Asianet Suvarna News Asianet Suvarna News

ಈ ರಾಶಿಗೆ ಶುಭ ಸೂಚನೆಗಳು ಎದುರುಗೊಳ್ಳುವ ದಿನ

ಈ ರಾಶಿಗೆ ಶುಭ ಸೂಚನೆಗಳು ಎದುರುಗೊಳ್ಳುವ ದಿನ

Daily Horoscope 10 October 2018
Author
Bengaluru, First Published Oct 10, 2018, 7:03 AM IST
  • Facebook
  • Twitter
  • Whatsapp

ಮೇಷ

ರಾಜಕಾರಣಿಗಳಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ.
ಆದರೆ ಇಂದು ನೀವು ಅದರತ್ತ ಸಾಗಲಿದ್ದೀರಿ.
ಶುಭ ಸೂಚನೆಗಳು ಎದುರುಗೊಳ್ಳುವ ದಿನ.

ವೃಷಭ
ನಿನ್ನೆಯವರೆಗೂ ಸರಿಯಿದ್ದ ನಿಮ್ಮ ಹೊಸ
ವಾಹನದ ಖರೀದಿಯ ವಿಷಯವು ಇಂದು
ಬೇರೆಯದೇ ದಾರಿ ಹಿಡಿದಿದೆ. ಯೋಚಿಸದಿರಿ.

ಮಿಥುನ
ದೇಹಾರೋಗ್ಯ ಕೈಕೊಡುವ ಸಂಭವ. ಹೆಚ್ಚು
ದ್ರವಾಹಾರಗಳನ್ನು ಸೇವಿಸಿ. ಹೊರಗಡೆ
ಹೊರಡುವಾಗ ಮುಂಜಾಗ್ರತೆಯನ್ನು ವಹಿಸಿ.

ಕಟಕ
ಹೊಸ ಥರದ ಆಲೋಚನೆಗಳು ನಿಮ್ಮನ್ನು
ಹುರಿದುಂಬಿಸಲಿದೆ. ಧ್ಯಾನ ಮಾಡುವುದು
ಲೇಸು. ಮಾನಸಿಕ ನೆಮ್ಮದಿ ಹೊಂದುವಿರಿ.

ಸಿಂಹ

ಮಾನಸಿಕ ನೆಮ್ಮದಿಗಾಗಿ ಧ್ಯಾನ, ಯೋಗಗಳಲ್ಲಿ
ಮೊರೆ ಹೋದರೆ ಎಲ್ಲವೂ ಸರಿ ಹೋಗುತ್ತದೆ.
ಯಾರಲ್ಲೂ ವಿರೋಧವನ್ನು ಕಟ್ಟಿ ಕೊಳ್ಳಬೇಡಿ.

ಕನ್ಯಾ
ನಿಮ್ಮ ತಾಳ್ಮೆಗೆ ತಕ್ಕ ಫಲ ಸಿಗಲಿದೆ. ಇಂತಹ
ದಿನಕ್ಕಾಗಿ ನೀವು ಸಾಕಷ್ಟು ದಿನಗಳಿಂದಲೂ
ಕಾಯುತ್ತಿದ್ದೀರಿ. ಅದು ಇವತ್ತೇ ಬಂದಿದೆ.

ತುಲಾ

ಗ್ರಹಗತಿಗಳೆಲ್ಲವೂ ನಿಮ್ಮ ಪರವಾಗಿಯೇ ಇವೆ.
ಆದರೆ ನಿಮ್ಮಲ್ಲಿರುವ ದೋರಣೆಯ ಬುದ್ಧಿ
ಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿರಿ.

ವೃಶ್ಚಿಕ

ಕೂಡಿಟ್ಟು ಮರೆತಿದ್ದ ಹಣವೀಗ ಸಹಾಯಕ್ಕೆ
ಬರಲಿದೆ. ಮಗಳಿಂದ ಇಂದು ಬರುವ ಫೋನ್
ಕಾಲ್ ನಿಮ್ಮಲ್ಲಿ ಹೊಸ ಹುರುಪನ್ನು ತರಲಿದೆ.

ಧನುಸ್ಸು
ಅನಾರೋಗ್ಯದ ಸಮಸ್ಯೆ ಇದ್ದರೂ ಹೆಚ್ಚೇನು
ಕಾಡದು. ವ್ಯರ್ಥ ಖರ್ಚು ಆಗಲಿದೆ. ನಿಮ್ಮ
ವ್ಯವಹಾರದಲ್ಲಿ ಸ್ವಲ್ಪ ಪ್ರಗತಿ ಕಾಣುವಿರಿ.

ಮಕರ
ಯಾರಿಗೂ ಉಚಿತ ಸಲಹೆಗಳನ್ನು ನೀಡಬೇಡಿ.
ಯಾರಿಂದಲೂ ಸಹಾಯವನ್ನು ನಿರೀಕ್ಷಿಸದಿರಿ.
ಅತಿಯಾದ ಉತ್ಸಾಹವು ಅಷ್ಟು ಒಳ್ಳೆಯದಲ್ಲ.

ಕುಂಭ
ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ
ಭೇದದಿಂದ ವೈಮನಸ್ಯಗಳು ಉಂಟಾಗ
ಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.

ಮೀನ

ನಕಾರಾತ್ಮಕ ಭಾವನೆಗಳಿಂದ ಹೊರಬನ್ನಿ. ನಿಮ್ಮ
ಜೀವನದಲ್ಲಿ ಹೊಸ ಬದಲಾವಣೆಯೊಂದನ್ನು
ಈಗ ಕಾಣಲಿದ್ದೀರಿ. ಜೀವನವೆಂದರೆ ಹೀಗೇ!

Follow Us:
Download App:
  • android
  • ios