ಮೇಷ
ನಿನ್ನೆಯ ನೋವುಗಳನ್ನು ಮರೆತು ಇಂದು
ಸಂತೋಷದಿಂದ ಇರುವಿರಿ. ಬಯಕೆಗಳನ್ನು
ನಿಗ್ರಹಿಸಿಕೊಂಡರೆ ಆನಂದ ನಿಮ್ಮದಾಗಲಿದೆ.

ವೃಷಭ
ವಿನಾಕಾರಣ ಸಮಯ ವ್ಯರ್ಥ ಮಾಡಲಿ
ದ್ದೀರಿ. ಯಾರೊಂದಿಗೂ ಕಠಿಣವಾಗಿ
ಮಾತನಾಡದಿರಿ. ನೆಮ್ಮದಿ ಹೆಚ್ಚಾಗಲಿದೆ.

ಮಿಥುನ
ಒಳ್ಳೆಯ ಕಾರ್ಯಕ್ಕೆ ನಿಧಾನವಾಗಿ ಕಾಯ
ಬೇಕು. ನಿಮ್ಮದಲ್ಲದ ವಸ್ತುಗಳಿಗೆ ಹೆಚ್ಚು ಆಸೆ
ಪಡಬೇಕಾಗಿಲ್ಲ. ಗೆಲುವು ನಿಮ್ಮದಾಗಲಿದೆ.

ಕಟಕ
ಔದ್ಯೋಗಿಕವಾಗಿ ಪ್ರಗತಿ ಸಾಧ್ಯವಾಗಲಿದೆ.
ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೀರಿ.
ಕಾಯಕದಲ್ಲಿಯೇ ಸಂತೋಷ ಕಾಣಲಿದ್ದೀರಿ.

ಸಿಂಹ
ಸೂಕ್ತ ಸಂದರ್ಭ ನೋಡಿಕೊಂಡು ಹೊಸ
ಕಾರ್ಯಗಳನ್ನು ಶುರು ಮಾಡಿ. ಆಸೆಗಳಿಗೆ
ಕಡಿವಾಣ ಹಾಕಿ. ಸಂತೋಷ ಹೆಚ್ಚಾಗಲಿದೆ.

ಕನ್ಯಾ
ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಾಗುವುದಿಲ್ಲ.
ನಿಧಾನಕ್ಕೆ ವಿಚಾರ ಮಾಡಿ ನಿರ್ಧಾರ
ತೆಗೆದುಕೊಳ್ಳಿ. ಸ್ವಂತ ಬಲದಿಂದ ಕಾರ್ಯ ಸಿದ್ಧಿ.

ತುಲಾ 
ದೊಡ್ಡವರು ಹೇಳಿದ ಮಾತಿನಂತೆ ನಡೆದು
ಕೊಳ್ಳಿ. ಆಲಸ್ಯಕ್ಕಿಂತ ದೊಡ್ಡ ಶತ್ರು ಇಲ್ಲ.
ಬಂಧುಗಳು ಇಂದು ಸಹಕಾರ ನೀಡಲಿದ್ದಾರೆ.

ವೃಶ್ಚಿಕ
ಹೆಚ್ಚು ಒತ್ತಡಕ್ಕೆ ಒಳಗಾಗದೇ ಶಾಂತವಾಗಿ
ಪರಿಸ್ಥಿತಿ ನಿಭಾಯಿಸಿ. ಎದುರಾಳಿಯ
ಟೀಕೆಗಳಿಗೆ ಕಿವಿಕೊಡದೇ ಇರುವುದು ಸೂಕ್ತ. 

ಧನುಸ್ಸು
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ನಿಮ್ಮ
ಗುಣವೇ ಇಂದು ನಿಮಗೆ ಗೆಲುವು ತಂದು
ಕೊಡಲಿದೆ. ಉದ್ಯೋಗದಲ್ಲಿ ಪ್ರಗತಿ.

ಮಕರ
ಸಹೋದ್ಯೋಗಿಗಳೊಂದಿಗೆ ಹೆಚ್ಚು ಸಮಯ
ಕಳೆಯಲಿದ್ದೀರಿ. ಆರೋಗ್ಯದಲ್ಲಿ ಪ್ರಗತಿ
ಸಾಧ್ಯವಾಗಲಿದೆ. ಮಾತಿಗಿಂತ ಮೌನ ಶ್ರೇಷ್ಠ.

ಕುಂಭ
ಕಡಿಮೆ ದುಡ್ಡಿನಲ್ಲಿಯೇ ಹೆಚ್ಚು ವಸ್ತುಗಳನ್ನು
ಕೊಳ್ಳಲಿದ್ದೀರಿ. ನಿಮ್ಮ ಮಾತಿನಿಂದ
ಆತ್ಮೀಯರು ಸಂತೋಷಗೊಳ್ಳಲಿದ್ದಾರೆ.

ಮೀನ 
ಊಟದ ವಿಚಾರದಲ್ಲಿ ಮಿತಿ ಇರಲಿ. ಹೊಸ
ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾದ
ಅನಿವಾರ್ಯತೆ ಸೃಷ್ಟಿಯಾಗಲಿದೆ. ಶುಭ ಫಲ.