ಈ ರಾಶಿಗೆ ಈ ದಿನವು ಅತ್ಯಂತ ಶುಭದಾಯಕ 


ಮೇಷ
ನಂಬಿಕೆಯೇ ದೇವರು. ನಿಮ್ಮ ಮೇಲೆ ನಿಮಗೆ
ಇರುವ ನಂಬಿಕೆಯೇ ನಿಮ್ಮ ಶಕ್ತಿಯಾಗಲಿದೆ.
ಬೇರೆಯವರ ಮಾತಿಗೆ ಬೆಲೆ ನೀಡಿ, ಅತಿ ಬೇಡ

ವೃಷಭ
ದಿನಪೂರ್ತಿ ತಣ್ಣಗೆ ಕಳೆಯಲಿದೆ. ಹಬ್ಬದ
ನಡುವಲ್ಲೂ ವಿಶ್ರಾಂತಿ. ಆಪ್ತರಿಂದ ಆರ್ಥಿಕ
ಸಹಕಾರ. ಧೈರ್ಯ ಹೆಚ್ಚಾಗಲಿದೆ.

ಮಿಥುನ
ನಿಮ್ಮನ್ನು ಪ್ರೀತಿಸುವವರಿಗಾಗಿ ಒಂದಷ್ಟು
ಸಮಯ ಮೀಸಲಾಗಿಡಿ. ಹೆಚ್ಚು ಉತ್ಸಾಹ
ದಿಂದ ಎಲ್ಲಾ ಕೆಲಸದಲ್ಲೂ ಭಾಗಿಯಾಗುವಿರಿ.

ಕಟಕ
ನಿಂದಕರು ಸುತ್ತ ಮುತ್ತ ಇದ್ದೇ ಇರುತ್ತಾರೆ.
ನೀವು ಅವರ ಮಾತುಗಳನ್ನು ಕೇಳುತ್ತಾ ಕೂರು
ವುದು ಬೇಡ. ಅಂದುಕೊಂಡದ್ದನ್ನು ಮಾಡಿ.

ಸಿಂಹ
ಸಿಹಿ ತಿನಿಸುಗಳ ಅತಿಯಾದ ಸೇವನೆ ಬೇಡ.
ಆರೋಗ್ಯವೇ ನಿಮ್ಮ ಯಶಸ್ಸಿನ ಗುಟ್ಟಾಗಲಿದೆ.
ಉದ್ಯೋಗದಲ್ಲಿ ಪ್ರಗತಿ ಸಾಧ್ಯವಾಗಲಿ

ಕನ್ಯಾ
ಒಂದೇ ವಿಚಾರದ ಬಗ್ಗೆ ಇಡೀ ದಿನ ಮುಳು
ಗುವಿರಿ. ಸಕಾರಾತ್ಮಕ ಚಿಂತನೆಗಳು ಹೆಚ್ಚಿ
ಅದರಿಂದ ಬೇಗನೇ ಫಲ ದೊರೆಯಲಿದೆ.

ತುಲಾ 
ಮೊಸರಲ್ಲೂ ಕಲ್ಲು ಹುಡುಕುವ ಪ್ರಯತ್ನ
ಬೇಡ. ಒಳ್ಳೆಯ ಕೆಲಸಗಳಿಗೆ ಮೆಚ್ಚುಗೆ
ಸೂಚಿಸಿ. ಮನಸ್ಸು ಉಲ್ಲಾಸದಿಂದ ಇರಲಿದೆ.

ವೃಶ್ಚಿಕ
ಅಣ್ಣನಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ
ದೊರೆಯಲಿದೆ. ಮಕ್ಕಳನ್ನು ಪ್ರೀತಿಯಿಂದ
ಕಾಣುವಿರಿ. ಹಬ್ಬದ ತಯಾರಿ ಮುಗಿಯಲಿದೆ. 

ಧನುಸ್ಸು
ಸ್ವಂತ ಬುದ್ದಿಯಿಂದ ಕೆಲಸ ಮಾಡಿ.
ವೈಯಕ್ತಿಕವಾಗಿ ಲಾಭ. ಮನೆ ಮಂದಿಗೆ
ಕೊಂಡ ನಷ್ಟ. ಎಲ್ಲಿಯೂ ನಿಲ್ಲುವುದು ಬೇಡ.

ಮಕರ
ಖ್ಯಾತ ವ್ಯಕ್ತಿಗಳ ಸಂಪರ್ಕ ದಕ್ಕಲಿದೆ. ಹೆಣ್ಣು
ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು
ಉಂಟಾಗಲಿದೆ. ಶುಭ ಸುದ್ದಿ ತಿಳಿಯುವುದು.

ಕುಂಭ
ಮನೆಗೆ ಹೊಸ ಬಂಧುಗಳ ಆಗಮನ. ಖರ್ಚು
ಅಧಿಕವಾದರೂ ಮುಂದೆ ಆದಾಯ
ಹೆಚ್ಚಾಗಲಿದೆ. ಮೌನವಾಗಿರುವುದು ಲೇಸು.

ಮೀನ 
ಒಂದೇ ಏಟಿಗೆ ಎರಡು ಹಣ್ಣುಗಳು ಬೀಳಲಿವೆ.
ಅನಿರೀಕ್ಷಿತ ಘಟನೆಗಳಿಂದ ಲಾಭ. ಸಂಗೀತ
ಕೇಳುವ ಗೀಳು ಹೆಚ್ಚಾಗಲಿದೆ. ಇದು ಒಳಿತು.