ಈ ರಾಶಿಗೆ ಶುಭವೊಂದು ಎದುರಾಗಲಿದೆ

ಮೇಷ
ಶುಭ ಸಮಾರಂಭಕ್ಕೆ ಪೂರ್ವ ತಯಾರಿ ಮಾಡಿ
ಕೊಳ್ಳಲಿದ್ದೀರಿ. ನಿಮ್ಮನ್ನು ನಿಂದಿಸಿದವರೇ
ಇಂದು ನಿಮ್ಮ ಮುಂದೆ ಮಂಡಿಯೂರಲಿದ್ದಾರೆ

ವೃಷಭ
ಸಾಧಕರನ್ನು ಭೇಟಿ ಮಾಡಲಿದ್ದೀರಿ. ಹೊಸ
ವಸ್ತುಗಳು ಮನೆ ಸೇರಲಿವೆ. ಹಿಂದಿನ
ಸಾಲಗಳು ವಾಪಸ್ ಆದರೂ ಖರ್ಚು ಹೆಚ್ಚು.

ಮಿಥುನ
ಹಿಡಿದ ಕೆಲಸವನ್ನು ಸಂಜೆ ವೇಳೆಗೆ ಪೂರ್ಣ
ಮಾಡುವಿರಿ. ಮಕ್ಕಳ ಏಳಿಗೆಗೆ ಇಂದು ಸೂಕ್ತ
ನಿರ್ಧಾರ ಕೈಗೊಳ್ಳಲಿದ್ದೀರಿ. ನೆಮ್ಮದಿ ಹೆಚ್ಚಲಿದೆ.

ಕಟಕ
ಮಾತು ಹೆಚ್ಚಾದಷ್ಟೂ ಸಮಸ್ಯೆಗಳು ಹೆಚ್ಚಾಗ
ಲಿವೆ. ಆರ್ಥಿಕವಾಗಿ ಇಂದು ನಿಮಗೆ ಒಳ್ಳೆಯ
ದಿನ. ಬೀದಿ ಬದಿ ವ್ಯಾಪಾರಿಗಳಿಗೆ ಲಾಭ.

ಸಿಂಹ
ಮನೆಯಲ್ಲಿ ಪರಸ್ಪರರ ಬಗ್ಗೆ ಅಭಿಮಾನ
ಹೆಚ್ಚಾಗಲಿದೆ. ವಸ್ತುವಿನ ಮಹತ್ವ ತಿಳಿದು
ಕೊಂಡು ಅದರ ಬಳಕೆ ಮಾಡಿ. ಶುಭ ಫಲ

ಕನ್ಯಾ
ಅತಿಯಾದ ಸಲುಗೆ ಒಳ್ಳೆಯದ್ದಲ್ಲ. ನಿಮ್ಮ
ಪಾಡಿಗೆ ನೀವು ಇದ್ದರೆ ಅದರಿಂದ ನಿಮ್ಮ
ಗೌರವ ಹೆಚ್ಚಾಗಲಿದೆ. ಮಾತಿಗೆ ಮರುಳಾಗದಿರಿ

ತುಲಾ
ಆಪ್ತ ಸ್ನೇಹಿತರ ಭೇಟಿಯಾಗಲಿದ್ದೀರಿ. ಒಡವೆ
ಕೊಳ್ಳುವ ಯೋಗವಿದೆ. ಹುಸಿ ಮಾತುಗಳಿಗೆ
 ತಲೆ ಕೆಡಿಸಿಕೊಳ್ಳದಿರಿ. ಆತ್ಮವಿಶ್ವಾಸ ಹೆಚ್ಚಲಿದೆ.

ವೃಶ್ಚಿಕ
ಭವಿಷ್ಯದ ದೃಷ್ಟಿಯಿಂದ ಉಳಿತಾಯ
ಆರಂಭಿಸಲಿದ್ದೀರಿ. ಮಾತಿಗಿಂತ ಮೌನ ಹೆಚ್ಚು
ಪರಿಣಾಮಕಾರಿ. ಗೊಂದಲ ಬಗೆಹರಿಯಲಿದೆ. 

ಧನುಸ್ಸು
ನಿಮ್ಮ ಶಕ್ತಿಯನ್ನು ನೀವು ಅರಿತುಕೊಂಡು ಕೆಲಸ
ಮಾಡಿ. ಹುಮ್ಮಸ್ಸಿನಲ್ಲಿ ಹೆಚ್ಚು ಜವಾಬ್ದಾರಿ
ತೆಗೆದುಕೊಳ್ಳಬೇಡಿ. ಆದಾಯ ಹೆಚ್ಚಲಿದೆ.

ಮಕರ
ಅಪ್ರಯೋಜಕರ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮದೇ
ನಿರ್ಧಾರಕ್ಕೆ ನೀವು ಬದ್ಧವಾಗಿ ನಡೆದುಕೊಳ್ಳಿ.

ಕುಂಭ
ಹೊಸ ಉತ್ಸಾಹದೊಂದಿಗೆ ಹೊಸ ಕೆಲಸ
ಆರಂಭಿಸಲಿದ್ದೀರಿ. ತಂದೆ ತಾಯಿ ಮಾತಿನಿಂದ
ನೆಮ್ಮದಿ. ಉದ್ಯೋಗ ಬದಲಾವಣೆ ಸಾಧ್ಯತೆ.

ಮೀನ 
ಶುಭ ಸಮಾರಂಭಕ್ಕಾಗಿ ದೂರದ ಊರಿಗೆ
ಪ್ರಯಾಣ. ಖರ್ಚಿನಲ್ಲಿ ಮಿತಿ ಇರಲಿ.
ಸಂಬಂಧಿಗಳ ಕಷ್ಟಕ್ಕೆ ನೆರವಾಗಲಿದ್ದೀರಿ.