Asianet Suvarna News Asianet Suvarna News

ಈ ರಾಶಿಯವರು ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಇರಿಸಿ

ಈ ರಾಶಿಯವರು ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಇರಿಸಿ

Daily Horoscope 31 October 2018
Author
Bengaluru, First Published Oct 31, 2018, 7:00 AM IST
  • Facebook
  • Twitter
  • Whatsapp

ಈ ರಾಶಿಯವರು ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಇರಿಸಿ

ಮೇಷ
ಅನಾವಶ್ಯಕವಾಗಿ ಕೋಪ ಮಾಡಿಕೊಳ್ಳುವುದು
ಬೇಡ. ನಿಮ್ಮ ತಪ್ಪಿನಿಂದ ಮತ್ತೊಬ್ಬರು ತುಸು
ತೊಂದರೆ ಅನುಭವಿಸಲಿದ್ದಾರೆ.

ವೃಷಭ
ದೂರದ ಪ್ರಯಾಣ ಮಾಡಬೇಕಾದ
ಅನಿವಾರ್ಯತೆ ಎದುರಾಗಲಿದೆ. ಸರಕಾರಿ
ಕಾರ್ಯಕ್ರಮಗಳಲ್ಲಿ ಭಾಗಿ. ದಿನಾಂತ್ಯಕ್ಕೆ ಶುಭ

ಮಿಥುನ
ಹೆಚ್ಚು ನೆಮ್ಮದಿ ನೆಲೆಗೊಳ್ಳಲಿದೆ. ಸುತ್ತಾಟಗಳು
ಹೆಚ್ಚಾಗಲಿವೆ. ಹಣಕಾಸಿನಿ ತೊಂದರೆಯಿಂದ
ಹೊರಗೆ ಬರಲಿದ್ದೀರಿ. ಶುಭ ಫಲ.

ಕಟಕ
ಹೆಚ್ಚು ಸಮಯ ಮನೆಯಲ್ಲಿಯೇ ಕಳೆಯ
ಲಿದ್ದೀರಿ. ಗೃಹಿಣಿಯರ ಪಾಲಿಗೆ ಹೆಚ್ಚು
ಕೆಲಸಗಳು ಬಂದೊದಗಲಿವೆ.

ಸಿಂಹ
ಬೇರೆಯವರ ಮಾತಿಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ನಿಮ್ಮ
ನಿರ್ಧಾರದಲ್ಲಿ ಹೆಚ್ಚು ಗಟ್ಟಿತನವಿರಲಿ

ಕನ್ಯಾ
ಸಂಜೆ ವೇಳೆಗೆ ತುಸು ಒತ್ತಡದ ಸ್ಥಿತಿ ನಿರ್ಮಾಣ
ವಾಗಲಿದೆ. ಆಪ್ತ ಸ್ನೇಹಿತರಿಂದ ನಿಮ್ಮ
ಸಮಸ್ಯೆಗಳು ಮತ್ತಷ್ಟು ಅಧಿಕವಾಗಲಿವೆ.

ತುಲಾ 
ಆಲಸ್ಯವನ್ನು ಬಿಟ್ಟು ಕೆಲಸಕ್ಕೆ ಮುಂದಾಗುವಿರಿ.
ಸಂಜೆ ವೇಳೆಗೆ ಅನಿರೀಕ್ಷಿತ ಘಟನೆಗಳು
ಬಂದೊದಗಲಿವೆ. ಖರ್ಚಿನಲ್ಲಿ ಹಿಡಿತವಿರಲಿ.

ವೃಶ್ಚಿಕ
ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ.
ನೀವು ಅಂದುಕೊಂಡ ಕೆಲಸ ಸುಲಭವಾಗಿ
ನೆರವೇರಲಿದೆ. ಮೌನವಾಗಿರುವುದು ಲೇಸು. 

ಧನುಸ್ಸು
ಬಾಳ ಸಂಗಾತಿ ವಿಚಾರದಲ್ಲಿ ಅನುಮಾನ
ಬೇಡ. ಸಕಾರಾತ್ಮಕ ಚಿಂತನೆಗಳು ಹೆಚ್ಚಾಗಲಿವೆ.
ಮನೆಯವರ ಸಹಕಾರದಿಂದ ಕಾರ್ಯ ಸಿದ್ಧಿ.

ಮಕರ
ಉತ್ತಮರೊಂದಿಗೆ ಒಡನಾಟ ಹೆಚ್ಚಾಗಲಿದೆ.
ನಿಮ್ಮ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ
ಲಿದೆ. ಸಂಬಂಧಗಳ ಬಗ್ಗೆ ಎಚ್ಚರವಿರಲಿ.

ಕುಂಭ
ನಿಮ್ಮ ಬಗ್ಗೆ ಸಂಬಂಧಿಗಳ ವಲಯದಲ್ಲಿ
ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿದೆ. ಸಣ್ಣ
ವ್ಯಾಪಾರಿಗಳಿಗೆ ಹೆಚ್ಚು ಲಾಭ ದೊರೆಯಲಿದೆ.

ಮೀನ 
ಗೆಳೆಯರೊಂದಿಗೆ ಪ್ರವಾಸ ಹೊರಡಲಿದ್ದೀರಿ.
ಮಕ್ಕಳೊಂದಿಗೆ ಹೆಚ್ಚು ಆತ್ಮೀಯವಾಗಿರಲಿ
ದ್ದೀರಿ. ಆರೋಗ್ಯದ ಕಡೆ ಗಮನವಿರಲಿ.

Follow Us:
Download App:
  • android
  • ios