ಮೇಷ: ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ನೀವು ಅಂದುಕೊಂಡದ್ದೇ ಅಂತಿಮವಾಗುವುದಿಲ್ಲ. ಶುಭ ಸುದ್ದಿಗಾಗಿ ಕಾಯಿರಿ

ವೃಷಭ: ಜಗಳ ಮಾಡುವುದರಿಂದ ಎಲ್ಲಾ ಸಮಸ್ಯೆ ಗಳಿಗೂ ಪರಿಹಾರ ದೊರೆಯುವುದಿಲ್ಲ. ತಂದೆಯೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬನ್ನಿ.

ಮಿಥುನ: ರೈತರ ಪಾಲಿಗೆ ಇಂದು ಶುಭ ದಿನ. ಹಳೆಯ ಸಾಲಗಳು ವಾಪಸ್ ಆಗಲಿವೆ. ಎಲ್ಲದ್ದಕ್ಕೂ ಕಾಲ ಕೂಡಿ ಬರಬೇಕು. ನೆಮ್ಮದಿ ಹೆಚ್ಚಲಿ

ಕಟಕ: ನಿಮಗೆ ತೊಂದರೆ ಮಾಡಿಕೊಂಡು ಮತ್ತೊಬ್ಬರ ಸಹಾಯಕ್ಕೆ ನಿಲ್ಲಲಿದ್ದೀರಿ. ಹೆಚ್ಚು ಉತ್ಸಾಹವೂ ಒಮ್ಮೊಮ್ಮೆ ಅಪಾಯ ತಂದೊಡ್ಡಬಲ್ಲುದು

ಸಿಂಹ: ಕಿವುಡನ ಮುಂದೆ ನಿಂತು ಕಿನ್ನರಿ ನುಡಿಸಿದಂತೆ ನಿಮ್ಮ ಸ್ಥಿತಿ ಆಗಲಿದೆ. ಎಲ್ಲಾ ಕಡೆಯೂ ಮೂಗು ತೂರಿಸಿಕೊಂಡು ಹೋಗದಿರಿ.

ಕನ್ಯಾ:  ಹತ್ತು ಖಾಲಿ ಮಾತಿಗಿಂತ ಒಂದು ತೂಕದ ಮಾತಿಗೆ ಬೆಲೆ ಹೆಚ್ಚು. ನಿಮ್ಮಿಂದ ಇತರರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ. ಶುಭ ಫಲ.

ತುಲಾ: ಮನೆಯ ಮುಖ್ಯಸ್ಥನ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಎಲ್ಲದ್ದಕ್ಕೂ ಕಾರಣ ಕೇಳುತ್ತಾ ಕೂರುವುದು ಬೇಡ.

ವೃಶ್ಚಿಕ: ನಿಮ್ಮೊಳಗಿನ ದಯಾ ಗುಣವೇ ನಿಮಗೆ ವರವಾಗಿ ಪರಿಣಮಿಸಲಿದೆ. ದೊಡ್ಡ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡಲಿದ್ದೀರಿ

ಧನುಸ್ಸು: ಸ್ವಂತ ಬುದ್ಧಿಯಿಂದ ಮಾಡಿದ ಎಲ್ಲಾ ಕಾರ್ಯಗಳಲ್ಲೂ ಯಶ ಕಾಣಲಿದ್ದೀರಿ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳಿತು.

ಮಕರ: ಹಣಕಾಸಿನ ತೊಂದರೆ ಉಂಟಾಗಲಿದೆ. ಉದ್ಯೋಗದಲ್ಲಿ ಪ್ರಗತಿ. ಸಂಸಾರದಲ್ಲಿ ಇರುವ ಗೊಂದಲಗಳು ನಿವಾರಣೆಯಾಗಲಿವೆ.

ಕುಂಭ: ಬಾಯಿ ಚಪಲಕ್ಕಾಗಿ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿ

ಮೀನ: ನಿಮ್ಮ ಸುತ್ತಲೂ ಇರುವ ಸ್ವಾರ್ಥಿಗಳ ಬಗ್ಗೆ ಎಚ್ಚರ ಇರಲಿ. ಸ್ವಲ್ಪ ಮೈ ಮರೆತರೂ ಅಪಾಯ ಎದುರಾಗುವ ಸಾಧ್ಯತೆ ಇದೆ.