ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮನವಾಗಲಿದೆ

ಮೇಷ
ಹಿರಿಯರು ನಿಮ್ಮ ಎಲ್ಲಾ ಮಾತುಗಳನ್ನು
ಒಪ್ಪರು. ಅವರ ಅನುಭವವೇ ಅದಕ್ಕೆಲ್ಲಾ
ಕಾರಣ. ಅವರ ಮಾತಿಗೆ ಬೆಲೆ ಕೊಡಿ.

ವೃಷಭ
ಮನೆಯಲ್ಲಿ ಸಂತಸದ ವಾತಾವರಣವಿದ್ದು
ಅನಿರೀಕ್ಷಿತ ಧನಾಗಮನವೂ ಆಗಲಿದೆ. ಹಿತೈಷಿ
ಗಳು ನಿಮಗೆ ಬುದ್ಧಿವಾದ ಹೇಳಲಿದ್ದಾರೆ.

ಮಿಥುನ
ಇಂದು ನಿಮ್ಮ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ
ವ್ಯತ್ಯಯವಾಗಲಿದೆ. ಆತಂಕಕ್ಕೆ ಒಳಗಾಗದಿರಿ.
ವಾತಾವರಣವೇ ಪ್ರತಿಕೂಲವಾಗಿದೆ. ಜೋಕೆ,

ಕಟಕ
ಯಾವುದೇ ಋಣಾತ್ಮಕ ವಿಚಾರಗಳಿಗೂ
ಕಿವಿಗೊಡದಿರುವುದೇ ಒಳಿತು. ಆಲೋಚಿಸಿ
ನಿರ್ಧಾರ ತೆಗೆದುಕೊಳ್ಳಿ. ಆತುರ ಪಡಬೇಡಿ.

ಸಿಂಹ
ಇಷ್ಟಪಟ್ಟ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆಗಳು
ಎದುರಾಗಲಿವೆ. ಭಯ ಪಡುವ ಅಗತ್ಯವಿಲ್ಲ.
ಚರ್ಮದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

ಕನ್ಯಾ
ದ್ವಿಚಕ್ರ ವಾಹನ ಮಾರಾಟಗಾರರು ಹಾಗೂ
ತಂತ್ರಜ್ಞಾನದವರು ಸ್ವಲ್ಪ ಕಷ್ಟ ಪಡಲೇಬೇಕು.
ಇಷ್ಟಪಟ್ಟು ಮಾಡಿದರೆ ಖುಷಿಯು ಗ್ಯಾರಂಟಿ.

ತುಲಾ
ವಯಸ್ಸಾದವರು ಮನೆಯಲ್ಲಿದ್ದು ನಿಮ್ಮಿಂದ
ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ನಿಮ್ಮ
ಸಾಂತ್ವನದ ಮಾತು ಹೆಚ್ಚು ಬಲ ಕೊಡಲಿವೆ.

ವೃಶ್ಚಿಕ
ಪುಣ್ಯ ಕೆಲಸದ ನಿರ್ವಹಣೆಯು ನಿಮ್ಮಿಂದ
ನೆರವೇರುವ ಸಂಭವವಿದೆ. ಎಲ್ಲರಿಗೂ
ಒಳ್ಳೆಯದನ್ನೆ ಬಯಸುವ ಮನಸ್ಸು ನಿಮ್ಮದು. 

ಧನುಸ್ಸು
ಕೋರ್ಟ್, ವ್ಯಾಜ್ಯ ಹಾಗೂ ತಕರಾರುಗಳಿಂದ
ಆದಷ್ಟು ದೂರವಿದ್ದರೆ ಕ್ಷೇಮ. ನಿಮ್ಮ ವ್ಯಕ್ತಿತ್ವಕ್ಕೆ
ಇವು ಸರಿಯಲ್ಲ. ಕ್ಷಮಾಗುಣ ರೂಢಿಸಿಕೊಳ್ಳಿ.

ಮಕರ
ಮನೆಯಲ್ಲಿನ ಹಿರಿಯರು ಹೇಳುವ ಮಾತಿಗೆ
ಎದುರಾಡದಿರಿ. ಈ ಸಮಯವು ನಿಮ್ಮದಲ್ಲ.
ಜಾಗ್ರತೆಯಿಂದಿದ್ದರೆ ಎಲ್ಲವೂ ಒಳಿತಾಗಲಿದೆ.

ಕುಂಭ
ನಿಮ್ಮ ಒಳ್ಳೆಯ ವಿಚಾರ ನಿಮಗೆ ಸನ್ಮಾನ
ದೊರಕಿಸಿಕೊಡಲಿದೆ. ಸುಭೋಜನವನ್ನು
ಸವಿಯುವ ಅವಕಾಶ ಇಂದು ಒದಗಲಿದೆ.

ಮೀನ 
ಮನಸ್ಸಿಗೆ ಕಿರಿಕಿರಿ ಉಂಟಾಗುವ ಸನ್ನಿವೇಶ
ಎದುರಾದೀತು! ಎಂತಹ ಕಷ್ಟಗಳು ಬಂದರೂ
ಧೈರ್ಯದಿಂದ ಎದುರಿಸಲು ಸಿದ್ಧರಾಗಿರಿ.