ಕೆ ತಕ್ಕದಾದ ಪ್ರತಿಫಲವನ್ನು ಹೊಂದಲಿದ್ದೀರಿ. ದ್ವಿಚಕ್ರ ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ತುಲಾ: ಮಾತು ಮಾತಿಗೂ ಸಿಡುಕು ಮಾಡಿಕೊಳ್ಳು ವುದು ಬೇಡ. ದೊಡ್ಡವರ ಮಾತಿಗೆ ಬೆಲೆ ತುಲಾ ನೀಡಿ. ಸಂತೋಷದಿಂದ ದಿನ ಕಳೆಯುವಿರಿ.

ವೃಶ್ಚಿಕ: ಹಳೆಯ ಸಾಲಗಳು ಇಂದು ವಾಪಸ್ ಆಗಲಿವೆ. ವ್ಯವಹಾರದಲ್ಲಿ ಕೊಂಚ ಹಿನ್ನಡೆ. ನಿಮ್ಮ ಕಾರ್ಯಗಳನ್ನು ನೀವೇ ಮಾಡಿಕೊಳ್ಳಬೇಕು.

ಧನುಸ್ಸು: ನಿಮ್ಮ ಶಕ್ತಿಯನ್ನು ಅರಿತುಕೊಂಡು ಕೆಲಸ ಕಾರ್ಯಗಳಿಗೆ ಕೈ ಹಾಕಿ. ದೂರದ ಬೆಟ್ಟ ಯಾವಾಗಲೂ ನುಣ್ಣಗೆ ಕಾಣುತ್ತದೆ.

ಮಕರ: ಕೈಗೆ ಸಿಗದ ದ್ರಾಕ್ಷಿ ಹುಳಿ ಎಂದುಕೊಂಡು ಸುಮ್ಮನೆ ಕೂರುವುದು ಬೇಡ. ನಿರಂತರ ಪ್ರಯತ್ನದಿಂದ ಯಶಸ್ಸು ಸಿಕ್ಕೇ ಸಿಕ್ಕುತ್ತದೆ.

ಕುಂಭ:ನಿಮ್ಮ ಮೇಲಿನ ಆರೋಪಗಳಿಗೆ ನಿಮ್ಮ ಕಾರ್ಯಗಳಿಂದಲೇ ಉತ್ತರ ಕೊಡಿ. ಅತಿ ಭಾವುಕತೆ ಒಳ್ಳೆಯದ್ದಲ್ಲ. ಸಂತೋಷ ಹೆಚ್ಚಲಿದೆ.

 ಮೀನ: ಹಿಂದು ಮುಂದು ಆಲೋಚನೆ ಮಾಡದೇ  ಯಾರಿಗೂ ಮಾತು ಕೊಡುವುದಕ್ಕೆ ಹೋಗದಿರಿ. ಸ್ನೇಹಿತರೊಂದಿಗೆ ಜಗಳ ಬೇಡ.