ಯಾವ ರಾಶಿಗೆ ಯಾವ ಫಲ, ಇಂದಿನ ನಿಮ್ಮ ಭವಿಷ್ಯದಲ್ಲಿ ಏನಿದೆ..?
ಈ ರಾಶಿಗೆ ಸಂಪೂರ್ಣ ದಿನ ಸಂತೀಷದೊಂದಿಗೆ ಶುಭ ಫಲವಿದೆ
ಮೇಷ
ಹೊಸ ವ್ಯಕ್ತಿಗಳ ಪರಿಚಯದ ವೇಳೆ ಅಗತ್ಯ
ಎಚ್ಚರಿಕೆ ಇರಲಿ. ಹಿರಿಯರಿಂದ ಒಳ್ಳೆಯ
ಮಾರ್ಗದರ್ಶನ ದೊರೆಯಲಿದೆ. ಶುಭ ಫಲ.
ವೃಷಭ
ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟಾಗಿ
ಭೇಟಿಯಾಗಲಿದ್ದೀರಿ. ಇಂದು ಮತ್ತು ನಾಳೆ
ಇಡೀ ದಿನ ಸಂತೋಷದಿಂದ ಕಳೆಯುವಿರಿ.
ಮಿಥುನ
ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆಯಲ್ಲಿ
ಹೆಚ್ಚು ಸಮಯ ನಿಲ್ಲದಿರಿ. ಗೆಳೆಯರಿಗೆ
ಸಹಾಯ ಮಾಡಬೇಕಾದ ಸಂದರ್ಭ ಬರಲಿದೆ
ಕಟಕ
ನಿಮ್ಮ ಕೆಲಸದಲ್ಲಿಯೇ ದೇವರನ್ನು ಕಾಣು
ವುದನ್ನು ಕಲಿಯಿರಿ. ಅಂತರಂಗದ
ಶುದ್ಧಿಯಿಂದ ಅವಕಾಶಗಳು ಹೆಚ್ಚಾಗಲಿವೆ.
ಸಿಂಹ
ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿದ್ದೀರಿ.
ದೂರದ ಪ್ರಯಾಣ ಸಾಧ್ಯವಾಗಲಿದೆ.
ಕನ್ಯಾ
ಮಕ್ಕಳ ಆರೋಗ್ಯದಲ್ಲಿ ಚೇತರಿಕೆ
ಕಂಡುಬರಲಿದೆ. ಬಂಧುಗಳ ಜೊತೆಗೆ ಸಣ್ಣ
ಮನಸ್ಥಾಪ, ಜೀವನ ಕ್ರಮದಲ್ಲಿ ವ್ಯತ್ಯಯ.
ತುಲಾ
ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ
ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು
ತುಲಾ ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.
ವೃಶ್ಚಿಕ
ಮನೆ ಮತ್ತು ಮನವನ್ನು ಶುಚಿಯಾಗಿ
ಇಟ್ಟುಕೊಳ್ಳಿ. ಇದರಿಂದ ಮನಶಾಂತಿ
ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.
ಧನಸ್ಸು
ಮತ್ತೊಬ್ಬರ ಆತುರಕ್ಕೆ ನೀವು ಸಂಕಷ್ಟಕ್ಕೆ
ಸಿಲುಕಲಿದ್ದೀರಿ. ನಮ್ಮ ಪಾಲಿಗೆ ಬಂದ
ಕೆಲಸವನ್ನು ನಾವೇ ಮಾಡಿ ತೀರಬೇಕು.
ಮಕರ
ಉದ್ದಿಮೆಯ ಬಗ್ಗೆ ಮಾತುಕತೆಗಳು
ಶುರುವಾಗಲಿವೆ. ಕೊನೆಯ ಗಳಿಗೆಯಲ್ಲಿ
ಆತುರ ಮಾಡುವುದು ಬೇಡ. ಶುಭವಾಗಲಿದೆ.
ಕುಂಭ
ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ
ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ.
ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು.
ಮೀನ
ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗ
ಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾ
ರಂಭಗಳಿಗೆ ಪೂರ್ವ ತಯಾರಿ ಮುಗಿಯಲಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 30, 2019, 7:13 AM IST