ಈ ರಾಶಿಯವರಿಂದ ಮಹತ್ವದ ಕೆಲಸವೊಂದು ಆಗಲಿದೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 7:04 AM IST
Daily Bhavishya September 6
Highlights

ಈ ರಾಶಿಯವರಿಂದ ಮಹತ್ವದ ಕೆಲಸವೊಂದು ಆಗಲಿದೆ. ಉಳಿದ ರಾಶಿ ಹೇಗಿದೆ..?
 

ಮೇಷ
ಮಿತ್ರರು ನಿಮ್ಮ ಕಷ್ಟ ಕಾಲಕ್ಕೆ ಆಗಲಿದ್ದಾರೆ.
ನಿಮ್ಮಿಂದ ಹೊಸದೊಂದು ಮಹತ್ವದ ಕೆಲಸವು
ಶುರುವಾಗಲಿದೆ. ಖುಷಿಯನ್ನು ಹಂಚಿಕೊಳ್ಳಿ.

ವೃಷಭ
ನಿಮ್ಮ ವಾಟ್ಸಪ್‌ಗೆ ಹೊಸ ವ್ಯಕ್ತಿಯಿಂದ
ಬಂದ ಸಂದೇಶ ನಿಮ್ಮ ಮನಸ್ಸನ್ನು ಚಂಚಲ
ಗೊಳಿಸಲಿದೆ. ಅದು ನಿಮಗಲ್ಲ. ಜೋಕೆ.

ಮಿಥುನ
ನೀವು ನಿಮ್ಮತನವನ್ನು ಕಳೆದುಕೊಳ್ಳಬೇಡಿ.
ಗಲಭೆಗಳಿಂದ ದೂರವಿರಿ. ಅದಕ್ಕಾಗಿ ಸ್ವಲ್ಪ
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.

ಕಟಕ
ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ
ತೊಂದರೆ ಇಲ್ಲ. ಸೋಮಾರಿಗಳಿಗೆ ಒಮ್ಮೆಲೆ
ಆಘಾತಕಾರಿ ಸುದ್ದಿ ಎದುರಾಗಲಿದೆ. ಜೋಕೆ!

ಸಿಂಹ
ನಿಮ್ಮ ಕೊಡುಗೈ ದಾನವನ್ನು ಹಿಂದಿನಂತೆಯೇ
ಮುಂದುವರಿಸಿ. ನಿಮ್ಮಲ್ಲಿನ ವಿಶೇಷವಾದ
ಬುದ್ಧಿ ಕೌಶಲ್ಯಗಳಿಗಿದು ಸುಸಮಯವಾಗಿದೆ. 

ಕನ್ಯಾ
ಮನಃಸ್ತಾಪಕ್ಕೆ ಎಂದೂ ಒಳಗಾಗದಿರಿ. ಶಾಂತ
ಚಿತ್ತರಾಗಿದ್ದು ಕೆಲಸದಲ್ಲಿ ತೊಡಗಿರಿ. ಹೆಚ್ಚಿನ
ಹೊಣೆಗಾರಿಕೆ ಇದೆ. ಹೆದರದೇ ಮುನ್ನುಗ್ಗಿ.

ತುಲಾ 
ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆ
ಹೆಚ್ಚು ಗಮನ ನೀಡಿ. ಉದ್ಯೋಗಸ್ಥರ ಕೆಲಸ
ದಲ್ಲಿ ಪ್ರಗತಿ. ಏಕಾಗ್ರತೆಯನ್ನು ರೂಢಿಸಿಕೊಳ್ಳಿ.

ವೃಶ್ಚಿಕ
ದ್ವಿಚಕ್ರ ವಾಹನ ಮಾರಾಟದಿಂದ ಅಧಿಕ
ಲಾಭವು ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ. 

ಧನುಸ್ಸು
ಪ್ಲಾಸ್ಟಿಕ್ ಉತ್ಪನ್ನಗಳ ವ್ಯಾಪಾರಿಗಳಿಗೆ ಅಲ್ಪ
ಸ್ವಲ್ಪ ಕಷ್ಟದ ದಿನಗಳಿವು. ಧೈರ್ಯದಿಂದ ನಿಮ್ಮ
ಕೆಲಸ ಕಾರ್ಯಗಳಲ್ಲಿ ತೊಡಗುವುದು ಸೂಕ್ತ.

ಮಕರ
ವಿದೇಶ ಪ್ರಯಾಣ ಯೋಗ. ಮಕ್ಕಳಿಗೆ ಉನ್ನತ
ಶಿಕ್ಷಣದ ಯೋಗವಿದೆ. ಕಲಾಲೋಕದ ವ್ಯಕ್ತಿ
ಗಳಿಗೂ ಬಣ್ಣದ ವ್ಯಾಪಾರಿಗಳಿಗೂ ಲಾಭವಿದೆ.

ಕುಂಭ
ನಿಮ್ಮ ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ
ಹೆತ್ತವರ ನೆರವು ದೊರೆಯಲಿದೆ. ನ್ಯಾಯದ
ಹೋರಾಟದಲ್ಲಿ ಗೆಲುವು ನಿಮ್ಮದೇ ಆಗಲಿದೆ.

ನಿಮ್ಮ ಉದಾರ ಬುದ್ಧಿಯು ನಿಮಗೆ ಶ್ರೀರಕ್ಷೆ
ಆಗಲಿದೆ. ನಿಮ್ಮ ಒಳ್ಳೆಯತನಗಳಿಂದ ನಿಮಗೆ
ಮೀನ ಒಳಿತೇ ಆಗಲಿದೆ. ಎಲ್ಲವೂ ಶುಭವಾಗಲಿದೆ.

loader