ವೃಷಭ ರಾಶಿಗೆ ಅತ್ಯಧಿಕ ಹಣ ಕೈ ಸೇರಲಿದೆ : ಉಳಿದ ರಾಶಿ?

ಮೇಷ
ದೋಷಗಳ ಕಡೆ ಗಮನ ನೀಡದೇ ಇರುವ
ಸಂತೋಷಗಳನ್ನು ನೆನೆದು ಮುಂದೆ ಸಾಗಿ.
ಆತ್ಮ ಸಂತೋಷಕ್ಕಾಗಿ ಹಾತೊರೆಯಲಿದ್ದೀರಿ.

ವೃಷಭ
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿ
ದ್ದೀರಿ. ನಿಮ್ಮ ಹುದ್ದೆಯೇ ನಿಮ್ಮ ಗೌರವವನ್ನು
ಹೆಚ್ಚಿಸಲಿದೆ. ಹೆಚ್ಚು ಹಣ ಕೈ ಸೇರಲಿದೆ.

ಮಿಥುನ
ನಿಮ್ಮನ್ನು ನಿಂದಿಸಿದ್ದವರೇ ಇಂದು ನಿಮ್ಮನ್ನು
ಹೊಗಳಲಿದ್ದಾರೆ. ಬೇಡದ ವಿಚಾರಗಳಿಗೆ
ಮೂಗು ತೂರಿಸಿಕೊಂಡು ಹೋಗದಿರಿ.

ಕಟಕ
ನಿಮ್ಮ ಕಷ್ಟವೇ ದೊಡ್ಡದು ಎಂದು ಚಿಂತೆ
ಮಾಡುತ್ತಾ ಕೂರುವುದು ಬೇಡ. ನಿಮ್ಮಲ್ಲಿ
ಇರುವ ಶಕ್ತಿಯನ್ನು ಬಳಸಿ ಮುಂದೆ ಸಾಗಿ.

ಸಿಂಹ
ತಪ್ಪು ಮಾಡುವುದು ಸಹಜ. ಆದರೆ ಅದನ್ನೇ
ನೆನೆಯುತ್ತಾ ಕೂರುವುದು ಬೇಡ. ಅಮ್ಮನ
ಸಲಹೆಯಂತೆ ಮುಂದೆ ಸಾಗುವಿರಿ

ಕನ್ಯಾ
ಮತ್ತೊಬ್ಬರಿಗೆ ಪುಕ್ಕಟೆಯಾಗಿ ಸಲಹೆ ನೀಡು
ವುದಕ್ಕೆ ಹೋಗದಿರಿ. ಜವಾಬ್ದಾರಿ ಅರಿತು ಕೆಲಸ
ಮಾಡಲಿದ್ದೀರಿ. ಶ್ರಮ ಹೆಚ್ಚಲಿದೆ. ಶುಭ ಫಲ

ತುಲಾ 
ಸಂಜೆ ವೇಳೆಗೆ ಸಣ್ಣ ಬೇಸರ ಮನಸ್ಸನ್ನು
ಆವರಿಸಿಕೊಳ್ಳಲಿದೆ. ಬಂಧುಗಳ
ಸಹಾಯದಿಂದ ಆರ್ಥಿಕ ಸಮಸ್ಯೆ ನೀಗಲಿದೆ.

ವೃಶ್ಚಿಕ
ಜ್ಞಾನದ ದಾಹ ನಿಮ್ಮನ್ನು ದೊಡ್ಡ ವ್ಯಕ್ತಿಗಳ
ಭೇಟಿ ಮಾಡುವಂತೆ ಮಾಡಲಿದೆ.
ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಸಹಜ. 

ಧನುಸ್ಸು
ತಂದೆಯ ಮಾತಿನಂತೆ ದಿನ ಪೂರ್ತಿ
ನಡೆದುಕೊಳ್ಳಲಿದ್ದೀರಿ. ಸೌಜನ್ಯದ ನಿಮ್ಮ ನಡೆಗೆ
ಮೆಚ್ಚುಗೆ ವ್ಯಕ್ತವಾಗಲಿದೆ. ದಕ್ಷತೆ ಹೆಚ್ಚಲಿದೆ.

ಮಕರ
ಬೆಲೆ ಬಾಳುವ ವಸ್ತುಗಳನ್ನು ಕೊಳ್ಳಲಿದ್ದೀರಿ.
ಶುಭ ಸಮಾರಂಭಕ್ಕೆ ಸೂಕ್ತ ತಯಾರಿಗಳು
ಭರದಿಂದ ಸಾಗಲಿವೆ. ಸಂತೋಷ ಹೆಚ್ಚಲಿದೆ.

ಕುಂಭ
ನಿಮ್ಮ ಹಿಂದಿನ ತಪ್ಪುಗಳು ಇಂದು ನಿಮಗೆ
ಮನವರಿಕೆಯಾಗಲಿವೆ. ಹೆಚ್ಚು ಮಾತನಾಡು
ವುದಕ್ಕಿಂತ ಮೌನವಾಗಿರುವುದು ಒಳಿತು.

ಮೀನ 
ನಿಮ್ಮ ಪಾಲಿನ ಕೆಲಸಗಳನ್ನು ಅಚ್ಚುಕಟ್ಟಾಗಿ
ಮಾಡಿ ಮುಗಿಸಿ. ಹಣಕಾಸಿನ ವ್ಯವಹಾರದಲ್ಲಿ
ಹೆಚ್ಚು ಆಸಕ್ತಿ ವಹಿಸಲಿದ್ದೀರಿ. ಶುಭ ಫಲ.