ಮೇಷ : ಪ್ರಾಮಾಣಿಕ ಪ್ರಯತ್ನಕ್ಕೆ ಎಂದಿಗೂ ಸೋಲಿಲ್ಲ. ಆತ್ಮೀಯರಿಗೆ ನೋವು ನೀಡದಿರಿ. 

ವೃಷಭ : ನೀವು ಮಾಡಿದ ಕೆಲಸಕ್ಕೆ ಎಲ್ಲರಿಂದಲೂ ಪ್ರಶಂಸೆ ದೊರೆಯಲಿದೆ. ಪದೇ ಪದೇ ಒಂದೇ ತಪ್ಪನ್ನು ಮಾಡುವುದು ಬೇಡ

ಮಿಥುನ : ನಿಶ್ಚಿಂತೆಯಿಂದ ಮುಂದೆ ಸಾಗಿದರೆ ಮಾತ್ರ ದಿನಾಂತ್ಯಕ್ಕೆ ಹಿಡಿದ ಕೆಲಸ ಪೂರ್ಣಗೊಳ್ಳಲಿದೆ. 

ಕಟಕ : ಆರೋಗ್ಯದಲ್ಲಿ ಚೇತರಿಕೆ ಕಂದು ಬಂದರೂ ಆಯಾಸ. ಬೇಡದ ವಿಚಾರಗಳಿಗೆ ಸೊಪ್ಪು ಹಾಕದಿರಿ

ಸಿಂಹ : ಸಹೋದ್ಯೋಗಿಗಳಿಂದ ಆರ್ಥಿಕವಾಗಿ ಸಹಾಯವಾಗಲಿದೆ. ಸಣ್ಣ ಬೇಸರ ದಿನವಿಡೀ ಕಾಡಲಿದೆ. ಸಂಜೆ ವೇಳೆಗೆ ನಿರಾಳ

ಕನ್ಯಾ : ಅಳೆದು ತೂಗಿ ನಿರ್ಧಾರ ಕೈಗೊಳ್ಳಿ. ಹಣ ಕೊಟ್ಟು ಕೆಟ್ಟವನಾಗುವುದಕ್ಕಿಂತ ಕೊಡದೇ ಇರುವುದು ಉತ್ತಮ. ನಿಮ್ಮ ಮಾತಿಗೆ ಬೆಲೆ ಇದೆ. 

ತುಲಾ : ಮೊಬೈಲ್ ಸಮಸ್ಯೆಯಿಂದ ಇಡೀ ದಿನ ತಳಮಳ. ವ್ಯಾಪಾರಿ ವರ್ಗಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. ಜಾಗೃತೆ ಮುಖ್ಯ

ವೃಶ್ಚಿಕ : ನಿಮಗೆ ಬೇಡದ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ತೋರುವುದು ತರವಲ್ಲ. ವೃತ್ತಿಯಲ್ಲಿ ಪ್ರಾವಿಣ್ಯತೆ ಸಾಧ್ಯವಾಗಲಿದೆ. ಕೋಪ  ಬೇಡ

ಧನಸ್ಸು : ಮಕ್ಕಳ ಮೇಲೆ ವಿನಾಕಾರಣ ರೇಗುವುದು ಬೇಡ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು.  ಅಂದಾಭಿಮಾನ ಬೇಡ

ಮಕರ : ಮನೆಯವರೊಂದಿಗೆ ಇಡೀ ದಿನ ಕಳೆಯಲಿದ್ದೀರಿ. ಖರ್ಚಿನ ಮೇಲೆ ಹಿಡಿತ ಸಾಧಿಸಿ. 

ಕುಂಭ : ಪುಕ್ಕಟೆ ಸಲಹೆಗಳಿಂದ ಸಾಧ್ಯವಾದಷ್ಟು ದೂರ ಇರುವುದು ಒಳಿತು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿ

ಮೀನ : ನಾಳಿನ ಅನುಕೂಲಗಳಿಗೆ ಇಂದಿನ ದಿನವನ್ನು ಬಲಿ ಕೊಡುವುದು ಬೇಡ. ನಿಮ್ಮಷ್ಟಕ್ಕೆ  ಇದ್ದು ಬಿಡಿ. ಸಲಹೆ ಬೇಡ