ಮೇಷ: ನೀವು ಅಂದುಕೊಂಡಿದ್ದೆಲ್ಲಾ ಇಂದು ನೆರವೇರಲಿದೆ. ಒಳ್ಳೆಯತನಕ್ಕೆ ಬೆಲೆ ಸಿಕ್ಕೇ ಸಿಕ್ಕುತ್ತದೆ. ಆರ್ಥಿಕವಾಗಿ ಲಾಭದ ದಿನವಿದು.

ವೃಷಭ: ತಪ್ಪು ಮಾಡಿದ ಮೇಲೆ ಅದರ ಅರಿವಾಗಲಿದೆ. ಗುರು ಬಲ ನಿಮ್ಮ ಮೇಲೆ ಇರುವುದರಿಂದ ಹೆಚ್ಚು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.

ಮಿಥುನ: ಸಣ್ಣ ಪುಟ್ಟ ಗೊಂದಲಗಳಿಂದ ಹೊರ ಬಂದು ಆನಂದವನ್ನು ಕಂಡುಕೊಳ್ಳುವಿರಿ. ದೊಡ್ಡವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಶುಭಫಲ.

ಕಟಕ: ಬೇರೆಯವರು ಏನು ಅಂದುಕೊಳ್ಳುತ್ತಾರೆ ಎನ್ನುವುದನ್ನು ಬಿಟ್ಟು, ನಿಮ್ಮ ದಾರಿಯಲ್ಲಿ ನೀವು ಸಾಗುತ್ತಿರಿ. ಆತ್ಮಸ್ಥೈರ್ಯ ಹೆಚ್ಚಲಿ.

ಸಿಂಹ: ಅಮೃತತ್ವ ಪಡೆಯಬೇಕಾದರೆ ತುಸು ಶ್ರಮ ಹಾಕಲೇಬೇಕು. ಆಸೆಗೆ ಮಿತಿ ಇಲ್ಲ. ನಿಮ್ಮ ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಶುಭದಿನ.

ವಾರ ಭವಿಷ್ಯ: ಈ ರಾಶಿಯವರು ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ

ಕನ್ಯಾ: ಸತ್ಯದರ್ಶನವಾಗಲಿದೆ. ಪ್ರಕೃತಿಯಲ್ಲಿ ದೇವರನ್ನು ಕಾಣುವಿರಿ. ಗೊಂದಲಗಳು ನಿವಾರಣೆಯಾಗಲಿವೆ. ಗೆಲುವು ನಿಮ್ಮದಾಗಲಿದೆ.

ತುಲಾ: ಕೆಲ ವ್ಯಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಲಿದ್ದಾರೆ. ಕಷ್ಟಗಳಿಗೆ ಅಂಜದೇ ಮುಂದೆ ಸಾಗುತ್ತಿರಿ. ಸ್ವಾರ್ಥಿಗಳಿಂದ ದೂರವಿರಿ.

ವೃಶ್ಚಿಕ: ಹೊಸ ಜಾಗ, ಹೊಸ ಜನವನ್ನು ಹುಡುಕಿ ಹೊರಡುವಿರಿ. ನಿಮ್ಮ ಪಾಲಿಗೆ ಇದು ಸುದಿನವಾಗಲಿದೆ. ಆರ್ಥಿಕವಾಗಿ ಪ್ರಗತಿ.

ಧನಸ್ಸು: ಸ್ನೇಹಿತ ಸಮಸ್ಯೆಯಿಂದ ಹೊರಗೆ ಬರುವುದಕ್ಕೆ ನೀವು ನೆರವಾಗಿ ನಿಲ್ಲಲಿದ್ದೀರಿ. ಸುಲಭಕ್ಕೆ ದಕ್ಕುವ ವಸ್ತುಗಳಿಗೆ ಆಸೆ ಪಡದಿರಿ.

ಮಕರ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮುಂಜಾನೆಯಿಂದಲೇ ಕೆಲಸದಲ್ಲಿ ಉತ್ಸಾಹ, ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಪಾಡಿಗೆ ನೀವಿರಿ.

ಕುಂಭ: ಮುಂದೆ ಬರುವ ಸವಾಲುಗಳನ್ನು ಎದುರಿಸಲು ಇಂದಿನಿಂದಲೇ ತಯಾರಿ ನಡೆಸಿಕೊಳ್ಳಿ. ಶುಭ ಫಲ ಕಾಣಲಿದ್ದೀರಿ.

ಮೀನ: ಜವಾಬ್ದಾರಿಗಳು ಹೆಚ್ಚಾಗಲಿವೆ. ಬಂಧುಗಳಿಂದ ಆರ್ಥಿಕ ಸಹಕಾರ ನಿರೀಕ್ಷೆ ಬೇಡ. ನಿಮ್ಮದಲ್ಲದ ಕೆಲಸಗಳಲ್ಲಿ ನೀವು ತೊಡಗಿಕೊಳ್ಳುವುದು ಬೇಡ.