ಈ ರಾಶಿಗೆ ಆರಂಭವಾಗಿದೆ ಶುಭದ ದಿನಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 7:00 AM IST
Daily Bhavishya september 1
Highlights

ಈ ರಾಶಿಗೆ ಆರಂಭವಾಗಿದೆ ಶುಭದ ದಿನಗಳು. ಉಳಿದ ರಾಶಿಗಳ ಫಲಾಫಲ ಹೇಗಿದೆ..?

ಈ ರಾಶಿಗೆ ಆರಂಭವಾಗಿದೆ ಶುಭದ ದಿನಗಳು

ಮೇಷ
ಕಷ್ಟದ ದಿನವು ಎಂದೆಂದೂ ಇರದು. ಅದರ
ಬಗ್ಗೆ ನಿಮಗೂ ಗೊತ್ತು. ಮುಂಗೋಪ ಎಂದೂ
ಒಳ್ಳೆಯದಲ್ಲ. ಅದರಿಂದ ತೊಂದರೆ ಹೆಚ್ಚು.

ವೃಷಭ
ವರ್ತಕರಿಗೀಗ ಹಣದ ಮುಗ್ಗಟ್ಟು ಬಂದರೂ
ಹೆಚ್ಚೇನು ಬಾಧಿಸುವುದಿಲ್ಲ. ಬೇಡದ ವಿಷಯ
ಗಳನ್ನು ಅತಿಯಾಗಿ ಯೋಚಿಸದೇ ಇದ್ದುಬಿಡಿ.

ಮಿಥುನ
ಪ್ರಮುಖರ ಪರಿಚಯವಾಗುವುದು. ಆಸ್ತಿ
ವಿವಾದಗಳು ಇತ್ಯರ್ಥವಾಗಲಿದೆ. ಮಧ್ಯಸ್ಥಿಕೆ
ಯವರಿಂದ ಅನುಕೂಲವು ಹೆಚ್ಚಾಗಲಿದೆ.

ಕಟಕ
ಮಕ್ಕಳ ಜವಾಬ್ದಾರಿಯ ಹೊಣೆಯನ್ನು
ಸರಿಯಾಗಿ ನಿಭಾಯಿಸುವಿರಿ. ಅವರ ಬೇಕು
ಬೇಡಗಳನ್ನು ಅವರೇ ನೋಡಿಕೊಳ್ಳಲಿದ್ದೀರಿ.

ಸಿಂಹ
ಸುಖವೆಂದರೇನೆಂದು ಎಂದ ತಿಳಿಸಿಕೊಡುವ
ದಿನಗಳು ಈಗ ಬರಲಿದೆ. ಶುಭದ ದಿನಗಳು
ಆರಂಭವಾಗಿದೆ. ಅದೂ ತಂತಾನೆ ಬರಲಿದೆ.

ಕನ್ಯಾ
ದೂರದ ಸಂಬಂಧಿಯು ನಿಮ್ಮ ಸಹಾಯಕ್ಕೆ
ಬರಲಿದ್ದಾರೆ. ಮನೆಯಲ್ಲಿ ಶುಭಕಾರ್ಯಗಳ
ಬಗ್ಗೆ ಮಾತುಕತೆ ನಡೆಯುವ ಖುಷಿಯ ದಿನ.

ತುಲಾ
ವ್ಯವಹಾರದಲ್ಲಿ ಪ್ರಗತಿಯಾದರೂ ಹಲವು
ವಿಧಗಳಲ್ಲಿ ವೈಮನಸ್ಯಗಳು ಉಂಟಾಗಲೂ
ಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.

ವೃಶ್ಚಿಕ
ಉದ್ಯೋಗಸ್ಥ ಮಹಿಳೆಯರಿಗೆ ಭಡ್ತಿ ಸಿಗಲಿದೆ.
ಹೆಚ್ಚೆಚ್ಚು ಶಾಪಿಂಗ್ ಮಾಡಲಿದ್ದೀರಿ. ಖರ್ಚಿನ
ಬಾಬತ್ತು ಹೆಚ್ಚಾಗಲಿದೆ. ಜೋಪಾನವಾಗಿರಿ.

 ಧನುಸ್ಸು
ಮರೆಗುಳಿತನವು ಈ ದಿನಗಳಲ್ಲಿ ದೊಡ್ಡ
ಹೊಡೆತ ಕೊಡಲಿದೆ. ನಿಮ್ಮದಲ್ಲದ ತಪ್ಪಿಗೂ
ಬೆಲೆ ತೆರಬೇಕಾದ ಪರಿಸ್ಥಿತಿ ಈಗ ಬರಲಿದೆ.

ಮಕರ
ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ನಿಮ್ಮ
ಸಮಚಿತ್ತ ಮನಸ್ಸಿನಿಂದ ಕಾರ್ಯ ಪ್ರವೃತ್ತ
ರಾಗಿರಿ. ಅದೇ ನಿಮ್ಮ ದೊಡ್ಡ ಗುಣವಾಗಲಿದೆ.

ಕುಂಭ
ಖರ್ಚುವೆಚ್ಚಗಳಲ್ಲಿ ಹೆಚ್ಚಿನ ಬದಲಾವಣೆ.
ಮನೆಯ ವಾತಾವರಣವು ಪ್ರಶಾಂತವಾಗಿದೆ.
ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವ ದಿನವಿದು.

ಮೀನ 
ಹೊಸ ಹೂಡಿಕೆ ಹಾಗೂ ಹೊಸ ಕೆಲಸಗಳನ್ನು
ಪ್ರಾರಂಭಿಸಲು ಇದು ಸಕಾಲ. ಸಫಲತೆಯು
ನಿಮ್ಮ ಕಡೆಗಿದೆ. ಯೋಚಿಸಿ ಮುನ್ನಡೆಯಿರಿ.

loader