ಮೇಷ: ಸಿಕ್ಕಷ್ಟು ಸಮಯವನ್ನು ಸದುಪಯೋಗ ಮಾಡಿಕೊಂಡು ಒಳ್ಳೆಯ ಕಾರ್ಯ ಮಾಡಲಿದ್ದೀರಿ. ವ್ಯಾಪಾರಿಗಳಿಗೆ ಲಾಭ

ವೃಷಭ: ಸುಲಭಕ್ಕೆ ಸಾಲ ಸಿಗುತ್ತಿದೆ ಎಂದು ಹೆಚ್ಚು ಹೊರೆ ಹೊತ್ತುಕೊಳ್ಳದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ನೆಮ್ಮದಿ ಹೆಚ್ಚಾಗಲಿದೆ.

ಮಿಥುನ:  ದೊಡ್ಡ ಗಂಡಾಂತರದಿಂದ ತಪ್ಪಿಸಿಕೊಳ್ಳಲಿದ್ದೀರಿ. ತಂದೆಯ ಮಾತಿನಿಂದ ಮನಸ್ಸಿಗೆ ನೋವಾದರೂ ಮುಂದೆ ಪ್ರಯೋಜನವಿದೆ.

ಕಟಕ: ಸಣ್ಣ ಸಣ್ಣ ಕಾರ್ಯಗಳಿಂದಲೇ ದೊಡ್ಡ ಸಂತೋಷ ದೊರೆಯುತ್ತದೆ. ಹಿರಿಯರ ಮಾತಿನಂತೆ ನಡೆದುಕೊಳ್ಳಿ. ಶುಭ ಫಲ

ಸಿಂಹ: ವೃತ್ತಿಯಲ್ಲಿ ಪ್ರಗತಿ. ವ್ಯವಹಾರದಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ. ನಿಮ್ಮ ಜವಾಬ್ದಾರಿ ಅರಿತುಕೊಂಡು ಮಾತನಾಡಿ.

ಕನ್ಯಾ: ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ನೆನೆದುಕೊಳ್ಳಿ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಆಗುವುದೆಲ್ಲಾ ಒಳ್ಳೆಯದ್ದಕ್ಕೆ.

ತುಲಾ: ಮುಖವಾಡ ಹಾಕಿಕೊಂಡವರ ಬಗ್ಗೆ ಎಚ್ಚರ ಇರಲಿ. ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಬೇಡ.

ವೃಶ್ಚಿಕ: ಪೂರ್ವಯೋಜಿತ ಕಾರ್ಯಗಳಲ್ಲಿ ವ್ಯತ್ಯಾಸಗಳಾಗಲಿವೆ. ಅಂದುಕೊಂಡದ್ದಕ್ಕಿಂತ ಹೆಚ್ಚು ಲಾಭ. ಮಕ್ಕಳ ಆರೋಗ್ಯ ಸ್ಥಿರ

ಧನುಸ್ಸು: ಹೊಸ ಉದ್ಯೋಗಾವಕಾಶ ದೊರೆಯಲಿದೆ. ಮಕ್ಕಳ ಬಗ್ಗೆ ವಿಶೇಷ ಕಾಳಜಿ ಇರಲಿ. ಮತ್ತೊಬ್ಬರಿಗೆ ಕಾಯುತ್ತಾ ಸಮಯ ಕಳೆಯದಿರಿ.

ಮಕರ: ಆಸೆಗಳು ಸಹಜ. ಅವನ್ನು ನಿಯಂತ್ರಿಸಿ ಕೊಂಡರೆ ಸಂತೋಷ ಹೆಚ್ಚಾಗಲಿದೆ. ಬಂದಿದ್ದನ್ನು ಬಂದ ಹಾಗೆ ಎದುರಿಸಿ

ಕುಂಭ: ಪದೇ ಪದೇ ಹಿಂಸೆ ನೀಡುತ್ತಿದ್ದ ವ್ಯಕ್ತಿಗಳು ನಿಮ್ಮಿಂದ ದೂರವಾಗಲಿದ್ದಾರೆ. ಕಣ್ಣಿಗೆ ಕಂಡದ್ದೆಲ್ಲವೂ ಸತ್ಯವಲ್ಲ. ನಿಧಾನವಾಗಿ ಸಾಗಿ.

ಮೀನ: ಹೊಸ ವಾಹನ ಖರೀದಿ ಸಾಧ್ಯತೆ. ಮನೆಯಲ್ಲಿ ಶುಭ ಸಮಾರಂಭಕ್ಕೆ ಚಾಲನೆ ಸಿಗಲಿದೆ. ಎಲ್ಲರಿಗೂ ಸಂತೋಷ ನಿಮ್ಮಿಂದ ಸಿಗಲಿದೆ.