ನಿಮ್ಮದಲ್ಲದ ತಪ್ಪಿಗೆ ಈ ರಾಶಿಯವರು ದಂಡ ತೆರಬೇಕಾದೀತು ಎಚ್ಚರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Aug 2018, 7:01 AM IST
Daily Horoscope August 14
Highlights

ನಿಮ್ಮದಲ್ಲದ ತಪ್ಪಿಗೆ ಈ ರಾಶಿಯವರು ದಂಡ ತೆರಬೇಕಾದೀತು ಎಚ್ಚರ

ನಿಮ್ಮದಲ್ಲದ ತಪ್ಪಿಗೆ ಈ ರಾಶಿಯವರು ದಂಡ ತೆರಬೇಕಾದೀತು ಎಚ್ಚರ


ಮೇಷ
ಮೆಕ್ಯಾನಿಕ್, ದೋಬಿ, ಕಾರ್ಪೆಂಟರ್‌ಗಳಿಗೆ ಕೈ
ತುಂಬಾ ಕೆಲಸವಿದೆ. ಶ್ರಮದ ಕೆಲಸವಾದ್ದರಿಂದ
ಆರೋಗ್ಯದ ಬಗ್ಗೆ ಕೂಡ ಅಷ್ಟೇ ನಿಗಾ ಇರಲಿ.

ವೃಷಭ
ದೂರದ ಸಂಬಂಧಿಯೊಬ್ಬರ ಮನೆಯಲ್ಲಿನ
ವಿಷಯವು ನಿಮ್ಮನ್ನು ಹೆಚ್ಚು ಬಾಧಿಸಲಿದೆ.
ನೀವು ಕಷ್ಟದಲ್ಲಿದ್ದಾಗ ಅವರು ನೆರವಾಗಿದ್ದರು.

ಮಿಥುನ
ಕಾರ್ಯದಲ್ಲಿ ಶ್ರದ್ಧೆ ಅಗತ್ಯ. ನಿಮ್ಮದಲ್ಲದ
ತಪ್ಪಿಗೂ ನೀವು ದಂಡ ತೆರಬೇಕಾದೀತು.
ವಾಹನ ಓಡಿಸುವಾಗ ಜಾಗರೂಕರಾಗಿರಿ.

ಕಟಕ
ದ್ವೇಷಿಸುವರೂ ನಿಮ್ಮ ಸ್ನೇಹಿತರಾಗುತ್ತಾರೆ.
ಹಿರಿಯರ ಸ್ಮರಣೆಯೇ ಇದಕ್ಕೆಲ್ಲಾ ಕಾರಣ.
ನೆಮ್ಮದಿಯು ನಿಮ್ಮನ್ನೇ ಅರಸಿ ಬರಲಿದೆ.

ಸಿಂಹ
ಕುಟುಂಬದ ನಿಮ್ಮ ಆದಾಯವು ಕ್ರಮೇಣ
ಹೆಚ್ಚಾಗಲಿದೆ. ಆದರೆ ನಿಮ್ಮ ಶ್ರಮ ಹಾಗೂ
ಪರಿಶ್ರಮವೇ ಇದಕ್ಕೆಲ್ಲಾ ಮೂಲಾಧಾರವಷ್ಟೆ.

ಕನ್ಯಾ
ರೈಲಿನ ಪ್ರಯಾಣವು ಖುಷಿ ತರಲಿದ್ದರೂ
ಸಮಯಕ್ಕೆ ಸರಿಯಾಗಿ ಗುರಿ ತಲುಪಲು
ತಡವಾಗಲಿದೆ. ಮುಂದಾಲೋಚನೆ ಅಗತ್ಯ.

ತುಲಾ 
ಮಳೆ-ಚಳಿ ಬಾಧಿಸುವ ಕಾಲವಿದು ಇಂತಹ
ಪರಿಸ್ಥಿತಿಯಲ್ಲಿ ಟೂರ್‌ಗೆ ಪ್ಲಾನ್ ಮಾಡದಿರಿ.
ವಾತಾವರಣವೀಗ ಪ್ರತಿಕೂಲವಾದೀತು!

ವೃಶ್ಚಿಕ
ನಿಮ್ಮ ಹಲವು ವಿವಾದಗಳಲ್ಲಿ ಕೆಲವು ಇಂದು
ಬಗೆಹರಿಯಲಿವೆ. ಇನ್ನೂ ಮತ್ತಷ್ಟು ಯಶಸ್ಸು
ಕಾಣುವ ದಿನವೂ ಇದಾಗಿದೆ. ಶ್ರಮ ಹೆಚ್ಚು. 

ಧನುಸ್ಸು
ಪಿತ್ರಾರ್ಜಿತವಾದ ಆಸ್ತಿಯ ಮಾತುಕತೆಗಳು
ಇಂದು ನಡೆಯಲಿವೆ. ಯಾವುದೇ ಆತಂಕವು
ಸಲ್ಲದು. ಆದದ್ದೆಲ್ಲವೂ ಒಳಿತೇ ಎಂದೆಣಿಸಿರಿ.

ಮಕರ
ವಾಹನ ವಿಲೇವಾರಿಯಲ್ಲಿ ಗಣನೀಯವಾದ
ಆದಾಯ ಸಿಗಲಿದೆ. ಸಮಾಜ ಸೇವೆಯಲ್ಲಿ
ಹೆಚ್ಚು ಆಸಕ್ತಿ ಮೂಡಲಿದೆ. ಖುಷಿಯ ದಿನ.

ಕುಂಭ
ನೀವಂದುಕೊಂಡ ಎಲ್ಲಾ ಕೆಲಸಗಳು ಇಂದು
ನಿರಾತಂಕವಾಗಿ ನೆರವೇರುವವು. ಗ್ರಹಗತಿಗೆ
ಮನೆಯ ವಾತಾವರಣವೂ ಪೂರಕವಾಗಿದೆ.

ಮೀನ
ದೊಡ್ಡ ಆಫೀಸರಾದರೂ ಮನೆಯಲ್ಲಿನ ಬಿಗು
ಪರಿಸ್ಥಿತಿಗೆ ಕುಗ್ಗಿದ್ದೀರಿ. 
ಬೇಸರ ಪಡದೆ ಮನೆ ಕೆಲಸಗಳಲ್ಲಿ ಭಾಗಿಯಾದಲ್ಲಿ ನೆಮ್ಮದಿ ಸಿಗುತ್ತೆ.

loader