ಈ ರಾಶಿಯವರಿಗೆ ಹೆಚ್ಚಿನ ಲಾಭ ದೊರೆಯಲಿದೆ

ಮೇಷ
ದಾರಿ ಕಾಣದೇ ನಿಂತಿರುವಾಗ ಸ್ನೇಹಿತರು
ಜೊತೆಯಾಗಲಿದ್ದಾರೆ. ಬೈಕ್ ಪ್ರಯಾಣದಿಂದ
ಸಾಧ್ಯವಾದಷ್ಟು ದೂರ ಇರುವುದು ಒಳಿತು.

ವೃಷಭ
ದೊಡ್ಡ ಸೇವಾ ಕಾರ್ಯದಲ್ಲಿ ನೀವೂ
ಭಾಗಿಯಾಗಲಿದ್ದೀರಿ. ನೀವು ಇರುವ ಸ್ಥಳದ
ಮಹಿಮೆಯನ್ನು ಅರಿತು ಮಾತನಾಡಿ.

ಮಿಥುನ
ಹಿಂದಿನ ಉದ್ಯೋಗಕ್ಕೆ ಮರಳುವಿರಿ. ಸಣ್ಣ
ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗಲಿದೆ.
ದೂರದ ಪ್ರಯಾಣಕ್ಕಾಗಿ ಸಿದ್ಧರಾಗುವಿರಿ.

ಕಟಕ
ಹಣಕಾಸಿನ ವ್ಯವಹಾರದಲ್ಲಿ ಚೌಕಾಶಿ
ಹೆಚ್ಚಾಗಲಿದೆ. ಕಲಾ ವಲಯದಲ್ಲಿ
ಇರುವವರಿಗೆ ಹೆಚ್ಚಿನ ಅವಕಾಶಗಳು ಬರಲಿವೆ.

ಸಿಂಹ
ಸ್ವಾರ್ಥಿಗಳ ನಡುವಲ್ಲಿ ನಿಮ್ಮ ಸೇವೆ
ಗೌಣವಾಗುವ ಸಾಧ್ಯತೆ ಇದೆ. ನಯ
ವಂಚಕರಿಂದ ಅಂತರ ಕಾಯ್ದುಕೊಳಿ

ಕನ್ಯಾ
ದುರ್ಬಲರ ಮೇಲೆ ವಿಶೇಷ ಮಮಕಾರ
ಉಂಟಾಗಲಿದೆ. ಮತ್ತೊಬ್ಬರು ನಿಮ್ಮತ್ತ ಬೆರಳು
ತೋರಿಸುವಂತೆ ಮಾಡಿಕೊಳ್ಳದಿರಿ.

ತುಲಾ 
ಮನಸ್ಸಿದ್ದರೆ ಮಹಾದೇವ ಎನ್ನುವ ಮಾತಿನ
ಮೇಲೆ ನಂಬಿಕೆ ಇರಲಿ. ಕೆಲಸದಲ್ಲಿ ಪ್ರಗತಿ
ಸಾಧ್ಯವಾಗಲಿದೆ. ಲಾಭ ಹೆಚ್ಚಳವಾಗಲಿದೆ.

ವೃಶ್ಚಿಕ
ಇತಿಹಾಸದಲ್ಲಿ ವಿಶೇಷ ಆಸಕ್ತಿ ಬೆಳೆಯಲಿದೆ.
ಮಾಡದ ಸೇವೆಗೆ ಗೌರವ ಪಡೆದುಕೊಳ್ಳವ
ಕೆಲಸ ಮಾಡದಿರಿ. ಕಠಿಣ ಶ್ರಮದ ಅಗತ್ಯವಿದೆ. 

ಧನುಸ್ಸು
ಕಳೆದು ಹೋದ ವಸ್ತುವಿನ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ನೀವಿಂದು ಮಾಡುವ
ಕಾರ್ಯ ಮುಂದಿನ ದಿನದಲ್ಲಿ ಫಲ ನೀಡಲಿದೆ.

ಮಕರ
ಎಲ್ಲವೂ ನನ್ನಿಂದಲೇ ಆಗುತ್ತಿದೆ ಎನ್ನುವ ಅಹಂ
ಬೇಡ. ಶಾಂತ ಮನಸ್ಸಿನಿಂದ ಇಡೀ ದಿನ ಇರುವ
ಪ್ರಯತ್ನ ಮಾಡಲಿದ್ದೀರಿ. ನೆಮ್ಮದಿ ಇದೆ.

ಕುಂಭ
ಕಲ್ಲು ಮುಳ್ಳುಗಳಿಗೆ ಅಂಜುವುದು ಬೇಡ.
ಮನಸ್ಸಿನ ಮೇಲೆ ಹಿಡಿತವಿರಲಿ. ಕೆಲಸದ
ಒತ್ತಡ ಹೆಚ್ಚಾಗಲಿದೆ. ತಂದೆಯ ಮಾತು ಕೇಳಿ.

ಮೀನ 
ನಿಮ್ಮನ್ನು ಹೆಚ್ಚಾಗಿ ಇಷ್ಟಪಡುವ ಜೀವಗಳು
ಇಂದು ಹತ್ತಿರವಾಗಲಿವೆ. ನಿಮ್ಮ
ಸಾಮರ್ಥ್ಯವನ್ನು ವ್ಯರ್ಥ ಮಾಡಿಕೊಳ್ಳಿದಿರಿ.