ಒಂದು ರಾಶಿಗೆ ಸಂಜೆ ವೇಳೆ ಶುಭ ಎದುರಾಗಲಿದೆ : ಉಳಿದ ರಾಶಿಗೆ ಏನು ಫಲ?

ಮೇಷ
ಬೆಳಿಗ್ಗೆ ಇದ್ದ ತಲೆ ನೋವುಗಳೆಲ್ಲಾ ಸಂಜೆ
ವೇಳೆಗೆ ಮಾಯವಾಗಲಿವೆ. ಎಲ್ಲರೊಂದಿಗೂ
ವಿಶ್ವಾಸದಿಂದ ಇರಲಿದ್ದೀರಿ. ಶುಭ ಫಲ.

ವೃಷಭ
ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದು
ಬೇಡ. ಶುದ್ಧ ಮನಸ್ಸಿನಿಂದ ಶುದ್ಧವಾದ
ಕಾರ್ಯವೇ ನಡೆಯುತ್ತದೆ. ಚಿಂತೆ ಬೇಡ.

ಮಿಥುನ
ಅಗತ್ಯ ವಸ್ತುಗಳ ಖರೀದಿಗೆ ಮೊದಲ ಆದ್ಯತೆ
ನೀಡಿ. ಇಂದು ಹಣವಿದೆ ಎಂದು ದುಂದು ವೆಚ್ಚ
ಮಾಡುವುದು ಬೇಡ. ಉಳಿತಾಯವಿರಲಿ.

ಕಟಕ
ಸಾಕಷ್ಟು ಕೆಲಸದ ನಡುವಲ್ಲೂ ಸ್ನೇಹಿತರೊಂದಿಗೆ
ಸಮಯ ಕಳೆಯಲಿದ್ದೀರಿ. ಹೊಸ ಮನೆಯ
ಕೆಲಸ ಕಾರ್ಯದಲ್ಲಿ ದಿನ ಕಳೆಯಲಿದ್ದೀರಿ.

ಸಿಂಹ
ಶುಭ ಕಾರ್ಯಗಳನ್ನು ಮುಂದೂಡುವುದು
ಬೇಡ. ಅಂದುಕೊಂಡು ಹಾಗೆ ಸುಮ್ಮನೆ ಇದ್ದು
ಬಿಡಬೇಡಿ. ಯಾರೊಂದಿಗೂ ಮುನಿಸು ಬೇಡ

ಕನ್ಯಾ
ಒಳ್ಳೆಯದು ಎಲ್ಲಿಂದಾದರೂ ಬರಲಿ. ಅದನ್ನು
ಸ್ವೀಕಾರ ಮಾಡಿ. ಗೆಳೆಯರ ನೋವಿಗೆ ನಿಮ್ಮ
ಮಾತು ಕಾಣರವಾಗದಿರಲಿ. ಎಚ್ಚರ ವಹಿಸಿ.

ತುಲಾ 
ಸ್ನೇಹಿತರ ತಪ್ಪುಗಳನ್ನೇ ಗುರುತಿಸುವುದರ
ಬದಲಿಗೆ ಅವರ ಒಳ್ಳೆಯತನಗಳನ್ನೂ
ಗುರುತಿಸಿ. ಮಾತಿನಲ್ಲಿ ಹಿಡಿತವಿರಲಿ.

ವೃಶ್ಚಿಕ
ಕೋರ್ಟ್, ಕಚೇರಿ ವ್ಯವಹಾರಕ್ಕೆ ಮುಕ್ತಿ
ದೊರೆಯಲಿದೆ. ಹೊಸ ಉತ್ಸಾಹದಿಂದ
ಮುಂದೆ ಸಾಗಲಿದ್ದೀರಿ. ಮನಸ್ಸಿಗೆ ನೆಮ್ಮದಿ. 

ಧನುಸ್ಸು
ಆರಂಭದಲ್ಲಿ ವೇಗ ಬೇಡ. ಅಂತ್ಯದಲ್ಲಿ ಆಲಸ್ಯ
ಬೇಡ. ಎಲ್ಲಾ ಕಾರ್ಯಗಳನ್ನೂ ಸಮಚಿತ್ತ
ದಿಂದ ಮಾಡಿ. ಗೆಲುವು ದೊರೆಯಲಿದೆ.

ಮಕರ
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ
ಇರುವುದು ಒಳಿತು. ಅನಾವಶ್ಯಕ
ಖರ್ಚುಗಳಿಗೆ ಕಡಿವಾಣ ಹಾಕಿ. ಶುಭ ಫಲ.

ಕುಂಭ
ನಿಮ್ಮ ಮೇಲೆ ಬರುವ ಆರೋಪಗಳಿಗೆ ಉತ್ತರ
ಕೊಡುತ್ತಾ ಕೂರುವ ಬದಲಿಗೆ ಒಳ್ಳೆಯ
ದಾರಿಯಲ್ಲಿ ಮುಂದೆ ಸಾಗಿ. ಅದೇ ಉತ್ತರ.

ಮೀನ 
ದಾರಿ ತುಂಬಾ ದೂರ ಇದೆ ಎಂದು ಸುಮ್ಮನೆ
ಕೂರುವುದು ಬೇಡ. ಪುಟ್ಟ ಹೆಜ್ಜೆಗಳಿಂದಲೇ
ದೂರದ ಗುರಿಯನ್ನು ತಲುಪಿಬಿಡಬಹುದು.