ಮೇಷ
ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದ ಸ್ನೇಹಿತರಿಗೆ ಇಂದು
ನೀವು ನೆರವಾಗಲಿದ್ದೀರಿ. ಆತುರ ಬೀಳದೇ
ನಿಮ್ಮ ಪಾಲಿನ ಕೆಲಸಗಳನ್ನು ಮಾಡಿ ಮುಗಿಸಿ.

ವೃಷಭ
ತಂದೆ ತಾಯಿಯ ಕೈಗೊಂಬೆಯಂತೆ ನಡೆದು
ಕೊಳ್ಳಲಿದ್ದೀರಿ. ಉತ್ತಮ ಆರೋಗ್ಯಕ್ಕಾಗಿ ಸ್ವಲ್ಪ
ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಮಿಥುನ
ವಾದ ಮಾಡುತ್ತಾ ಕೂರುವುದರಿಂದ
ಯಾವುದೇ ಪ್ರಯೋಜನ ಇಲ್ಲ. ಆತ್ಮೀಯ
ಸ್ನೇಹಿತರಿಂದ ನಿಮಗೆ ನೆರವು ದೊರೆಯಲಿದೆ.

ಕಟಕ
ಮುಂದಿನ ದೊಡ್ಡ ಕಾರ್ಯಗಳಿಗೆ ಇಂದಿನಿಂದ
ಸಣ್ಣ ಸಣ್ಣ ಪ್ರಯತ್ನವನ್ನು ಆರಂಭಿಸಿ. ಈ ದಿನ
ನಿಮ್ಮ ಪಾಲಿಗೆ ಶುಭದಾಯಕವಾಗಲಿದೆ.

ಕುಟುಂಬಸ್ಥರು ನಿಮ್ಮ ಪರವಾಗಿ ನಿಲ್ಲಲಿದ್ದಾರೆ.
ಒಳಿತು ಮಾಡುವಿರಿ. ಸಂಕಷ್ಟದ ಸಂದರ್ಭ
ವನ್ನು ಚೆನ್ನಾಗಿ ನಿರ್ವಹಿಸಲಿದ್ದೀರಿ.

ಕನ್ಯಾ
ಹಣದಿಂದಲೇ ಎಲ್ಲವೂ ಆಗುವುದಿಲ್ಲ.
ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು
ಎನ್ನುವುದನ್ನು ತಿಳಿದುಕೊಳ್ಳಿ. ಚಿಂತೆ ಬೇಡ.

ಗಾಳಿ ಮಾತುಗಳಿಗೆ ನಿಮ್ಮ ಬುದ್ಧಿಯನ್ನು
ಕೊಡುವುದು ಬೇಡ. ಬಂಧುಗಳ ಬಗ್ಗೆ ಕನಿಕರ
ತುಲಾ ಹುಟ್ಟಲಿದೆ. ಸಮಯಕ್ಕೆ ಸರಿಯಾಗಿ ನಡೆಯಿರಿ.

ವೃಶ್ಚಿಕ
ಮಿಂಚಿ ಹೋದ ಕಾಲಕ್ಕಾಗಿ ಚಿಂತಿಸುತ್ತಾ
ಕೂರದಿರಿ. ಅಪರಿಚಿತರು ಬಂದು ನಿಮಗೆ
ಸಹಾಯ ಮಾಡಲಿದ್ದಾರೆ. ನೆಮ್ಮದಿ ಹೆಚ್ಚಲಿದೆ. 

ಧನುಸ್ಸು
ಯಾವಾಗ ಮಾತನಾಡಬೇಕು, ಯಾವಾಗ
ಮೌನವಾಗಿ ಇರಬೇಕು ಎನ್ನುವುದನ್ನು
ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಶುಭ ದಿನ.

ಮಕರ
ಬೇರೆಯವರ ನೋವಿಗೆ ನೀವು ಕಣ್ಣೀರು
ಸುರಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ.
ಬದಲಾವಣೆ ಎನ್ನುವುದು ಜಗದ ನಿಯಮ.

ಕುಂಭ
ಯಾವುದೇ ವಿಚಾರವಾದರೂ ಅದರ ಬಗ್ಗೆ
ಸೂಕ್ತವಾಗಿ ತಿಳಿದುಕೊಂಡು ನಂತರ
ಪ್ರತಿಕ್ರಿಯೆ ನೀಡಿ. ಗೌರವ ಹೆಚ್ಚಾಗಲಿದೆ.

ಮೀನ 
ಪಾಲಿಗೆ ಬಂದದ್ದು ಪಂಚಾಮೃತ. ಕಾಲಕಾಲಕ್ಕೆ
ಆಗಬೇಕಾದದ್ದು ಆಗಿಯೇ ಆಗುತ್ತದೆ. ನಿಮ್ಮ
ದಾರಿಯಲ್ಲಿ ನೀವು ಸಾಗುತ್ತಿರಿ. ಶುಭ ಫಲ.