ಈ ದಿನ ಈ ರಾಶಿಯವರಿಗೆ ಅತ್ಯಂತ ಶುಭದಾಯಕ ದಿನ

ಮೇಷ
ಮನೆಯಲ್ಲಿ ದವಸ ಧಾನ್ಯಗಳು ಹೆಚ್ಚಾಗಲಿವೆ.
ಮಾವನಿಂದ ಹಣಕಾಸಿನ ಸಹಕಾರ
ದೊರೆಯಲಿದೆ. ಚಿತ್ರಕಾರರಿಗೆ ಶುಭ ದಿನ.

ವೃಷಭ
ಬೆಳಗ್ಗಿನಿಂದಲೇ ಕೆಲಸಗಳು ಹೆಚ್ಚಾಗಲಿವೆ.
ಮಧ್ಯಾಹ್ನದ ವೇಳೆಗೆ ಅಪರಿಚಿತರ ಭೇಟಿ.
ಗೃಹಿಣಿಯರಿಗೆ ಸಂಜೆ ವೇಳೆಗೆ ಶುಭ ಸುದ್ದಿ.

ಮಿಥುನ
ಹೆಚ್ಚು ಉತ್ಸಾಹದಿಂದ ಇರುವಿರಿ. ಸಂಜೆ
ವೇಳೆಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ.
ಸಂಬಂಧಗಳಲ್ಲಿ ಮುನಿಸು ಉಂಟಾಗುತ್ತದೆ.

ಕಟಕ
ಬಂಧುಗಳ ಸಹಕಾರದಿಂದ ಸಮಸ್ಯೆಗೆ
ಪರಿಹಾರ ಕಂಡುಕೊಳ್ಳಿ. ಹೆಚ್ಚು ಚಿಂತಿಸುವ
ಅಗತ್ಯ ಬಂದೀತು. ಖರ್ಚಿನಲ್ಲಿ ಹಿಡಿತವಿರಲಿ.

ಸಿಂಹ
ಅಪ್ಪ, ಅಮ್ಮನ ಹಣದಿಂದ ಹೊಸ ವಾಹನ
ಖರೀದಿ ಮಾಡಲಿದ್ದೀರಿ. ನಿಮ್ಮ ಕೆಲಸಕ್ಕೆ ತಕ್ಕ
ಪ್ರತಿಫಲ ರಾತ್ರಿ ವೇಳೆಗೆ ದೊರೆಯಲಿ

ಕನ್ಯಾ
ನೀವು ತುಂಬಾ ಇಷ್ಟಪಡುವ ಸ್ಥಳಕ್ಕೆ ಭೇಟಿ
ನೀಡಲಿದ್ದೀರಿ. ಸ್ವಾಭಿಮಾಕ್ಕೆ ತಕ್ಕ ಸ್ಥಾನಮಾನ
ದೊರೆಯಲಿದೆ. ಖ್ಯಾತಿ ಹೆಚ್ಚಲಿದೆ.

ತುಲಾ 
ಮುಗಿದಿರುವ ವಿಚಾರಗಳ ಬಗ್ಗೆ ಹೆಚ್ಚು
ಆಲೋಚನೆ ಮಾಡುವುದು ಬೇಡ.
ತಂದೆ-ತಾಯಿಗಳ ಸಹಾಯ ಪಡೆದುಕೊಳ್ಳಿ.

ವೃಶ್ಚಿಕ
ಪ್ರಮಾಣ ಪತ್ರಗಳಿಗೆ ಅಲೆಯಬೇಕಾಗ
ಬಹುದು. ನಿಮಗಿಂತೂ ಚಿಕ್ಕ ವಯಸ್ಸಿ
ನವರಿಂದ ಬುದ್ಧಿ ಕಲಿಯಬೇಕಾಗಬಹುದು. 

ಧನುಸ್ಸು
ಗಣ್ಯ ವ್ಯಕ್ತಿಗಳು ಸಂಪರ್ಕಕ್ಕೆ ಬರಲಿದ್ದಾರೆ.
ಜಾಗೃತೆಯಿಂದ ಕೆಲಸ ಕಾರ್ಯ ಮಾಡಿ.
ಹೊಸ ಬಟ್ಟೆ ಕೊಳ್ಳುವ ಅವಕಾಶವಿದೆ.

ಮಕರ
ಬೆಳಿಗ್ಗೆಯೇ ಶುಭ ಸಮಾರಂಭಕ್ಕೆ ತೆರಳುವಿರಿ.
ಸಂಜೆ ವೇಳೆಗೆ ಮುಖ್ಯ ವ್ಯಕ್ತಿಗಳ ಭೇಟಿ.
ಸೂಕ್ತವಾದ ನಿರ್ಧಾರದಿಂದ ಮುಂದೆ ಸಾಗಿ.

ಕುಂಭ
ಅನಾವಶ್ಯಕವಾಗಿ ಸಮಯ ವ್ಯರ್ಥ
ಮಾಡಬೇಡಿ. ಸಹೋದ್ಯೋಗಿಗಳ ಜೊತೆಗೆ
ಹೆಚ್ಚು ಅನ್ಯೋನ್ಯತೆ ಹೆಚ್ಚಾಗಲಿದೆ.

ಮೀನ 
ಗೆಳೆಯರೊಂದಿಗೆ ಸೇರಿ ಟ್ರಿಪ್ ಕೈಗೊಳ್ಳುವಿರಿ.
ಹಣಕಾಸು ಓಡಾಟ ಹೆಚ್ಚಾಗಲಿದೆ. ಪ್ರಗತಿಯ
ಹಾದಿಯಲ್ಲಿ ಸಾಗುವಿರಿ.