ಈ ರಾಶಿಗೆ ಏಳ್ಗೆಯ ದಿನಗಳ ಆರಂಭ

ಮೇಷ
ಸಮಯಕ್ಕೆ ಹೆಚ್ಚು ಮಹತ್ವ ನೀಡಿ. ನಾಳಿನ ಬಗ್ಗೆ
ಹೆಚ್ಚು ಚಿಂತೆ ಮಾಡದೇ ಇಂದು ಅಂದು
ಕೊಂಡಿರುವ ಕೆಲಸವನ್ನು ಮಾಡಿ ಮುಗಿಸಿ.

ವೃಷಭ
ಮತ್ತೊಬ್ಬರ ಏಳಿಗೆಯಲ್ಲಿ ನಿಮ್ಮ ಪಾತ್ರ
ಹೆಚ್ಚಾಗಲಿದೆ. ಯಾವುದೇ ಕಾರಣಕ್ಕೂ ಆತ್ಮ
ವಿಶ್ವಾಸ ಕಳೆದುಕೊಳ್ಳದಿರಿ. ಸಂತಸ ಹೆಚ್ಚಲಿದೆ.

ಮಿಥುನ
ಇರುವುದರಲ್ಲೇ ತೃಪ್ತಿ ಹೊಂದುವ ಮನಸ್ಥಿತಿ
ನಿಮ್ಮದು. ಗಣಿತದಲ್ಲಿ ಹೆಚ್ಚು ಆಸಕ್ತಿ
ಉಂಟಾಗಲಿದೆ. ವ್ಯವಹಾರ ಲಾಭದಾಯಕ.

ಕಟಕ
ಎಲ್ಲವನ್ನೂ ಹಣದಿಂದಲೇ ಅಳೆಯುವುದಕ್ಕೆ
ಹೋಗದಿರಿ. ನಿಮ್ಮ ಕಷ್ಟಕ್ಕೆ ಸಹಾಯ ಮಾಡುವ
ಕೈಗಳ ಸಂಖ್ಯೆ ಹೆಚ್ಚಾಗಲಿದೆ. ಸಂಜೆಗೆ ಸಂತಸ.

ಸಿಂಹ
ಏಕಾಂತವಾಗಿರಲು ಬಯಸುವಿರಿ. ನಿಮ್ಮ
ದಾರಿಯಲ್ಲಿ ನೀವು ಸಾಗುತ್ತಿರಿ. ಹಿಂದಿನ
ಕಷ್ಟಗಳನ್ನು ಇಂದು ನೆನೆಯುವುದು ಬೇಡ. 

ಕನ್ಯಾ
ಸಂಭ್ರಮದ ನಡುವಲ್ಲೂ ಸಣ್ಣ ನೋವು
ನಿಮ್ಮನಾವರಿಸಲಿದೆ. ಚುಚ್ಚು ಮಾತುಗಳಿಗೆ
ಕಿವಿಯಾಗದಿರಿ. ಆತ್ಮ ಸ್ಥೈರ್ಯ ಹೆಚ್ಚಲಿದೆ.

ತುಲಾ 
ಬೇಡದ ವಿಚಾರಗಳಿಗೆ ಹೆಚ್ಚು ಸಮಯ
ಕಳೆದುಹೋಗಲಿದೆ. ದುಂದು ವೆಚ್ಚಕ್ಕೆ
ಕಡಿವಾಣ ಹಾಕಿಕೊಳ್ಳಲಿದ್ದೀರಿ. ತಾಳ್ಮೆ ಮುಖ್ಯ.

ವೃಶ್ಚಿಕ
ಕೆಲಸ ಕಾರ್ಯದ ನಿಮಿತ್ತ ಅಪರಿಚಿತ ಸ್ಥಳಕ್ಕೆ
ಭೇಟಿ ನೀಡಲಿದ್ದೀರಿ. ಸ್ತ್ರೀಯರಿಗೆ ಆರೋಗ್ಯ
ಸಂಬಂಧಿ ತೊಂದರೆಗಳು ನಿವಾರಣೆಯಾಗಲಿವೆ 

ಧನುಸ್ಸು
ಕೈಗೆತ್ತಿಕೊಂಡ ಕೆಲಸವೆಲ್ಲವೂ ಒಳ್ಳೆಯ ಫಲ
ನೀಡಲಿವೆ. ಹೊಸ ತಯಾರಿ ಯೊಂದಿಗೆ
ಭವಿಷ್ಯದ ಯೋಚನೆ ರೂಪಿಸಲಿದ್ದೀರಿ.

ಮಕರ
ದುಡುಕಿನಿಂದ ಏನೂ ಪ್ರಯೋಜನವಿಲ್ಲ
ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
ನಿಮ್ಮ ಆತ್ಮೀಯರಿಗೆ ಸಹಾಯ ಮಾಡುವಿರಿ.

ಕುಂಭ
ಗುರಿ ನಿರ್ಧರಿಸಿಕೊಂಡು ಕೆಲಸ ಪ್ರಾರಂಭಿಸಿ.
ನಾಳೆಗಾಗಿ ಕಾಯುವುದು ಬೇಡ. ಮಕ್ಕಳ
ಆರೋಗ್ಯದಲ್ಲಿ ಪ್ರಗತಿ ಕಂಡುಬರಲಿದೆ.

ಮೀನ 
ನಿಮ್ಮ ಕೆಲಸಕ್ಕೆ ಸ್ನೇಹಿತರು, ಹಿತೈಷಿಗಳಿಂದ
ಮೆಚ್ಚುಗೆ ದೊರೆಯಲಿದೆ. ಪೊಳ್ಳು
ಭರವಸೆಗಳನ್ನು ಅತಿಯಾಗಿ ನಂಬದಿರಿ.