ಈ ರಾಶಿಗೆ ದೀರ್ಘಕಾಲದ ಲಾಭವೊಂದು ದೊರೆಯುವುದು

ಮೇಷ
ದೀರ್ಘ ಕಾಲ ಜೊತೆಗೆ ಸಾಗುವ ಗೆಳೆಯರು
ಸಿಗಲಿದ್ದಾರೆ. ದಿನಾಂತ್ಯದಲ್ಲಿ ಹೆಚ್ಚು ಒತ್ತಡ
ನಿರ್ಮಾಣವಾಗಲಿದೆ. ಬಂಧುಗಳ ಆಗಮನ.

ವೃಷಭ
ಸಮಯಕ್ಕೆ ಸರಿಯಾಗಿ ನಿರ್ಧಾರ ಕೈಗೊಳ್ಳು
ವಿರಿ. ಆತ್ಮೀಯರ ಮಾತಿಗೆ ತಾಳ್ಮೆಯಿಂದ
ಪ್ರತಿಕ್ರಿಯೆ ನೀಡಿ. ನೋವಲ್ಲೂ ನಗುವಿರಿ.

ಮಿಥುನ
ನಿಮಗೆ ತಿಳಿದ ವಿಚಾರಗಳೇ ಅಂತಿಮವಲ್ಲ.
ನಿಮ್ಮಗಿಂತಲೂ ಹೆಚ್ಚು ತಿಳಿದುಕೊಂಡಿರುವವರ
ಜೊತೆ ಹೆಚ್ಚು ಸಮಾಲೋಚನೆ ಮಾಡಿ.

ಕಟಕ
ಮುಂದೆ ಏನಾಗುತ್ತದೆ ಎನ್ನುವ ಚಿಂತೆ ಬೇಡ.
ವಾಸ್ತವದಲ್ಲಿ ಬದುಕು ಸಾಗಿಸಲು ಪ್ರಯತ್ನ
ಮಾಡಿ. ಮನರಂಜನೆ ಹೆಚ್ಚಾಗಲಿದೆ.

ಸಿಂಹ
ಭಾಷೆಗೆ ಸಂಬಂಧಿಸಿದಂತೆ ಹೆಚ್ಚು ಕೆಲಸ
ಮಾಡುವಿರಿ. ನಿಮ್ಮ ಕಾರ್ಯಕ್ಕೆ ಹಿರಿಯರಿಂದ
ಹೆಚ್ಚು ಮೆಚ್ಚುಗೆ ದೊರೆಯಲಿ

ಕನ್ಯಾ
ಒಳ್ಳೆಯ ಸಿನಿಮಾ ನೋಡುವಿರಿ. ಹೆಚ್ಚು
ಏಕಾಂತಕ್ಕೆ ಒಳಗಾಗುವಿರಿ. ಮತ್ತೊಬ್ಬರ ಬಗ್ಗೆ
ಹಗುರವಾಗಿ ಮಾತನಾಡುವುದು ಬೇಡ.

ತುಲಾ 
ನಿಮ್ಮದೇ ನಿಮಗೆ ದೊಡ್ಡ ಸಮಸ್ಯೆ
ಎಂದುಕೊಳ್ಳಬಹುದು. ಆದರೆ ನಿಮಗಿಂತಲೂ
ಹೆಚ್ಚು ಸಮಸ್ಯೆ ಇರುವವರನ್ನು ಕಾಣುವಿರಿ.

ವೃಶ್ಚಿಕ
ತುಂಬಿದ ಕೊಡ ತುಳುಕುವುದಿಲ್ಲ. ಹಾಗೆಯೇ
ಇಡೀ ದಿನ ನಿಮ್ಮ ವ್ಯಕ್ತಿತ್ವ ಇರಲಿದೆ. ಒಳ್ಳೆಯ
ದ್ದನ್ನು ಮಾಡುವಿರಿ. ಮೆಚ್ಚುಗೆ ಸಿಗಲಿದೆ. 

ಧನುಸ್ಸು
ಮತ್ತೊಬ್ಬರ ದೌರ್ಬಲ್ಯದ ಬಗ್ಗೆ ಹೆಚ್ಚು
ಮಾತನಾಡುವುದು ಬೇಡ. ನಿಮ್ಮ ಶಕ್ತಿಯ
ಅರಿವು ನಿಮಗಾಗಲಿದೆ. ಅದರಿಂದಲೇ ಪ್ರಗತಿ.

ಮಕರ
ನಿಮ್ಮ ಸಾಧನೆ ಬಗ್ಗೆ ನೀವೇ ಹೇಳಿಕೊಳ್ಳುವುದು
ಬೇಡ. ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು
ಮಾಡಿ. ಕೆಲಸವೇ ನಿಮ್ಮನ್ನು ಪರಿಚಯಿಸಲಿದೆ.

ಕುಂಭ
ಅನಾವಶ್ಯಕ ವಿಚಾರಗಳಲ್ಲಿ ಭಾಗಿಯಾಗು
ವುದು ಕೂಡದು. ನಿಮ್ಮ ಬಗ್ಗೆ ಎಲ್ಲರಿಂದಲೂ
ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿದೆ.

ಮೀನ 
ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆಯಾದರೂ
ಅದು ಕ್ಷಣಿಕ ಮಾತ್ರ. ನಿಮಗೆ ಅನ್ನಿಸಿದ್ದನ್ನು
ಧೈರ್ಯವಾಗಿ ಮಾಡಿರಿ. ಒಳಿತಾಗಲಿ