ಈ ರಾಶಿಗೆ ಸಂತೋಷ ಒದಗಿ ಲಾಭವಾಗಲಿದೆ : ಉಳಿದ ರಾಶಿ?


ಮೇಷ
ಶಾಂತ ಮನಸ್ಸಿನಿಂದ ಹಿಡಿದ ಕಾರ್ಯವನ್ನು
ಮಾಡಿ ಮುಗಿಸಲಿದ್ದೀರಿ. ದೂರದ ಪ್ರಯಾಣ
ಮಾಡಬೇಕಾದ ಅನಿವಾರ್ಯತೆ ಬರಲಿದೆ.

ವೃಷಭ
ನಿಮ್ಮ ಪಾಲಿಗೆ ಬಂದ ಕೆಲಸಗಳನ್ನು ನೀವೇ
ಮಾಡಿ ಮುಗಿಸಬೇಕು. ಸಾಧ್ಯವಾದರೆ
ಸಹಾಯ ಮಾಡಿ. ಇಲ್ಲವಾದರೆ ಸುಮ್ಮನಿರಿ.

ಮಿಥುನ
ಗೆಲ್ಲಬೇಕು ಎಂದು ಹೊರಟಾಗ
ಸೋಲುವುದಕ್ಕೂ ಸಿದ್ಧವಾಗಿರಬೇಕು. ನೀವು
ಅಂದುಕೊಂಡಂತೆಯೇ ಎಲ್ಲವೂ ಆಗಲಿದೆ.

ಕಟಕ
ವೇಗವಾಗಿ ದಿನ ಕಾರ್ಯವೆಲ್ಲವನ್ನೂ ಮಾಡಿ
ಮುಗಿಸಲಿದ್ದೀರಿ. ಶ್ರಮಕ್ಕೆ ತಕ್ಕ ಪ್ರತಿಫಲ
ದೊರೆಯಲಿದೆ. ಸಂತೋಷ ಹೆಚ್ಚಲಿದೆ.

ಸಿಂಹ
ಮತ್ತೊಬ್ಬರ ದುಃಖಕ್ಕೆ ನೀವು ಅಳುತ್ತಾ
ಕೂರುವುದು ಬೇಡ. ಹೊಸ ವಸ್ತುಗಳನ್ನು
ಕೊಳ್ಳುವ ಅವಕಾಶ ಒದಗಿಬರಲಿದೆ.

ಕನ್ಯಾ
ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿತು
ಮುಂದಿನ ಹೆಜ್ಜೆ ಇಡಿ. ಆರೋಗ್ಯದಲ್ಲಿ ಸಣ್ಣ
ಏರುಪೇರು ಉಂಟಾಗಲಿದೆ. ಶುಭ ಫಲ.

ತುಲಾ 
ಆತುರದಿಂದ ಯಾವುದೇ ನಿರ್ಧಾರವನ್ನು
ಕೈಗೊಳ್ಳದಿರಿ. ಪುಟ್ಟ ಮಕ್ಕಳು ಇಡೀ ದಿನ
ನಿಮ್ಮನ್ನು ಸಂತೋಷದಿಂದ ಇಡಲಿದ್ದಾರೆ.

ವೃಶ್ಚಿಕ
ಒಂದೇ ಕಡೆ ಹೆಚ್ಚು ಸಮಯ ಕಳೆಯಲಿದ್ದೀರಿ.
ನಿಮ್ಮೊಳಗಿನ ನೋವಿಗೆ ನೀವೇ ಪರಿಹಾರ
ಕಂಡುಕೊಳ್ಳಬೇಕು. ನೆಮ್ಮದಿ ಹೆಚ್ಚಾಗಲಿದೆ. 

ಧನುಸ್ಸು
ತಪ್ಪು ಮಾಡುವುದು ಸಹಜ. ಅದನ್ನು
ತಿದ್ದಿಕೊಂಡು ಮುಂದೆ ಸಾಗಿದರೆ ಎಲ್ಲವೂ
ಒಳಿತಾಗಲಿದೆ. ಸಂಬಂಧಗಳಿಗೆ ಬೆಲೆ ಕೊಡಿ.

ಮಕರ
ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು
ನಿಮ್ಮ ದುಃಖವನ್ನು ಹೆಚ್ಚಿಸಿಕೊಳ್ಳದಿರಿ.
ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಶುಭ ದಿನ.

ಕುಂಭ
ನಾಳೆಗಳು ಸುಂದರವಾಗಿ ಇರಲು ಇಂದು
ಎಲ್ಲಾ ತಯಾರಿಯನ್ನೂ ಮಾಡಿ ಮುಗಿಸಿ
ಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.

ಮೀನ 
ಕೈಗೆಟುಕದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ
ಕೂರುವುದರ ಬದಲಿಗೆ ಇರುವ ಭಾಗ್ಯವನ್ನು
ನೆನೆದು ಸಂತೋಷ ಕಾಣಿರಿ. ಗೆಲುವು ನಿಮ್ಮದೆ.