ಈ ರಾಶಿಗೆ ಒಳಿತಿನ ದಿನವಿದು : ಉಳಿದ ರಾಶಿ ಹೇಗಿದೆ..?

ಮೇಷ
ಸಮಚಿತ್ತದಿಂದ ಬರುವ ಸವಾಲುಗಳನ್ನು
ಎದುರಿಸಲಿದ್ದೀರಿ. ಹತ್ತಿರ ಬಂದವರನ್ನು
ಪ್ರೀತಿಯಿಂದ ಮಾತನಾಡಿಸಿ. ಒಳಿತಾಗಲಿದೆ.

ವೃಷಭ
ದೂರದ ಬೆಟ್ಟ ಯಾವಾಗಲೂ ನುಣ್ಣಗೆ
ಕಾಣುವುದು. ಇರುವುದರಲ್ಲಿ ತೃಪ್ತಿ ಕಾಣಿ.
ಮನೆಯಲ್ಲಿಯೇ ಸಮಯ ಕಳೆಯುವಿರಿ.

ಮಿಥುನ
ನಿಮ್ಮವರೆಲ್ಲಾ ಹೇಳುವುದು ನಿಮ್ಮ
ಒಳಿತಿಗಾಗಿಯೇ ಮುಂದೆ ಆಗುವುದನ್ನು
ಮರೆತು ವಾಸ್ತವದಲ್ಲಿ ಬದುಕು ಸಾಗಿಸಿ.

ಕಟಕ
ದೇವರ ಬಗ್ಗೆ ಚರ್ಚೆ ಬೇಡ. ಒಂದು ಶಕ್ತಿ ಇದೆ
ಎಂದು ನಂಬಿ ಅದಕ್ಕೆ ಭಕ್ತಿ ತೋರಿಸಿ. ನಿಮ್ಮ
ಪಾಂಡಿತ್ಯ ಪ್ರದರ್ಶನಕ್ಕೆ ವೇದಿಕೆ ದೊರೆಯಲಿದೆ

ಸಿಂಹ
ಅತಿಯಾದ ಭಾವೋದ್ವೇಗದಲ್ಲಿ ಮಾತಿಗೆ
ಕಡಿವಾಣ ಹಾಕಿ. ಇಂದು ನಿಮಗೆ ಮೌನವೇ
ಹೆಚ್ಚು ಉಪಕಾರಿಯಾಗಲಿದೆ. ಶುಭ ಫಲ.

ಕನ್ಯಾ
ನಿಮ್ಮ ಶಕ್ತಿಯನ್ನು ಕೆಲಸದಲ್ಲಿ ವ್ಯಯ ಮಾಡಿ.
ಸಂಜೆ ವೇಳೆಗೆ ಬಂಧುಗಳ ಭೇಟಿಯಾಗಲಿದೆ.
ಯಾರಿಗೂ ನೋವು ನೀಡುವುದು ಬೇಡ.

ತುಲಾ 
ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ.
ನಿಮ್ಮ ದಾರಿಯಲ್ಲಿ ನೀವು ಆನೆ ನಡೆದಂತೆ
ಸಾಗುತ್ತಿರಿ. ದಿನಾಂತ್ಯಕ್ಕೆ ಫಲಿತಾಂಶ ಸಿಗಲಿದೆ.

ವೃಶ್ಚಿಕ
ನೀವು ಹನುಮಂತನ ಹಾಗೆ. ನಿಮ್ಮ ಶಕ್ತಿಯನ್ನು
ಮೊದಲು ತಿಳಿದುಕೊಳ್ಳಿ. ಅನಾರೋಗ್ಯ
ಪೀಡಿತರಿಗೆ ಹೆಚ್ಚಿನ ಆರೈಕೆ ದೊರೆಯಲಿದೆ. 

ಧನುಸ್ಸು
ಹೆಚ್ಚು ಆಸೆಗಳನ್ನು ಇಟ್ಟುಕೊಳ್ಳುವುದು ಬೇಡ.
ಅನಿರೀಕ್ಷಿತ ಘಟನೆಗಳಿಂದ ಸಂತೋಷದಿಂದ
ಇರುವಿರಿ. ಸಂಗಾತಿಯಿಂದ ಸಹಾಯ.

ಮಕರ
ದಾರಿಯಲ್ಲಿ ಸಿಕ್ಕುವ ಕಲ್ಲು, ಮುಳ್ಳುಗಳ ಬಗ್ಗೆ
ಚಿಂತೆ ಬೇಡ. ನಿಮ್ಮ ಗುರಿ ದೂರವಿದೆ.
ಅದರತ್ತ ಮುಖ ಮಾಡಿ ಸಾಗುವುದು ಒಳಿತು.

ಕುಂಭ
ಬಾಲ್ಯದ ಸ್ನೇಹಿತನೊಂದಿಗೆ ಹೆಚ್ಚು ಸಮಯ
ಕಳೆಯುವಿರಿ. ಕಷ್ಟಕ್ಕೆ ನೆರವು ನೀಡುವ ನಿಮ್ಮ
ಗುಣಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಗಲಿದೆ.

ಮೀನ 
ನಿತ್ಯದ ರಗಳೆಗಳು ಇದ್ದದ್ದೇ. ಒಳ್ಳೆಯ ಸಂಗೀತ
ಕೇಳಿ. ಸಾಧ್ಯವಾದರೆ ಏಕಾಂತದಲ್ಲಿ ಹಾಡಿ.
ಸಂಜೆ ವೇಳೆಗೆ ಮನಸ್ಸು ಹಗುರವಾಗುವುದು.