ಈ ರಾಶಿಗೆ ಶುಭ ಫಲ : ಹಣವು ಸುಲಭವಾಗಿ ದೊರೆವುದು

ಮೇಷ
ನಿಮ್ಮದೇ ತಪ್ಪನ್ನು ಇಟ್ಟುಕೊಂಡು ಮತ್ತೊಬ್ಬರ
ವಿರುದ್ಧ ವಾದ ಮಾಡುವುದಕ್ಕೆ ಹೋಗಬೇಡಿ.
ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ವೃಷಭ
ಆತ್ಮೀಯವಾಗಿ ಮಾತನಾಡಿ ಕಾರ್ಯಸಾಧು
ಮಾಡಿಕೊಳ್ಳಲಿದ್ದೀರಿ. ಹೊರಗೆ ಹೋಗುವಾಗ
ಅಗತ್ಯ ವಸ್ತುಗಳನ್ನೆಲ್ಲಾ ಕೊಂಡೊಯ್ಯಿರಿ.

ಮಿಥುನ
ಮತ್ತೊಬ್ಬರಿಂದ ಸಹಾಯವಾಗುತ್ತದೆ ಎನ್ನುವ
ನಿರೀಕ್ಷೆ ಬೇಡ. ನಿಮ್ಮ ಕೆಲಸ ಕಾರ್ಯಗಳನ್ನು
ನೀವು ಮಾಡಿ ಮುಗಿಸಿಕೊಳ್ಳಿ. ಶುಭ ಫಲ.

ಕಟಕ
ಅಸಮರ್ಥರು, ಅಪ್ರಬುದ್ಧರ ಎದುರು ವಾದ
ಮಾಡುವುದಕ್ಕೆ ಹೋಗಬೇಡಿ. ಸಂಬಂಧಗಳಲ್ಲಿ
ಒಡಕು ಕಾಣಿಸಿಕೊಳ್ಳಿದೆ. ಜವಾಬ್ದಾರಿ ಹೆಚ್ಚು.

ಸಿಂಹ
ನಿಮ್ಮಿಂದ ಸಾಧ್ಯವಾದರೆ ನಾಲ್ಕು ಜನಕ್ಕೆ
ಒಳ್ಳೆಯದ್ದು ಮಾಡಿ. ಯಾರಿಗೂ ಕೆಡುಕು
ಬಯಸುವುದು ಬೇಡ. ಆರೋಗ್ಯ ವೃದ್ಧಿ.

ಕನ್ಯಾ
ನಿಮ್ಮ ಗೆಲುವಿಗೆ ಅಡ್ಡಲಾಗಿ ಬರುವ ಸಮಸ್ಯೆ
ಗಳಿಗೆ ಇಂದು ಪರಿಹಾರ ದೊರೆಯಲಿದೆ.
ಸಂಗೀತ ಹೆಚ್ಚಾಗಿ ಕೇಳಿ. ತಾಳ್ಮೆ ಹೆಚ್ಚಲಿದೆ.

ತುಲಾ 
ಮೆಚ್ಚುಗೆ ಗಳಿಸಬೇಕು ಎನ್ನುವ ಕಾರಣಕ್ಕೆ
ಅಧಿಕಪ್ರಸಂಗತನ ಮಾಡುವುದು ಬೇಡ.
ನಿಮ್ಮ ಕಾರ್ಯವೇ ನಿಮ್ಮ ಶಕ್ತಿ ತೋರಲಿ.

ವೃಶ್ಚಿಕ
ಯಾರನ್ನೂ ಕಡೆಗಣಿಸುವುದು ಬೇಡ.
ಸಮಯದಲ್ಲಿ ಹುಲ್ಲು ಕಡ್ಡಿಯೂ ನೆರವಿಗೆ
ಬರುತ್ತದೆ. ಅಧಿಕ ಖರ್ಚಿಗೆ ಮಿತಿ ಹೇರಿ. 

ಧನುಸ್ಸು
ಪ್ರಾಮಾಣಿಕ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಕ್ಕಿಯೇ
ಸಿಕ್ಕುತ್ತದೆ. ಇಡೀ ದಿನ ಉತ್ಸಾಹಿಗಳಂತೆ
ಓಡಾಡಲಿದ್ದೀರಿ. ಟೀಕೆಗೆ ತಲೆಕೆಡಿಸಿಕೊಳ್ಳದಿರಿ.

ಮಕರ
ಸ್ವಂತ ಆಸಕ್ತಿಯಿಂದ ಹೊಸ ಕೆಲಸಗಳನ್ನು
ಕಲಿಯಲಿದ್ದೀರಿ. ತಂದೆಯ ಆರೋಗ್ಯ ಸುಧಾ
ರಣೆ. ಬೆಳಿಗ್ಗೆ ಬಂದ ಕಷ್ಟ ಸಂಜೆಗೆ ಮಾಯ.

ಕುಂಭ
ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರ
ಭೇಟಿಯಾಗಲಿದೆ. ದ್ವಿಚಕ್ರ ವಾಹನ ಚಾಲನೆ
ಮಾಡುವಾಗ ಎಚ್ಚರ ಇರಲಿ. ಶುಭಫಲ.

ಮೀನ 
ಮುಖ್ಯವಾದ ವಿಚಾರಗಳ ಕುರಿಂತಂತೆ ಹೆಚ್ಚು
ಆಲೋಚನೆ ಮಾಡಿ. ನಿಮ್ಮ ಕೆಲಸವನ್ನು
ಅಚ್ಚುಕಟ್ಟಾಗಿ ಮಾಡಲಿದ್ದೀರಿ. ತಾಳ್ಮೆ ಇರಲಿ.