Asianet Suvarna News Asianet Suvarna News

ಈ ರಾಶಿಗೆ ವ್ಯಾಪಾರದಲ್ಲಿ ಭಾರೀ ಲಾಭ : ಉಳಿದ ರಾಶಿ?

ಇಂದು ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ?

Daily Bhavishya 30 July 2019
Author
Bengaluru, First Published Jul 30, 2019, 7:06 AM IST
  • Facebook
  • Twitter
  • Whatsapp

ಈ ರಾಶಿಗೆ ವ್ಯಾಪಾರದಲ್ಲಿ ಭಾರೀ ಲಾಭ : ಉಳಿದ ರಾಶಿ?


ಮೇಷ
ತಾಳಿದವನು ಬಾಳಿಯಾನು. ಲೆಕ್ಕಾಚಾರ
ಇಟ್ಟುಕೊಳ್ಳದೇ ಕೆಲಸ ಮಾಡುವುದು ಬೇಡ.
ನಿಮ್ಮ ಮಾತಿಗೆ ಹೆಚ್ಚು ಬೆಲೆ ದೊರೆಯಲಿದೆ.

ವೃಷಭ
ಹತ್ತಿರದಲ್ಲಿಯೇ ಇದ್ದರೂ ಆತ್ಮೀಯತೆ
ಬೆಳೆಯದು. ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದ
ಸಂಗತಿಗಳು ನಿಮ್ಮ ನಿರೀಕ್ಷೆ ಸುಳ್ಳು ಮಾಡಲಿವೆ.

ಮಿಥುನ
ಆರೋಗ್ಯದಲ್ಲಿ ಕೊಂಚ ಏರುಪೇರು
ಕಂಡುಬರಲಿದೆ. ನಿಮಗೆ ಸಹಾಯ
ಮಾಡಿದವರನ್ನು ನೆನೆದು ಮುಂದೆ ಸಾಗಿ.

ಕಟಕ
ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲ
ಉಂಟಾಗಲಿದೆ. ಎಲ್ಲವನ್ನೂ ನಾನೇ
ಮಾಡುತ್ತೇನೆ ಎನ್ನುವ ಉತ್ಸಾಹ ಹೆಚ್ಚಲಿದೆ.

ಸಿಂಹ
ಆತ್ಮೀಯ ಗೆಳೆಯರ ಭೇಟಿ ಸಾಧ್ಯವಾಗಲಿದೆ.
ಅಪರಿಚಿತರೂ ನಿಮ್ಮ ಬಗ್ಗೆ ಒಳ್ಳೆಯ
ಮಾತುಗಳನ್ನಾಡಲಿದ್ದಾರೆ. ಶುಭ ದಿನ

ಕನ್ಯಾ
ಹಾಸಿಗೆ ಇದ್ದಷ್ಟು ಕಾಲು ಚಾಚುವುದು
ಒಳ್ಳೆಯದ್ದು. ಆಲಸ್ಯ ತೊರೆದು ಎಲ್ಲಾ
ಕೆಲಸಗಳನ್ನೂ ಸಾಧ್ಯವಾದಷ್ಟು ಬೇಗ ಮುಗಿಸಿ.

ತುಲಾ 
ನಿಮ್ಮ ಮಾತೇ ನಿಮ್ಮ ಬೆಲೆ ಹೆಚ್ಚಿಸಲಿದೆ. ಎಚ್ಚರ
ತಪ್ಪಿದರೆ ಅದೇ ಮಾತಿನಿಂದ ತೊಂದರೆಯೂ
ಆಗುವ ಅಪಾಯ ಇದೆ. ವ್ಯಾಪಾರದಲ್ಲಿ ಲಾಭ.

ವೃಶ್ಚಿಕ
ಮನೆಯಲ್ಲಿ ಮದುವೆ ಪ್ರಸ್ತಾವಗಳು
ಚರ್ಚೆಯಾಗಲಿವೆ. ಹಣಕಾಸಿನ ವ್ಯವಹಾರಕ್ಕೆ
ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. 

ಧನುಸ್ಸು
ನಡೆಯಲು ಶುರು ಮಾಡದೇ ಇದ್ದರೆ ನೀವು
ಗುರಿಯನ್ನು ತಲುಪುವುದು ಕಷ್ಟ. ಆಗದು
ಎಂದು ಸುಮ್ಮನೆ ಕೂರದಿರಿ. ಶ್ರಮವಿರಲಿ.

ಮಕರ
ಎಲ್ಲರ ಮಾತುಗಳನ್ನೂ ಆಲಿಸಿ ನಿಮಗೆ ಯಾವು
ದು ಸರಿ ಎನ್ನಿಸುತ್ತದೆಯೋ ಅದನ್ನು ಮಾತ್ರ
ಪರಿಗಣಿಸಿ ಮುಂದೆ ಸಾಗಿ. ಆತುರ ಬೇಡ.

ಕುಂಭ
ಮತ್ತೊಬ್ಬರ ಸಾಧನೆಯನ್ನು ನೀವು
ಮಾದರಿಯಾಗಿ ಇಟ್ಟುಕೊಂಡು ಮುಂದೆ
ಸಾಗಿ. ಗೊತ್ತಿಲ್ಲದೇ ಇರುವುದನ್ನು ತಿಳಿಯಿರಿ.

ಮೀನ 
ನಿಮಗೆ ನೀವೇ ಬಾಸ್ ಆದರೂ, ಇಂದು
ಮತ್ತೊಬ್ಬರ ಆದೇಶಕ್ಕಾಗಿ ಕಾಯಲೇಬೇ
ಕಾಗುತ್ತದೆ. ಪರ ಸ್ಥಳಕ್ಕೆ ಭೇಟಿ ಸಾಧ್ಯತೆ. 

Follow Us:
Download App:
  • android
  • ios