ಈ ರಾಶಿಗೆ ಇಂದು ಕಾದಿದೆ ಒಂದು ಶುಭ ಸುದ್ದಿ             

ಮೇಷ
ಕಡು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ.
ಹಣದ ಸಹಾಯವೇ ಆಗಬೇಕೆಂದೇನು ಇಲ್ಲ.
ನೊಂದವರಿಗೆ ಸಾಂತ್ವನ ನೀಡಿದರೂ ಸಾಕು.

ವೃಷಭ
ಶುಭ ಕಾರ್ಯಗಳಿಗಿಂದು ಸೂಕ್ತವಾದ
ಮುಹೂರ್ತವು ಕೂಡಿ ಬರಲಿದೆ. ಸಣ್ಣಪುಟ್ಟ
ಖುಷಿಗಳು ನಿಮ್ಮನ್ನು ಉಲ್ಲಾಸಗೊಳಿಸುತ್ತವೆ.

ಮಿಥುನ
ಎಲ್ಲರೊಂದಿಗೂ ಬೆರೆಯಿರಿ ಹಾಗೂ ಧನಾತ್ಮಕ
ಆಲೋಚನೆಗಳಿಂದಷ್ಟೇ ನಿಮ್ಮ ಕೆಲಸದಲ್ಲಿ
ಯಶಸ್ಸು ದೊರೆಯಲಿದೆ. ಚಿಂತೆ ಮಾಡದಿರಿ.

ಕಟಕ
ನಿಮ್ಮ ರಾಶಿಯ ಫಲದ ಪ್ರಕಾರ ನೀವು
ನಿಷ್ಠೂರವಾದಿಗಳು. ಅದನ್ನು ದಿನ ಕ್ರಮೇಣ
ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿರಿ.

ಸಿಂಹ
ನೆಮ್ಮದಿಯ ವಾತಾವರಣವು ಏರ್ಪಟ್ಟಿದೆ.
ಉದ್ಯೋಗಿಗಳಿಗೆ ಕೆಲಸದ ಒತ್ತಡ. ಖಾಸಗಿ
ಉದ್ಯೋಗಿಗಳಿಗೆ ಬಡ್ತಿಯ ಸಂಭವೂ ಇದೆ

ಕನ್ಯಾ
ಒತ್ತಡದ ಪರಿಸ್ಥಿತಿಯಿಂದ ಹೊರಬರಲಿದ್ದೀರಿ.
ಹೆದರದೇ ಧೈರ್ಯದಿಂದಿರಿ ಎಲ್ಲವೂ ಸರಿ
ಹೋಗಲಿವೆ. ಸಮಚಿತ್ತವನ್ನು ಕಾಯ್ದುಕೊಳ್ಳಿ.

ತುಲಾ 
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ
ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಒತ್ತಡವು
ಅನಾರೊಗ್ಯಕ್ಕೆ ಕಾರಣವಾಗಬಹುದು.

ವೃಶ್ಚಿಕ
ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ
ಸಾಗುತ್ತವೆ. ನಿಮ್ಮ ಜೀವನ ಮತ್ತು ವೃತ್ತಿಗಳ
ಆಕಾಂಕ್ಷೆಗಳು ಏರುತ್ತಾ ಹೋಗುತ್ತಲಿವೆ. 

ಧನುಸ್ಸು
ಭೂಮಿ-ವಾಹನಗಳು ಲಭ್ಯವಾಗಲಿದೆ.
ಖಾಸಗಿ ಉದ್ಯೋಗಿಗಳಿಗೆ ಕೆಲಸದ ಒತ್ತಡ
ತಪ್ಪದು. ಕಷ್ಟದ ದಿನಗಳು ಮುಗಿಯಲಿವೆ.

ಮಕರ
ನಿಮ್ಮ ವೈರಾಗ್ಯದ ಮನೋಗುಣಗಳು ಈ
ಕಾಲಕ್ಕೆ ಸರಿ ಹೊಂದುವುದಿಲ್ಲ. ನಿಮ್ಮಂತೆಯೇ
ನಿಮ್ಮ ಕುಟುಂಬದವರೂ ಇರಬೇಕೆಂದೇನಿಲ್ಲ.

ಕುಂಭ
ಹೊಸ ಬಟ್ಟೆಗಳನ್ನು ಕೊಳ್ಳುವ ಯೋಗವಿದೆ.
ಚಳಿಗಾಳಿಯ ಪರಿಣಾಮ ನಿಮ್ಮ ಆರೋಗ್ಯವು
ಸ್ವಲ್ಪ ಏರುಪೇರಾಗಲಿದೆ. ಜೋಪಾನವಾಗಿರಿ.

ಮೀನ 
ದೂರ ಪ್ರಯಾಣ ಸಂಭವ. ಕ್ರೀಡಾ ಚಟು
ವಟಿಕೆಗಳಲ್ಲಿ ಸಾಧನೆ ಮಾಡಲು ಇದು ಸೂಕ್ತ
ಸಮಯ. ಸದುಪಯೋಗ ಪಡಿಸಿಕೊಳ್ಳಿ.