ಮೇಷ ರಾಶಿಯವರು ಮನಸ್ಸು ಕೆಡಿಸಿಕೊಳ್ಳದಿರಿ : ಉಳಿದ ರಾಶಿ ಹೇಗಿದೆ..?


ಮೇಷ
ಕೆಲಸವಿಲ್ಲದೇ ಕೂರುವುದು ಬೇಡ. ಮನಸ್ಸು
ಕೆಡುತ್ತದೆ. ಏನಾದರೂ ಕೆಲಸದಲ್ಲಿ
ತೊಡಗಿಕೊಳ್ಳಿ. ನೆಮ್ಮದಿ ಹೆಚ್ಚುತ್ತದೆ.

ವೃಷಭ
ನಿಮ್ಮ ಸುತ್ತಮುತ್ತಲಿನವರಿಗೆ ಅನುಕೂಲ
ವಾಗುವ ಕೆಲಸ ಮಾಡುವಿರಿ. ಸುಂದರ
ವಾತಾವರಣದಿಂದ ಆರೋಗ್ಯ ವೃದ್ಧಿ.

ಮಿಥುನ
ಹೆಚ್ಚು ಶ್ರಮವಹಿಸಿದರೂ ಇಂದು ಕಡಿಮೆ
ಫಲ. ನಾಳೆಗಳ ಬಗ್ಗೆ ಚಿಂತೆ ಬೇಡ.
ಮಾತಿನಿಂದಲೇ ಲಾಭ ಮತ್ತು ನಷ್ಟ ಆಗಲಿದೆ.

ಕಟಕ
ದಿನದ ಆರಂಭದಿಂದಲೇ ಬಿಡುವಿಲ್ಲದ
ಕೆಲಸಗಳು ಎದುರಾಗಲಿವೆ. ಸಂಜೆ ವೇಳೆಗೆ
ತುಸು ವಿಶ್ರಾಂತಿ. ಮತ್ತೆ ಕೆಲಸದೊತ್ತಡ.

ಸಿಂಹ
ದೂರದ ಪ್ರಯಾಣ ಮಾಡಬೇಕಾದೀತು.
ಅನಾಮಿಕ ವ್ಯಕ್ತಿಗಳಿಂದ ಸಹಾಯ ದೊರೆಯ
ಲಿದೆ. ಗುರಿ ತುಲುಪಲು ಶ್ರಮ ಪಡಬೇಕು.

ಕನ್ಯಾ
ಗೃಹಿಣಿಯರಿಗೆ ವಿಶೇಷ ಅಥಿತಿಯ
ಆಗಮನದಿಂದ ತುಸು ಕೆಲಸಗಳು
ಹೆಚ್ಚಾಗಲಿವೆ. ಸಂತೋಷವೂ ಹೆಚ್ಚಲಿದೆ.

ತುಲಾ 
ಹೊಸ ಯೋಚನೆಗಳನ್ನು ಹಾಕಿಕೊಳ್ಳುವಿರಿ.
ಅದರಂತೆ ನಡೆದುಕೊಳ್ಳಲು ಸಮಯ
ಬೇಕಾಗುತ್ತದೆ. ಛಲ ಬಿಡದೆ ಸಾಧಿಸಿ.

ವೃಶ್ಚಿಕ
ಆಗುವುದೆಲ್ಲವೂ ಒಳ್ಳೆಯದ್ದಕ್ಕೆ ಅಂದುಕೊಳ್ಳಿ.
ಹಾಗಾದಾಗಿ ಆಗಿರುವುದು ಯಾವುದೂ
ಕೆಟ್ಟದಲ್ಲ ಎನ್ನುವ ಭಾವ ಹುಟ್ಟುತ್ತದೆ. 

ಧನುಸ್ಸು
ನಿಮ್ಮ ಶಕ್ತಿ ಹೆಚ್ಚಲಿದೆ. ಹಾಗೆಂದು ಮತ್ತೊಬ್ಬರ
ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ.
ಒಳ್ಳೆಯ ಕಾರ್ಯಗಳನ್ನು ಮುಂದೂಡಬೇಡಿ.

ಮಕರ
ನಿಮ್ಮ ಬಗ್ಗೆ ಅಭಿಮಾನ, ಗೌರವ
ಇಟ್ಟುಕೊಂಡಿರುವವರ ಬಗ್ಗೆ ಹಗುರವಾಗಿ
ಮಾತನಾಡದಿರಿ. ಎಚ್ಚರಿಕೆ ಇರಲಿ.

ಕುಂಭ
ಮೌನವಾಗಿರುವುದರಿಂದ ಈ ದಿನ
ಲಾಭವಾಗಲಿದೆ. ಮಾತು ಹೆಚ್ಚಾದಷ್ಟೂ
ಸಮಸ್ಯೆ ಹೆಚ್ಚಲಿದೆ. ತಾಳ್ಮೆ ಮುಖ್ಯ.

ಮೀನ 
ಸಂಜೆ ವೇಳೆಗೆ ಕೆಲಸದ ಒತ್ತಡದಿಂದ ಹೊರಗೆ
ಬರುವಿರಿ. ಮಕ್ಕಳೊಂದಿಗೆ ಒಂದಷ್ಟು ಸಮಯ
ಕಳೆಯುವಿರಿ. ದೈಹಿಕ ಶ್ರಮ ಹೆಚ್ಚಲಿದೆ.