ನಿಮಗಿಂದು ನೆಮ್ಮದಿಯ ದಿನವಾಗಿರಲಿದೆ

ಮೇಷ
ಮುಖ ಗಂಟಿಕ್ಕಿಕೊಳ್ಳುವುದರಿಂದ ಏನೂ
ಪ್ರಯೋಜನವಿಲ್ಲ. ನಾಲ್ಕು ಒಳ್ಳೆಯ ಮಾತು,
ಒಂದು ಚೆಂದದ ನಗು ನಿಮ್ಮ ವ್ಯಕ್ತಿತ್ವ ಹೆಚ್ಚಿಸಲಿದೆ

ವೃಷಭ
ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡು
ವಿರಿ. ಅಂದುಕೊಂಡ ಕಾರ್ಯಗಳ ಪ್ರಗತಿ
ಕುಂಟಿತವಾಗಲಿದೆ. ಶುಭಫಲಕ್ಕೆ ಕಾಯಬೇಕು.

ಮಿಥುನ
ಸಂಜೆ ವೇಳೆಗೆ ಹಿಡಿದ ಕೆಲಸ ಒಂದು ಹಂತಕ್ಕೆ
ತಲುಪಲಿದೆ. ತಂದೆಯ ಆರೋಗ್ಯದಲ್ಲಿ
ಚೇತರಿಕೆ. ಹೆಚ್ಚು ಮಾತನಾಡುವುದು ಬೇಡ.

ಕಟಕ
ಸಮಯ ಸಂದರ್ಭವನ್ನು ನೋಡಿಕೊಂಡು
ನಾಚೂಕಾಗಿ ವ್ಯವಹಾರ ಮಾಡಿ, ಒರಟು
ಮಾತಿನಿಂದ ಏನೂ ಮಾಡಲು ಸಾಧ್ಯವಿಲ್ಲ.

ಸಿಂಹ
ಹತ್ತಿರದ ಸ್ನೇಹಿತರಿಂದಲೇ ಹೆಚ್ಚು ನೋವು
ಅನುಭವಿಸಲಿದ್ದೀರಿ. ಬೇರೆಯವರ ಮಾತಿಗೆ
ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ

ಕನ್ಯಾ
ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರು
ವವರಿಗೆ ಹೆಚ್ಚು ಅವಕಾಶಗಳು ದೊರೆಯಲಿವೆ.
ಒಳ್ಳೆಯ ಮನಸ್ಸಿನಿಂದ ಹಿಡಿದ ಕೆಲಸ ಮಾಡಿ.

ತುಲಾ 
ನಿಮ್ಮ ಮನಸ್ಸಿಗೆ ಇಷ್ಟವಾದ ಕೆಲಸವನ್ನು
ಯಾವುದೇ ಅಂಜಿಕೆ ಇಲ್ಲದೇ ಮಾಡಿ ಮುಗಿಸಿ.
ತೊಡಕುಗಳು ಬಂದರೂ ಶೀಘ್ರ ನಿವಾರಣೆ.

ವೃಶ್ಚಿಕ
ಸಾಧಕರನ್ನು ಗುರುತಿಸಿ ಗೌರವ ನೀಡುವಿರಿ.
ಹೆಚ್ಚು ಓಡಾಡಬೇಕಾದ ಅನಿವಾರ್ಯತೆ
ಸೃಷ್ಟಿಯಾಗಲಿದೆ. ನಿಮ್ಮ ಕಾರ್ಯಕ್ಕೆ ಫಲವಿದೆ. 

ಧನುಸ್ಸು
ನಿಮ್ಮ ಗುಣಗಳೇ ನಿಮ್ಮನ್ನು ಮೇಲು ಮಟ್ಟಕ್ಕೆ
ಕೊಂಡೊಯ್ಯಲಿವೆ. ಚಾಡಿ ಮಾತುಗಳಿಗೆ
ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.

ಮಕರ
ನೀವು ಅಂದುಕೊಂಡಂತೆಯೇ ಎಲ್ಲವೂ
ಆಗಬೇಕು ಎನ್ನುವ ಧೋರಣೆ ಬೇಡ.
ಬೇರೆಯವರ ಅಭಿಪ್ರಾಯಕ್ಕೂ ಬೆಲೆ ನೀಡಿ.

ಕುಂಭ
ಮನೆಯ ನೆಮ್ಮದಿ ಹೆಚ್ಚಾಗಲಿದೆ. ದಿನಪೂರ್ತಿ
ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಲಿದ್ದೀರಿ.
ವ್ಯವಹಾರದಲ್ಲಿ ಆತುರ ಬೇಡವೇ ಬೇಡ.

ಮೀನ 
ಗುರು ಬಲ ಹೆಚ್ಚಾಗಲಿದೆ. ನಿಮ್ಮ ಉತ್ಸಾಹಕ್ಕೆ
ತಕ್ಕುದಾದ ಕೆಲಸ ದೊರೆಯಲಿದೆ. ನಾಯ
ಕತ್ವದ ಗುಣದಿಂದ ಖ್ಯಾತಿ ಹೆಚ್ಚಲಿದೆ.