ಈ ರಾಶಿಗೆ ಶುಭ ವಾರ್ತೆಯೊಂದು ಬರುವುದ ಖಚಿತ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 25, Dec 2018, 6:54 AM IST
Daily Horoscope 25 December 2018
Highlights

ಈ ರಾಶಿಗೆ ಶುಭ ವಾರ್ತೆಯೊಂದು ಬರುವುದ ಖಚಿತ

ಈ ರಾಶಿಗೆ ಶುಭ ವಾರ್ತೆಯೊಂದು ಬರುವುದ ಖಚಿತ

ಮೇಷ
ದುಡುಕಿನ ನಿರ್ಧಾರದಿಂದ ಯಾವುದೇ
ಲಾಭವಿಲ್ಲ. ಆತ್ಮೀಯರಿಂದ ಹೆಚ್ಚಿನ ನೆರವು
ದೊರೆಯಲಿದೆ. ಆತ್ಮಾಭಿಮಾನ ಹೆಚ್ಚಲಿದೆ.

ವೃಷಭ
ಕಳೆದುಕೊಂಡ ವಸ್ತುಗಳ ಬಗ್ಗೆ ಹೆಚ್ಚು ತಲೆ ಕೆಡಿ
ಸಿಕೊಳ್ಳುವುದು ಬೇಡ. ಪ್ರೀತಿಯಿಂದ ಕೆಲಸ
ಸಿದ್ಧಿಯಾಗಲಿದೆ. ಶುಭ ವಾರ್ತೆ ತಿಳಿಯಲಿದೆ.

ಮಿಥುನ
ನಿಮ್ಮ ಮಿತಿಯನ್ನು ಅರಿತುಕೊಂಡು ಹೊಸ
ಕೆಲಸಕ್ಕೆ ಕೈ ಹಾಕಿ. ಸಂಜೆ ವೇಳೆಗೆ ಮನಸ್ಸು ಸ್ವಲ್ಪ
ಹಗುರವಾಗಲಿದೆ. ಸ್ನೇಹದಲ್ಲಿ ಬಿರುಕು.

ಕಟಕ
ಎಲ್ಲರಿಂದಲೂ ಸಹಾಯದ ನಿರೀಕ್ಷೆ
ಇಟ್ಟುಕೊಳ್ಳದಿರಿ. ಮಾತು ಮಿತಿಯಲ್ಲಿ ಇದ್ದರೆ
ಕೆಲಸ ಹೆಚ್ಚಾಗುತ್ತದೆ. ತಾಳ್ಮೆ ಹೆಚ್ಚಲಿದೆ.

ಸಿಂಹ
ನಿಮ್ಮ ನಡವಳಿಕೆಯಿಂದ ಮತ್ತೊಬ್ಬರಿಗೆ
ನೋವಾಗದಿರಲಿ. ವ್ಯವಹಾರದಲ್ಲಿ ಪ್ರಗತಿ
ಸಾಧ್ಯವಾಗಲಿದೆ. ಸಹಕಾರದಿಂದ ನೆಮ್ಮದಿ.

ಕನ್ಯಾ
ದೂರದ ಬೆಟ್ಟ ಯಾವಾಗಲೂ ನುಣ್ಣಗೇ
ಕಾಣುವುದು. ಪೂರ್ಣವಾಗಿ ಸತ್ಯ ತಿಳಿದು
ಕೊಂಡೇ ನಿರ್ಧಾರ ಕೈಗೊಳ್ಳಿ. ಒಳಿತಾಗಲಿದೆ.

ತುಲಾ
ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡು
ವುದು ಬೇಡ. ಸಾಕಷ್ಟು ಸಮಯಾವಕಾಶ
 ಸಿಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಲಿದೆ.

ವೃಶ್ಚಿಕ
ದಾರಿಯಲ್ಲಿ ಕಲ್ಲು ಮುಳ್ಳು ಸಹಜ. ಹಾಗೆಂದು
ನಡೆಯುವುದನ್ನು ನಿಲ್ಲಿಸಬಾರದು. ಕಷ್ಟಗಳ
ನಡುವೆಯೂ ಸಂತೋಷದಿಂದ ಇರುವಿರಿ 

ಧನುಸ್ಸು
ಸಂಸಾರದಲ್ಲಿನ ಜಗಳಗಳು ಕೊನೆಯಾಗಲಿವೆ.
ಮಕ್ಕಳೊಂದಿಗೆ ಸುತ್ತಾಟ ಹೆಚ್ಚಲಿದೆ. ಧಾರ್ಮಿಕ
ಕಾರ್ಯಕ್ರಗಳಿಗೆ ಪೂರ್ವ ಸಿದ್ಧತೆ ಆರಂಭ.

ಮಕರ
ಸಹೋದರನ ಸಹಕಾರದಿಂದ ಕಿರು ಉದ್ಯಮ
ಸ್ಥಾಪನೆ ಮಾಡುವಿರಿ. ನಂಬಿಕೆಯಿಂದ ಆತ್ಮ ಶಕ್ತಿ
ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ.

ಕುಂಭ
ಸ್ನೇಹಿತರಲ್ಲಿರುವ ಒಳ್ಳೆಯ ಗುಣಗಳನ್ನು
ಗುರುತಿಸಿ. ಮೇಲಾಧಿಕಾರಿಯಿಂದ ಕೆಲಸಕ್ಕೆ
ಮೆಚ್ಚುಗೆ ದೊರೆಯಲಿದೆ. ನೆಮ್ಮದಿ ಹೆಚ್ಚಲಿದೆ.

ಮೀನ
ಧನಾಗಮನವಾಗಲಿದೆ. ಬಾಕಿ ಉಳಿದಿರುವ
ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ
 ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

loader