ರಾತ್ರಿಯ ವೇಳೆಗೆ ನಿಮಗೆ ಕಾದಿಗೆ ಶುಭ ಸಮಾಚಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Dec 2018, 6:48 AM IST
Daily Horoscope 27 December 2018
Highlights

ರಾತ್ರಿಯ ವೇಳೆಗೆ ನಿಮಗೆ ಕಾದಿಗೆ ಶುಭ ಸಮಾಚಾರ

ರಾತ್ರಿಯ ವೇಳೆಗೆ ನಿಮಗೆ ಕಾದಿಗೆ ಶುಭ ಸಮಾಚಾರ

ಮೇಷ
ನಿಮ್ಮ ಬೆನ್ನ ಹಿಂದೆ ಮಾತನಾಡುವವರ ಬಗ್ಗೆ
ಹೆಚ್ಚು ತಲೆ ಕಡಿಸಿಕೊಳ್ಳಬೇಡಿ. ನಿಂದಕರು
ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಿಸುವ ಬಂಧುಗಳು

ವೃಷಭ
ದಿನ ಪೂರ್ತಿ ವಿವಿಧ ಕಾರ್ಯಗಳಲ್ಲಿ
ತೊಡಗಿಸಿಕೊಳ್ಳುವಿರಿ. ವಿನಾಕಾರಣ ಕಾಲ
ಹರಣ ಬೇಡ. ಮನೆಯಲ್ಲಿ ಸಂತೋಷ.

ಮಿಥುನ
ಬೆಳಿಗ್ಗೆಯಿಂದಲೇ ನಿರಾಸೆಗಳು ಹೆಚ್ಚುತ್ತವೆ
ಯಾದರೂ ರಾತ್ರಿ ವೇಳೆಗೆ ಶುಭ ಸುದ್ದಿ
ಕೇಳಲಿದ್ದೀರಿ. ಪ್ರಯತ್ನಕ್ಕೆ ಸೂಕ್ತ ಫಲವಿದೆ.

ಕಟಕ
ನಿಮ್ಮ ವಿರೋಧಿಗಳೂ ಇಂದು ನಿಮ್ಮ
ಕೆಲಸವನ್ನು ಮೆಚ್ಚಲಿದ್ದಾರೆ. ಹಲವು ತೊಂದರೆ
ಗಳ ನಡುವಲ್ಲೂ ಗೆಲುವು ಸಾಧಿಸುವಿರಿ.

ಸಿಂಹ
ಸ್ನೇಹಿತನ ಸಾಧನೆಗೆ ನೆರವಾಗುವಿರಿ.
ಮತ್ತೊಬ್ಬರ ಮಾತುಗಳಿಂದ ನೀವು
ಪ್ರಭಾವಿತರಾಗಲಿದ್ದೀರಿ. ಸಂತಸ ಹೆಚ್ಚಲಿದೆ

ಕನ್ಯಾ
ಹಿತ್ತಾಳೆ ಕಿವಿ ನಿಮ್ಮದಾದರೂ ಇಂದು ಸ್ವಲ್ಪ
ಜಾಗೃತೆಯಿಂದ ಇರುವುದು ಒಳಿತು.
ಮಾಡುವ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ತುಲಾ 
ಕಳೆದುಕೊಂಡ ವಸ್ತುಗಳ ಬಗ್ಗೆ ಚಿಂತೆ
ಮಾಡುತ್ತಾ ಕೂರುವುದರಿಂದ ಏನೂ
ಪ್ರಯೋಜನವಿಲ್ಲ. ಪ್ರಗತಿಯತ್ತ ಸಾಗುವಿರಿ.

ವೃಶ್ಚಿಕ
ನಿಮ್ಮ ಸಹನೆ, ತಾಳ್ಮೆ ಮತ್ತು ಪ್ರೀತಿಯ
ಗುಣಗಳಿಂದ ಪರಸ್ಥಳದಲ್ಲಿ ಮಾನ್ಯತೆ
ಗಳಿಸುವಿರಿ. ವೃತ್ತಿಯಲ್ಲಿ ಪ್ರಗತಿ ಸಾಧ್ಯ. 

ಧನುಸ್ಸು
ಇಂದು ಮನೆಯ ಖರ್ಚು ಹೆಚ್ಚಾಗಲಿದೆ.
ಆದಾಯದ ದಾರಿಗಳೂ ತೆರೆದುಕೊಳ್ಳುತ್ತವೆ.
ತಂದೆಯ ಸಹಕಾರದಿಂದ ಧನಾಗಮನ.

ಮಕರ
ಪಾಲಿಗೆ ದಕ್ಕಿರುವ ಅವಕಾಶಗಳನ್ನು ಬಳಕೆ
ಮಾಡಿಕೊಂಡು ಕೆಲಸ ಮಾಡಿ. ಕಣ್ಣ ಮುಂದೆ
ಇಲ್ಲದ ವಸ್ತುವಿಗೆ ಕೊರಗುವುದು ಬೇಡ.

ಕುಂಭ
ಮತ್ತೊಬ್ಬರ ಒಳ್ಳೆಯ ಕೆಲಸಗಳು ನಿಮ್ಮನ್ನಿಂದು
ಪ್ರಭಾವಿಸಲಿವೆ. ಸುತ್ತಾಟ ಹೆಚ್ಚಾಗಲಿದೆ. ಕಷ್ಟ
ವಾದರೂ ಅಂದುಕೊಂಡ ಕಾರ್ಯವಾಗಲಿದೆ.

ಮೀನ 
ನಡೆಯುವ ಕಾಲು ಎಡವುವುದು ಸಹಜ.
ಹಾಗೆಂದು ಒಂದು ತಪ್ಪನ್ನೇ ನೆನೆದು
ಕೊರಗುವುದು ಬೇಡ. ಉತ್ಸಾಹ ಹೆಚ್ಚಲಿದೆ

loader