ಮೇಷ
ಮಾನಸಿಕ ಒತ್ತಡವು ನಿಮ್ಮ ಜೀವನದ ಮೇಲೆ
ದೊಡ್ಡ ಪ್ರಭಾವನ್ನೇ ಬೀರಲಿದೆ. ಅಲ್ಲದೇ
ಆರ್ಥಿಕ ಪರಿಸ್ಥಿತಿ ಇಷ್ಟರಲ್ಲೇ ಸುಧಾರಿಸಲಿದೆ.

ವೃಷಭ
ಗುರುವಿನ ಆಶೀರ್ವಾದವು ಈಗ ನಿಮಗೆ
ತುಂಬಾ ಅಗತ್ಯವಿದೆ. ಎಲ್ಲವೂ ಒಳಿತಾಗುವ
ಕಾಲವು ಬರಲಿದೆ. ಆದಷ್ಟು ಧ್ಯಾನಾಸಕ್ತರಾಗಿ
.
ಮಿಥುನ
ವರ್ತಕರಿಗೆ ಸ್ವಲ್ಪ ಹಣದ ಮುಗ್ಗಟ್ಟು ಬಾಧಿಸು
ವುದು. ಹಾಗಂತ ಹೆಚ್ಚು ಚಿಂತಿಸುವ ಅಗತ್ಯ
ಏನೂ ಇಲ್ಲ. ವ್ಯಾಪಾರದಲ್ಲಿದು ಮಾಮೂಲು.

ಕಟಕ
ವ್ಯವಹಾರವು ಪ್ರಗತಿಯತ್ತ ಹೆಜ್ಜೆ ಹಾಕಲಿದೆ.
ವಿನಾಕಾರಣ ವೈಮನಸ್ಯಕ್ಕೆ ಆಸ್ಪದ ಕೊಡದಿರಿ.
ಸಾಧ್ಯವಾದಷ್ಟು ಎಚ್ಚರಿಕೆಯಿಂದ ವ್ಯವಹರಿಸಿ.

ಸಿಂಹ
ಸ್ವಕಾರ್ಯಗಳ ನಿಮಿತ್ತ ದೂರ ಪ್ರಯಾಣ
ಮಾಡಬೇಕಾಗಿ ಬರಲಿದೆ. ಆಗ ಕುಡಿಯುವ
ನೀರಿನ ವಿಚಾರದಲ್ಲಿ ಸ್ವಲ್ಪ ಜಾಗೃತೆ ವಹಿಸಿರಿ

ಕನ್ಯಾ
ಸಂಭ್ರಮದ ಸುದ್ದಿಯು ಇಂದು ತಿಳಿಯಲಿದೆ.
ಮನಸ್ಸಿಗೆ ನೆಮ್ಮದಿಯೂ ಸಿಗಲಿದೆ. ದೂರದ
ಪ್ರಯಾಣಕ್ಕಾಗಿ ಯೋಜನೆ ಕೈಗೊಳ್ಳಲಿದ್ದೀರಿ.

ತುಲಾ 
ದೂರದ ಬಂಧುಗಳನ್ನು ಭೇಟಿಯಾಗಲಿದ್ದೀರಿ.
ಸಣ್ಣ ಹೂಡಿಕೆಯ ಬಂಡವಾಳವೀಗ ಸಾಕಷ್ಟು
ಬೆಳೆದಿದೆ. ಅದರಿಂದ ಆದಾಯವೂ ಬರಲಿದೆ.

ವೃಶ್ಚಿಕ
ವಾಹನ ವಿಲೇವಾರಿಯಲ್ಲಿ ಗಣನೀಯವಾದ
ಆದಾಯ ಗಳಿಸುವಿರಿ. ಸಮಾಜ ಸೇವೆಯಲ್ಲಿ
ಆಸಕ್ತಿ ಮೂಡಲಿದೆ. ಖುಷಿ ಹಂಚಲಿದ್ದೀರಿ. 

ಧನುಸ್ಸು
ಕಲಾವಿದರು ಹಾಗೂ ಕಲಾಪ್ರೇಮಿಗಳಿಗಿದು
ಒಳ್ಳೆಯ ದಿನ. ಆದಾಯವು ಹೆಚ್ಚು. ನಿಮ್ಮ
ಕಲಾಕೃತಿಗಳಿಗೆ ಒಳ್ಳೆಯ ಬೆಲೆಯು ಸಿಗಲಿದೆ.

ಮಕರ
ಸ್ವಂತ ಉದ್ಯೋಗಿಗಳಿಗೆ ಶುಭಕಾಲ. ನೂತನ
ಯೋಜನೆಗಳಿಗೆ ಚಾಲನೆ. ಶುಭ ಕಾರ್ಯಗಳು
ಆಗಲಿವೆ.ಅಪರಿಚಿತರ ಬಗ್ಗೆ ಜಾಗೃತರಾಗಿರಿ.

ಕುಂಭ
ಶುಭಕಾರ್ಯಗಳಿಗೆ ಇಂದು ಹೇಳಿ ಮಾಡಿಸಿದ
ದಿನವಿದು. ಸಣ್ಣ ಪುಟ್ಟ ಖುಷಿಗಳೂ ಸಹ ನಿಮ್ಮ
ಮನಸ್ಸನ್ನು ಹೆಚ್ಚು ಉಲ್ಲಾಸಗೊಳಿಸುವ ದಿನ.

ಮೀನ 
ಕಚೇರಿ ವ್ಯವಹಾರಗಳಲ್ಲಿ ಓಡಾಟ ಹೆಚ್ಚಾಗಿದೆ.
ಬರಬೇಕಿದ್ದ ಹಳೆ ಬಾಕಿಯು ಬೇಗ ಬರಲಿವೆ.
ಜಗಳ ಕದನಗಳಿಗೆ ಆಸ್ಪದವನ್ನು ಕೊಡದಂತಿರಿ