ನಿಮಗೆ ಒಪ್ಪಿಗೆಯಾಗುವ ಕೆಲಸವೇ ಒಳಿತು ಮಾಡಲಿದೆ

ಮೇಷ
ಎಲ್ಲದರಲ್ಲೂ ತಪ್ಪುಗಳನ್ನೇ ಹುಡುಕುವುದು
ಬೇಡ. ನಿಮ್ಮ ಅಂತರಂಗಕ್ಕೆ ಒಪ್ಪುವ ಕೆಲಸವನ್ನು
ಮಾಡುತ್ತಾ ಮುಂದೆ ಸಾಗಿ. ಒಳಿತಾಗಲಿದೆ.

ವೃಷಭ
ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ
ಮಗ್ನರಾಗುವಿರಿ. ಸಂಜೆ ವೇಳೆಗೆ ಹೊಸ
ಉದ್ಯೋಗದ ಅವಕಾಶಗಳು ಬರಲಿವೆ.

ಮಿಥುನ
ಯಾರ ಮೇಲೆಯೂ ಕೋಪಬೇಡ. ನಿಮ್ಮ
ಅಂದಾಜಿಗೆ ಸಿಗದ ವಿಚಾರಗಳ ಬಗ್ಗೆ ಹೆಚ್ಚು
ತಲೆ ಕೆಡಿಸಿಕೊಳ್ಳುವುದು ಬೇಡ.

ಕಟಕ
ಎಲ್ಲದ್ದಕ್ಕೂ ಮಿತಿಗಳಿರುತ್ತವೆ. ಹಾಗೆಯೇ
ನಿಮಗೂ ಕೂಡ. ನಿಮ್ಮ ಮಿತಿಯನ್ನು ಅರಿತು
ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಕ್ಕೀತು.

ಸಿಂಹ
ಇಡೀ ದಿನ ಏಕಾಂತದಲ್ಲಿ ಕಳೆಯುವಿರಿ. ಸಿಕ್ಕ
ಗೆಳೆಯರೊಂದಿಗೆ ಆತ್ಮೀಯತೆಯಿಂದ
ಮಾತನಾಡಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ. 

ಕನ್ಯಾ
ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ.
ಯಾವುದನ್ನೂ ದೂರದಲ್ಲೇ ನಿಂತು ಅಂದಾಜು
ಮಾಡುವುದು ಬೇಡ. ಹತ್ತಿರ ಹೋಗಿ ನೋಡಿ.

ತುಲಾ 
ಸಂಜೆ ವೇಳೆಯ ಏಕಾಂತದಲ್ಲಿ ಒಳ್ಳೆಯ
ಸಂಗೀತ ಕೇಳಿ. ಇದರಿಂದ ಮಾನಸಿಕ ನೆಮ್ಮದಿ
ಹೆಚ್ಚಲಿದೆ. ಅಂದುಕೊಂಡ ಕಾರ್ಯವಾಗಲಿದೆ.

ವೃಶ್ಚಿಕ
ಮುಂದಿನ ಒಳ್ಳೆಯ ಕೆಲಸಗಳಿಗೆ ಇಂದು ಭದ್ರ
ಭೂನಾದಿ ಹಾಕಿಕೊಳ್ಳುವಿರಿ. ಎಲ್ಲರೊಂದಿಗೂ
ಪ್ರೀತಿಯಿಂದ ಮಾತನಾಡಿ. ಲಾಭ ಹೆಚ್ಚಲಿದೆ. 

ಧನುಸ್ಸು
ಹೊಸ ವಸ್ತುಗಳು ಮನೆ ಸೇರಲಿವೆ. ಸಣ್ಣ ಪುಟ್ಟ
ಕಲಹಗಳು ಸಹಜ. ಅದೆಲ್ಲವನ್ನೂ ದಾಟಿ
ಕೊಂಡು ಹಿಡಿದ ಕೆಲಸದ ಕಡೆ ಗಮನ ನೀಡಿ.

ಮಕರ
ದೊಡ್ಡ ವ್ಯಕ್ತಿಗಳ ಭೇಟಿಯಾಗಲಿದೆ. ಇದರಿಂದ
ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ
ಪ್ರತಿಫಲ ದೊರೆಯಲಿದೆ. ದುಡುಕಬೇಡಿ.

ಕುಂಭ
ಸಂಕಟ ಬಂದಾಗ ವೆಂಕಟನನ್ನು ನೆನೆಯು
ವುದು ಮಾಮೂಲು. ನಿಮ್ಮ ಸಮಸ್ಯೆಗಳಿಗೆ
ಪರಿಹಾರ ಇದ್ದೇ ಇದೆ. ಚಿಂತೆ ಬೇಡ.

ಮೀನ 
ನಿಂದಕರು ಇದ್ದಾಗಲೇ ನೀವು ಬೆಳೆಯಲು
ಸಾಧ್ಯ. ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದು
ಕೊಂಡು ಮುಂದೆ ಸಾಗಿ. ಶುಭವಾಗಲಿದೆ.