ಹೊಸ ವರ್ಷದಲ್ಲಿ ನಿಮ್ಮ ಭವಿಷ್ಯ ಹೇಗಿದೆ..?

ಮೇಷ
ಹಿರಿಯ ಅಧಿಕಾರಿಗಳಿಂದ ಸಣ್ಣ ಮಟ್ಟದ
ಕಿರಿಕಿರಿ ಅನುಭವಿಸಲಿದ್ದೀರಿ. ಎಲ್ಲರನ್ನೂ
ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ.

ವೃಷಭ
ಹೆಚ್ಚು ಲಾಭ ದೊರೆಯುವಂತಹ ಕಾರ್ಯ
ದಲ್ಲಿ ತೊಡಗಿಕೊಳ್ಳಲಿದ್ದೀರಿ. ನಿಮ್ಮ ಮಾತಿ
ನಿಂದ ಇತರರಿಗೆ ನೋವಾಗದಂತೆ ನೋಡಿಕೊಳ್ಳಿ

ಮಿಥುನ
ಹಣಕಾಸಿನ ವಿಚಾರದಲ್ಲಿ ಬಿಗಿಯಾಗಿ ವರ್ತನೆ
ಮಾಡಲಿದ್ದೀರಿ. ನಿತ್ಯದ ಜಂಜಾಟದಿಂದ
ದೂರವಾಗಲಿದ್ದೀರಿ. ಶಾಂತಿ ಹೆಚ್ಚಲಿದೆ.

ಕಟಕ
ನಿಮ್ಮ ಹಿತಾಶಕ್ತಿಗೆ ಧಕ್ಕೆ ತರುವ ಪ್ರಯತ್ನಗಳು
ಆಗಲಿವೆ. ನಿಧಾನಕ್ಕೆ ಆಲೋಚನೆ ಮಾಡಿ ಕೆಲಸ
ಕಾರ್ಯಗಳನ್ನು ಮಾಡಿ. ನಿರೀಕ್ಷೆ ಬೇಡ.

ಸಿಂಹ
ಹೆಚ್ಚು ಕೋಪ ಮಾಡಿಕೊಳ್ಳುವುದು ಒಳ್ಳೆಯ
ದ್ದಲ್ಲ. ಮಾಡಿದ ತಪ್ಪಿಗೆ ಪಶ್ಚಾತ್ತಾಪ
ಪಡಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.

ಕನ್ಯಾ
ಅಪ್ಪ ಅಮ್ಮನ ಮನಸ್ಸಿಗೆ ನೋವಾಗದ
ರೀತಿಯಲ್ಲಿ ನಡೆದುಕೊಳ್ಳಿ. ನಿಮ್ಮಿಂದ
ಮತ್ತೊಬ್ಬರಿಗೆ ತೊಂದರೆಯಾಗದಿರಲಿ.

ತುಲಾ 
ಹೆಚ್ಚಿನ ಕೆಲಸದ ಒತ್ತಡದಿಂದ ಸಂಜೆ ವೇಳೆಗೆ
ಆಯಾಸ ಹೆಚ್ಚಾಗಲಿದೆ. ನಿಮ್ಮ ಕೆಲಸಕ್ಕೆ ತಕ್ಕ
ಪ್ರತಿಫಲವೂ ದೊರೆಯಲಿದೆ. ಖರ್ಚು ಅಧಿಕ.

ವೃಶ್ಚಿಕ
ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ.
ಖರ್ಚಿನಲ್ಲಿ ಹಿಡಿತ ಸಾಧಿಸುವುದು ಒಳಿತು.
ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. 

ಧನುಸ್ಸು
ಹಬ್ಬದ ತಯಾರಿಯಲ್ಲಿಯೇ ಇಡೀ ದಿನ
ತೊಡಗಿಕೊಳ್ಳಲಿದ್ದೀರಿ. ಸಂಬಂಧಿಗಳು ಮನೆಗೆ
ಬರಲಿದ್ದಾರೆ. ಹೊಸ ಸಂಬಂಧ ಬೆಸೆಯಲಿವೆ.

ಮಕರ
ದೊಡ್ಡವರಿಂದ ಸಾಕಷ್ಟು ಮಾಹಿತಿಗಳನ್ನು
ತಿಳಿದುಕೊಳ್ಳಲಿದ್ದೀರಿ. ಕ್ರೀಡೆಯಲ್ಲಿ ಆಸಕ್ತಿ
ಹೆಚ್ಚಾಗಲಿದೆ. ಕೆಲಸದಲ್ಲಿಯೂ ಒತ್ತಡ.

ಕುಂಭ
ನೀವು ಮಾಡಿದ್ದೇ ಸರಿ ಎಂದು ಹೇಳಿಕೊಳ್ಳು
ವುದು ಬೇಡ. ಸ್ವಾರ್ಥ ಮರೆತು
ಎಲ್ಲರೊಂದಿಗೂ ಒಂದಾಗಲಿದ್ದೀರಿ. ಶುಭ ಫಲ

ಮೀನ 
ನಿಮ್ಮ ದಾರಿಯಲ್ಲಿ ನೀವು ಸಾಗುವಾಗ ಎಡರು
ತೊಡರುಗಳು ಬರುವುದು ಸಹಜ.
ಯಾವುದಕ್ಕೂ ಅಂಜದೇ ಮುಂದೆ ಸಾಗುತ್ತಿರಿ.